ಬಾಳಿಲ: ವೈದ್ಯರ ನಡೆ-ಹಳ್ಳಿ ಕಡೆ ಅಭಿಯಾನ

ಸುಳ್ಯ, ಜೂ.೫- ಕೋವಿಡ್ ಸೋಂಕು ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ವೈದ್ಯರ ನಡೆ ಹಳ್ಳಿ ಕಡೆ’ ವಿನೂತನ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿದ್ದು ಬಾಳಿಲ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ವೈದ್ಯರು ವಿವಿಧ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು. ಡಾ.ಗೌರಿಶಂಕರ, ಡಾ.ಪ್ರತಿಭಾ, ಡಾ.ಅಫ್ ಜಲ್ , ಆರೋಗ್ಯ ಕಾರ್ಯಕರ್ತೆಯರು ಬಾಳಿಲ ಮತ್ತು ಮುಪ್ಪೇರ್ಯ ಗ್ರಾಮಗಳ ಮನೆ ಭೇಟಿ ನೀಡಿ ಕೋವಿಡ್, ಡೆಂಗ್ಯೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗದ ಪರೀಕ್ಷೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಕೆ, ಬಾಳಿಲ ಆರೋಗ್ಯ ಸಹಾಯಕಿಯರಾದ ರೇಖಾ, ಸವಿತಾ, ಲ್ಯಾಬ್ ಟೆಕ್ನೀಷಿಯನ್ ನೀಲಾವತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಕಾರ್ಯದರ್ಶಿ ಜಯಶೀಲ ರೈ, ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.