ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆನಗರದ ಕೃಷ್ಣ ಮಂದಿರದಲ್ಲಿ ಸಂಭ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.22: ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ  ಅಂಗವಾಗಿ ನಗರದ  ರಾಯಲ್ ಕಾಲೋನಿಯ ವಿಠ್ಠಲ ಕೃಷ್ಣ ಮಂದಿರದಲ್ಲಿ ವಿಶೇಷ ಪೂಜೆ ಮಾಡಲಾಯಿತು.  ನೈರ್ಮಲ್ಯ ವಿಸರ್ಜನೆ, ಸುಪ್ರಭಾತ,  ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಕೃಷ್ಣಾರತಿ, ಮಹಾಭಿಷೇಕ ಮಾಡಿ ರಾಮ ನಾಮ ಜಪ ಮಾಡುತ್ತ ಪ್ರಸಾದ ವಿತರಣೆ ಮೊದಲಾದವುಗಳ ಮೂಲಕ ಸಂಭ್ರಮಾಚರಣೆ ನಡೆಯಿತು.
ಅಯೋದ್ಯಯಲ್ಲಿ ದೃಶ್ಯಗಳ ವೀಕ್ಷಣೆಗೆ ಲೈವ್ ವ್ಯವಸ್ಥೆ ಮಾಡಲಾಗಿತ್ತು. 
ಬೆಳಿಗ್ಗೆಯಿಂದಲೇ ಮಹಿಳೆಯರು ರಾಮಮಂದಿರದ ರಂಗೋಲಿ ಸೇರಿದಂತೆ ಹಲವು ಬಗೆ ಬಗೆಯ ರಂಗೋಲಿಗಳನ್ನು ಹಾಕುವ ಮೂಲಕ ಇಡೀ ಏರಿಯಾವನ್ನು ಕಲರ್ ಪುಲ್ ಮಾಡಿ  ರಾಮ ಲಲ್ಲಾ  ಪ್ರತಿಷ್ಠಾಪನೆಯ ಸಡಗರದಲ್ಲಿ ತಮ್ಮನ್ನು ತೊಡಗಿಸಿಕೊಂಡಂತೆ ಇತ್ತು.
ಅತ್ತ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಘಳಿಗೆ ವೇಳೆ ಕೃಷ್ಣನಿಗೆ ಮಹಾ ಮಂಗಳಾರತಿ ಮಾಡಿದ್ದಷ್ಟೇ ಅಲ್ಲದೇ ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು.
 ಈ ವೇಳೆ ದೇವಸ್ಥಾನದ ಅಧ್ಯಕ್ಷ  ಪ್ರಕಾಶ ರಾವ್, ಜಿ.ವಿ.‌ಪಟವಾರಿ, ರಘುರಾಮ, ಉದಯ, ಪ್ರಾಣೆಶ್ ರಾಘವೇಂದ್ರ, ವೆಂಕಟೇಶ, ಶೋಭಾರಾಣಿ, ಸುನಿತಾ, ಕವಿತಾ, ಮಮತ, ಹರಿಪ್ರಿಯಾ,ವೇದಾವತಿ, ವೀಣಾ, ಲಕ್ಷ್ಮೀ, ರಮಾ, ವಿಜಯಲಕ್ಷ್ಮೀ ಪೂರ್ಣಿಮಾ, ಸೇರಿದಂತೆ ಇತರರು ಇದ್ದರು.