ಬಾಲ ಭಾರತಿಯಲ್ಲಿ ಶಿಕ್ಷಕರ ದಿನಾಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.05: ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆಟ್ಸ್ ಟ್ರಸ್ಟ್ (ರಿ) ವತಿಯಿಂದ ಬಳ್ಳಾರಿ ನಗರದ ಬಾಲಭಾರತಿ ಶಾಲೆಯಲ್ಲಿ ಶ್ರೀ ದಿವಂಗತ ಮಾಜಿ ರಾಷ್ಟçಪತಿ ಸರ್ವಪಲ್ಲಿ ರಾಧಕೃಷ್ಣ ನವರ 134ನೇ ಹುಟ್ಟು ಹಬ್ಬ ಹಾಗೂ ಶಿಕ್ಷಕರ ದಿನಾಚರಣೆಯ್ನನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮ.ಪಾ.ಸದಸ್ಯರಾದ ಎಸ್.ಮಲ್ಲನಗೌಡರು, ಶ್ರೀ ಸರ್ವಪಲ್ಲಿ ರಾಧಕೃಷ್ಣ ನವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವುದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹೆತ್ತ ತಂದೆ ತಾಯಿಯನ್ನು ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಎಂದು ಮರೆಯಬಾರದು. ಗುರುಗಳ ಬಗ್ಗೆ ಭಕ್ತಿ, ಗೌರವ, ಶ್ರದ್ಧೆಯನ್ನು ಇಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಟ್ರಸ್ಟ್ನ ಅಧ್ಯಕ್ಷರಾದ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ವಹಿಸಿದರು. ಅವರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಸದೃಡ ಸಮಾಜವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಒಬ್ಬ ಶಿಷ್ಯನಿಗೆ ಒಳ್ಳೆಯ ಗುರುಗಳು ಸಿಗುವುದು ಎಷ್ಟು ಮುಖ್ಯವೋ, ಗುರುಗಳಿಗೆ ಒಳ್ಳೆಯ ಶಿಷ್ಯರು ಸಿರುಗುವು ಆಷ್ಟೆ ಮುಖ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರದಲ್ಲಿ ಕಳೆದ 22 ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಉತ್ತಮ ಹೆಸರು ಮಾಡಿದ ಮಹೇಶ್ ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿಂದೂ ಜಾಗರಣೆ ವೇದಿಕೆಯ ಜಿಲ್ಲಾಧ್ಯಕ್ಷರಾದ ಅರ್ಜುನ್ ಪುರೋಹಿತ್ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಕರಾಟೆ ವಿದ್ಯಾರ್ಥಿನಿ ದೀಕ್ಷ ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರು. ಶ್ರೇಯಾ ಮತ್ತು ಸೌಮ್ಯಶ್ರೀ ಗುರುಸ್ತೋತ್ರ ಹೇಳಿದರು.
ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನಡೆಯಿತು,