ಬಾಲ ಚೈತನ್ಯ ಶಿಬಿರದ ಸಮಾರೋಪ

ಸಂಜೆವಾಣಿ ವಾರ್ತೆಸಿರುಗುಪ್ಪ, ಮೇ.30: ನಗರದ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ ಜಿಲ್ಲಾಡಳಿತ ಜಿ.ಪಂ.ಬಳ್ಳಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ಮಕ್ಕಳ ವಿಭಾಗ ,ಜಿಲ್ಲಾಸ್ಪತ್ರೆ ಮತ್ತು ಭಾರತೀಯ ಶಿಶುವೈದ್ಯ ತಜ್ಙ ಸಂಘ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಅಪೌಷ್ಟಿಕ ಮಕ್ಕಳ ಆರೈಕೆಗಾಗಿ ಹಮ್ಮಿಕೊಳ್ಳಲಾಗಿದ್ದ ಬಾಲ ಚೈತನ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.ತಾ.ಪಂ ಇ.ಒ ಎಂ ಬಸಪ್ಪ, ಸಿಡಿಪಿಒ ಪ್ರದೀಪ್, ಡಾ.ಈರಣ್ಣ, ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.