ಬಾಲ ಚೈತನ್ಯ ಯೋಜನೆ ರಾಜ್ಯಾದ್ಯಂತ ಜಾರಿಗೆ ಚಿಂತನೆ: ಜೊಲ್ಲೆ

ಬಳ್ಳಾರಿ ಜೂ 11 : ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಅಪೌಷ್ಠಿಕ ಮಕ್ಕಳ ರಕ್ಷಣೆಗೆ ಮಾಡಿರುವ ಬಾಲ ಚೈತನ್ಯ ಯೊಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಅವರು ಇಂದು ಬಳ್ಳಾರಿಯಲ್ಲಿ
ಇಲಾಕೆಯ ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಟಿಯಲ್ಲಿ‌ ಮಾತನಾಡಿದ ಅವರು ರಾಜ್ಯದಲ್ಲಿ ಕೋವಿಡ್
ಮೂರನೇ ಅಲೆಯಿಂದ ಮಕ್ಕಳನ್ನ ಕಾಪಾಡಲು ಎಲ್ಲ ರೀತಿ ಕ್ರಮ ಕೈಗೊಳ್ಳಲಾಗಿದೆ.
ಅಪೌಷ್ಟಿಕ ಮಕ್ಕಳ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಪ್ರತಿ ತಾಲೂಕಿನಲ್ಲೂ ಮಕ್ಕಳಿಗಾಗಿಯೇ ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದು. ಆರು ವರ್ಷದ ಒಳಗಿನ ಮಕ್ಕಳು ಈ ಕೇಂದ್ರದಲ್ಲಿ ದಾಖಲಾದರೆ. ಆ ಮಗುವಿನೊಂದಿಗೆ ಇರುವ ತಾಯಿ ಕೂಡಾ ಜೊತೆಗಿರಲು ಅವಕಾಶ ಮಾಡಿಕೊಡಲಾಗುವುದೆಂದು ಹೇಳಿದರು.

ರಾಜ್ಯದಲ್ಲಿ ಕೋವಿಡ್ ನ ಎರಡನೇ ಅಲೆಯಲ್ಲಿ ತಂದೆ ತಾಯಿಯನ್ನ ಕಳೆದುಕೊಂಡ 35 ಮಕ್ಕಳನ್ನು ಗುರಿತಿಸಲಾಗಿದೆ.
ಆ ಮಕ್ಕಳಿಗೆ ಪ್ರತಿ ತಿಂಗಳು 3ವರೆ ಸಾವಿರ ಹಣ ಸೇರಿ ವಿವಿಧ ಸವಲತ್ತು ಕೊಡಲಾಗುವುದೆಂದು ತಿಳಿಸಿದರು.