ಬಾಲ ಚೈತನ್ಯ ಕಾರ್ಯಕ್ರಮ”


ಸಂಜೆವಾಣಿ ವಾರ್ತೆ
ಸಿರುಗುಪ್ಪ ಮೇ 16 : ಮಕ್ಕಳಿಗೆ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ತಾಯಂದಿರಿಗೆ ಅಪೌಷ್ಟಿಕತೆಯ ಯಿಂದ ಪೌಷ್ಟಿಕತೆಯಡೆಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ನಗರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ನಂಬರ್1 ಹಾಸ್ಟೆಲ್ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ಮಕ್ಕಳ ವಿಭಾಗ, ಜಿಲ್ಲಾಸ್ಪತ್ರೆ ಮತ್ತು ಶಿಸು ವ್ಯೆದ್ಯತಜ್ಞ ಸಂಘ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ  ತಾಲ್ಲೂಕಿನ ವಿವಿಧ ಗ್ರಾಮಗಳ ತಾಯಂದಿರು ತಮ್ಮ ಮಕ್ಕಳ ಪೌಷ್ಟಿಕಾಹಾರದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು 16-5-23 ರಿಂದ 29-5-23ವರೆಗೆ 14ದಿನಗಳ ಕಾಲ ಬಾಲ ಚೈತನ್ಯ ಕಾರ್ಯಕ್ರಮದ ಮೂಲಕ ತಾಲ್ಲೂಕಿನ ಮತ್ತು ಜಿಲ್ಲೆಯ ವ್ಯೆದ್ಯರ ತಂಡದೊಂದಿಗೆ ವಿಶೇಷ ಮಕ್ಕಳ ಅರೈಕೆ ಮತ್ತು ಪೌಷ್ಟಿಕ ಆರೈಕೆ ಕಾರ್ಯಕ್ರಮವನ್ನು ನಡೆಸಿದರು.
 ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಉತ್ತಮ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಪದಾರ್ಥಗಳನ್ನು ಕಾಲಕಾಲಕ್ಕೆ ಸ್ವೀಕರಿಸುವುದರಿಂದ ಪ್ರಸವ ಸಂದರ್ಭದಲ್ಲಿ ಉತ್ತಮ ಆರೋಗ್ಯವಂತ ಶಿಶುಗಳು ಆದ್ದರಿಂದ ತಾಯಂದಿರು ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಸ್ವೀಕರಿಸಬೇಕೆಂದು ಹಾಗೂ ಎತ್ತರಕ್ಕೆ ತಕ್ಕಂತೆ ತೂಕ ಇರಬೇಕೆಂದರೆ ಯಾವ ಪೌಷ್ಟಿಕ ಆಹಾರವನ್ನು ಉಪಯೋಗಿಸಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಡಾ.ಮರಿಯಾಮ್ ಬೀ ತಿಳಿಸಿದರು.
 ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ, ತಾ.ಪಂ ಇ.ಓ ಮಡಗಿನ ಬಸಪ್ಪ, ತಾಲೂಕು ವ್ಯೆದ್ಯಾಧಿಕಾರಿ ಡಾ.ಈರಣ್ಣ, ಸಿ.ಡಿ.ಪಿ.ಒ ಜಲಾಲಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ವರಿ ಹಾಗೂ ಡಾ.ಜಗದೀಶ್, ಡಾ.ದಿವ್ಯೆ, ಬಿ.ಎಚ್.ಇ.ಒ ಕಾಸಿಂ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು, ವಿವಿಧ ಗ್ರಾಮದ ತಾಯಂದಿಯರು ಇದ್ದರು.