
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.29: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣಕ್ಕೆ ಬಾಲಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೆಕ್ಕಲಕೋಟೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ತೆಕ್ಕಲಕೋಟೆ ಇವರು ಭೇಟಿ ನೀಡಿ ತೆಕ್ಕಲಕೋಟೆ ಪಟ್ಟಣದ ಅಂಗಡಿಗಳು ಮತ್ತು ವರ್ಕ್ ಶಾಪ್ ಮತ್ತು ತರಕಾರಿ ಮಾರ್ಕೆಟ್ ಗಳಿಗೆ ಭೇಟಿ ನೀಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಶಾಲೆ ಬಿಟ್ಟು ಅಂಗಡಿಗಳಲ್ಲಿ ಕೆಲಸ ಮಾಡುವವರನ್ನು ಪರಿಶೀಲಿಸಿ ರಕ್ಷಣೆ ಕಾರ್ಯವನ್ನು ನಡೆಸಲಾಯಿತು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲಾ ಕಾರ್ಮಿಕ ಇಲಾಖೆ, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿ ತೆಕ್ಕಲಕೋಟೆ ಪಟ್ಟಣದ ಎಲ್ಲಾ ವಾರ್ಡ್ ಗಳ ಅಂಗಡಿಗಳಿಗೆ ಮತ್ತು ವರ್ಕ್ ಶಾಪ್ ಗಳಿಗೆ ಭೇಟಿ ನೀಡಿ ಒಟ್ಟು 4 ಮಕ್ಕಳನ್ನು ರಕ್ಷಿಸಿ, ಶಾಲೆ ಬಿಟ್ಟು ಕೆಲಸ ಮಾಡುತ್ತಿರುವ ಮಕ್ಕಳ ದಾಖಲೆಗಳನ್ನು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಪುಸ್ತಕಗಳನ್ನು ಕೊಡಿಸಿ ವಿಧ್ಯಾಭ್ಯಾಸ ಮಾಡಲು ಶಾಲೆಗೆ ಪುನ್ಹ ಸೇರಿಸಿದರು.
ಮೌನೇಶ್ ರಾಷ್ರೀಯ ಬಾಲಕಾರ್ಮಿಕ ಇಲಾಖೆ ನಿರ್ದೇಶಕ, ಮಂಜುನಾಥ ಕಾರ್ಮಿಕ ನಿರೀಕ್ಷಕ ಅಧಿಕಾರಿ, ಉಮೇಶ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಸಜನಿ ಮಕ್ಕಳ ಸಹಾಯವಾಣಿ ಅಧಿಕಾರಿ, ರಾಜೇಶ್ವರಿ ಸಮಾಜ ಕಲ್ಯಾಣ ಇಲಾಖೆ ಸಿರುಗುಪ್ಪ, ಗಣೇಶ್ ಬಚ್ ಪನ್ ಬಚಾವೋ ಅಧಿಕಾರಿ, ಗಾದಿಲಿಂಗಪ್ಪ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ,ಮಹಮದ್ ಫಯಾಜ್ CRP ತೆಕ್ಕಲಕೋಟೆ, ಕೆ ಸುರೇಶ್ ಬಾಬು ಕಂದಾಯ ಪರಿವೀಕ್ಷಕ ತೆಕ್ಕಲಕೋಟೆ, ಅನ್ನಪೂರ್ಣಪಟ್ಟಣ ಪಂಚಾಯ್ತಿ ಅಧಿಕಾರಿ ಮತ್ತು ಶಿವರಾಜ ಸಕ್ರಗೌಡ್ರ ಗ್ರಾಮ ಆಡಳಿತ ಅಧಿಕಾರಿಗಳು ತೆಕ್ಕಲಕೋಟೆ ಇದ್ದರು.