ಬಾಲ ಕಾರ್ಮಿಕರ ರಕ್ಷಣೆ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಮಾಲೂರು.ಜು೨೮: ಪಟ್ಟಣದ ಅಂಗಡಿ ಹೋಟೆಲ್ ಗ್ಯಾರೇಜುಗಳ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಮೇಶ್ ಪೊಲೀಸ್ ಇಲಾಖೆ ಸಿಬ್ಬಂದಿ ಮಕ್ಕಳ ಸಹಾಯವಾಣಿ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿ ೧೮ವರ್ಷದೊಳಗಿನ ದುಡಿಯುತ್ತಿರುವ ಮಕ್ಕಳನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿ ಅಂಗಡಿಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಮೂರು ಮಂದಿ ಬಾಲಕರನ್ನು ಕೆ ಜಿ ಎಫ್ ನ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಪೊಲೀಸ್ ಇಲಾಖೆ ಪಟ್ಟಣದ ತರಕಾರಿ ಅಂಗಡಿ ಗ್ಯಾರೇಜ್‌ಗಳು ಎಗ್ ರೈಸ್ ಅಂಗಡಿಗಳು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ೧೮ ವರ್ಷದೊಳಗಿನ ಬಾಲಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಪಡಿಸಿದರು ಮೂರು ಮಕ್ಕಳ ಪೋಷಕರಿಂದ ಪಂಚಾಯಿತಿ ಮುಚ್ಚುಳಿಕೆ ಪಡೆದು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.
ಒಬ್ಬ ಬಾಲಕ ಬಿಹಾರ್ ಮೂಲದವರು ಆಗಿದ್ದು ಪೋಷಕರು ಇಲ್ಲದ ಕಾರಣ ಒಬ್ಬ ಬಾಲಕ ಸೇರಿದಂತೆ ಉಳಿದ ಎರಡು ಮಂದಿ ಪಾಲಕರ ಪೋಷಕರು ಬಾರದ ಕಾರಣ ಕೆ ಜಿ ಎಫ್ ನ ಬಾಲ ಮಂದಿರಕ್ಕೆ ದಾಖಲಿಸಿ ಪೋಷಕರು ಬಂದಲ್ಲಿ ಅವರನ್ನು ಪೋಷಕರ ವಶಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆದಾಳಿಯಲ್ಲಿ ಪೋಲಿಸ್ ಇಲಾಖೆ ಸಿಬ್ಬಂದಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಕ್ಕಳ ಸಹಾಯವಾಣಿ ಸಿಬ್ಬಂದಿ ಭಾಗವಹಿಸಿದ್ದರು.