ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ

ಹರಿಹರ ಜೂ 26; ಕಾರ್ಮಿಕ ನಿರೀಕ್ಷಕರು ತಾಲೂಕು ಆಡಳಿತ ಸಮಾಜ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಆರೋಗ್ಯ ಪೊಲೀಸ್ ಇಲಾಖೆ ಸೇರಿದಂತೆ ತಂಡ ಬಾಲಕಾರ್ಮಿಕರು ಕೆಲಸ ಮಾಡುವ ಅಡ್ಡಗಳಿಗೆ ತೆರಳಿ ಪರಿಶೀಲನೆ ನಡೆಸಿತು.ಸಾರ್ವಜನಿಕರು ಸಂಘ ಸಂಸ್ಥೆಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಬಾಲ ಕಾರ್ಮಿಕ ಮಕ್ಕಳ ರಕ್ಷಣೆ ಕಾಯ್ದೆ ಅನ್ವಯ  ಹೋಟೆಲ್ ಬಾರ್ ಗ್ಯಾರೇಜ್ ಇತರೆ ಸ್ಥಳಗಳಲ್ಲಿತೆರಳಿ ಬಾಲ ಕಾರ್ಮಿಕ  ಮಕ್ಕಳನ್ನು ರಕ್ಷಣೆ ಮಾಡಲಾಗುತ್ತದೆ ಎಂದು ಕಾರ್ಮಿಕ ನಿರೀಕ್ಷಕರಾದ ಕವಿತಾ ಇವರು ಹೇಳಿದರು.ನಗರದ ಪಿಬಿ ರಸ್ತೆಯಲ್ಲಿರುವ ಸಿಟಿ  ಆಟೋಮೊಬೈಲ್ಸ್ ಗ್ಯಾರೇಜ್ ನಲ್ಲಿ ಬಾಲಕಾರ್ಮಿಕ ನೊಬ್ಬ ಕೆಲಸ ಮಾಡುತ್ತಿದ ಸ್ಥಳಕ್ಕೆ ತೆರಳಿ ಬಾಲಕನನ್ನು ದಾವಣಗೆರೆ ಸಿಹಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಯಸ್ಸಿನ ದೃಢೀಕರಿಸಿದ ನಂತರ ಬಾಲಕನನ್ನು  ಪೋಷಕರಿಗೆ ಒಪ್ಪಿಸಿದರು ನಂತರ ಮಾತನಾಡಿದರು ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ಸಮಸ್ಯೆಗಳಲ್ಲಿ ಬಾಲ ಕಾರ್ಮಿಕ ಸಮಸ್ಯೆಯು ಒಂದು ಜ್ವಲಂತ ಸಮಸ್ಯೆಯಾಗಿದೆ. ಭವಿಷ್ಯಕ್ಕೆ ಕಂಟಕವಾಗುವ ಈ ಪದ್ಧತಿಯು  ಹೆಚ್ಚಿನ ಪ್ರಮಾಣದಲ್ಲಿ  ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ದಿನ ಆಚರಿಸುತ್ತೇವೆ. ನಾವು ಅದರ ಬಗ್ಗೆ ಮಾತನಾಡುತ್ತೇವೆ, ನಂತರ ಸುಮ್ಮನೆ ಆಗುತ್ತೇವೆ. ಆದರೆ, ಸಮಾಜ ಬದಲಾವಣೆ ಆಗಬೇಕೆಂಬ ಆಸೆ ಪ್ರತಿಯೊಬ್ಬರಲ್ಲಿಯೂ ಹುಟ್ಟುತ್ತದೆ. ಆದರೆ, ಆ ಬದಲಾವಣೆಯ ಆಸೆಯನ್ನು ಈಡೇರಿಸಿಕೊಳ್ಳುವಷ್ಟು ಶಕ್ತರಾಗಬೇಕು. ಇಂದಿಗೂ ಅನೇಕ ಹಳ್ಳಿಗಳಿಂದ ನಗರಗಳಿಗೆ ಮಕ್ಕಳು ವಲಸೆ ಹೋಗಿ ಗ್ಯಾರೇಜ್, ಹೋಟೆಲ್, ಬಟ್ಟೆ ಅಂಗಡಿ, ಮೈನಿಂಗ್ ಮತ್ತು ಲಾರಿಗಳಲ್ಲಿ ಕ್ಲೀನರ್ಗಳಾಗಿ, ಮತ್ತು ಇತರೆ ಕ್ಷೇತ್ರ್ರಗಳಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಲೆ ಇದ್ದಾರೆ. ಅವರ ಆಸೆ ಆಕಾಂಕ್ಷೆಗಳು ಮಣ್ಣುಪಾಲಾಗುತ್ತಿವೆ. ಇಂತಹ ಅನಾಹುತವನ್ನು ತಡೆಗಟ್ಟಗಲು ಸರ್ಕಾರಗಳು ಅನೇಕ ಕಾನೂನುನುಗಳನ್ನು  ಜಾರಿ ಮಾಡಿದ್ದರೂ, ಅದರ ಪ್ರಯೋಜನವನ್ನು ಪಡೆದುಕೊಳ್ಳದೆ ನಿರ್ಲಕ್ಷ ವಹಿಸುತಿದ್ದೇವೆ ಇದಕ್ಕೆ ಅವಕಾಶವನ್ನು ನೀಡಿದೆ ಸರ್ಕಾರದ ಸೌಲಭ್ಯಗಳು ಪ್ರಯೋಜನಗಳನ್ನು ಪಡೆದುಕೊಳ್ಳುವುದಕ್ಕೆ ಪೋಷಕರು ಮುಂದಾಗಬೇಕು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು ಯಾವುದೇ ವ್ಯಕ್ತಿಯು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ 14 ರಿಂದ 18 ವರ್ಷದೊಳಗಿನ ಮಗುವನ್ನು ಅಪಾಯಕಾರಿ ಉದ್ಯೋಗ ಅಥವಾ ಪ್ರಕ್ರಿಯೆಯಲ್ಲಿ ನೇಮಿಸಿಕೊಂಡರೆ, ಒಂದರಿಂದ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ 20,000 ರಿಂದ 50,000 ರವರೆಗೆ ದಂಡ ವಿಧಿಸಬಹುದು. ಇದಕ್ಕೆ ಅವಕಾಶ ಮಾಡಿಕೊಡದೆ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಪೋಷಕರು ಗಮನವಹಿಸಬೇಕು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೈಯದ್ ನಾಸಿರುದ್ದೀನ್. ತಹಸಿಲ್ದಾರ್. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಅಧಿಕಾರಿ  ಪಿಎಸ್ಐ ಚಿದಾನಂದಪ್ಪ. ಏಎಸ್ಐ ವಿಜಯ್ . ಪೊಲೀಸ್ ದೇವರಾಜ್.  ಎಚ್‌ಜಿ  ಹೇಮಂತ್ ಕುಮಾರ್.  ಸಮಾಜ ಕಲ್ಯಾಣ ಇಲಾಖೆ. ಶಿಶು ಅಭಿವೃದ್ಧಿ ಪೋಲಿಸ್ ಇಲಾಖೆ ಕಾರ್ಮಿಕರ ನಿರೀಕ್ಷಕರ ಇಲಾಖೆ ತಂಡ ಸೇರಿದಂತೆ ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಇದ್ದರು.