ಬಾಲ್ಯ ವಿವಾಹ ಸಮಾಜದ ದೊಡ್ಡ ಪಿಡುಗು :ಎಮ್. ಡಿ. ಅಮಿರಖಾನ

ಭಾಲ್ಕಿ :ಅ.18:ತಾಲೂಕಿನ ಕಾಸರತುಗಾವ ಗ್ರಾಮದ ಶ್ರೀಮತಿ ಎಸ್. ಎಸ್. ಬಿ. ಶಾಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಪ್ರತಿಜ್ಞಾವಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಗ್ರಾಮ ಪಂಚಾಯತಿಯ ಶಿವಣಿ ಕಾರ್ಯದರ್ಶಿಗಳಾದ ಎಮ್. ಡಿ. ಅಮೀರಖಾನ್ ಅವರು ಮಾತನಾಡಿ ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು, ಅದು ನಿವಾರಣೆಯಾಗಬೇಕು.ಬಾಲ್ಯದಲ್ಲಿ ಮದುವೆ ಆಗಿ ಶಾರಿರಿರಕ, ಮಾನಸಿಕವಾಗಿ ಕುಗ್ಗುತಿದ್ದಾಳೆ ಎಂದು ಹೇಳಿದರು.
ಮುಖ್ಯಗುರುಗಳಾದ ಮಲ್ಲಿಕಾರ್ಜುನ ಪಾಟೀಲ್ ಅವರು ಮಾತನಾಡಿ ಬಾಲ್ಯ ವಿವಾಹ ಒಂದು ಸಮಾಜದಲ್ಲಿ ದೊಡ್ಡ ರೋಗ ಸಾಮಾಜಿಕ ಪಿಡುಗು . ದೈಹಿಕವಾಗಿ, ಮಾನಸಿಕವಾಗಿ,ಬೆಳವಣಿಗೆ ಆಗದೆ ಬಾಳು ಜೀವಂತ ಶೇವ ವಾಗುತ್ತಿದೆ. ಹೆಣ್ಣು ಸಮಾಜದ ಕಣ್ಣು,ಹೆಣ್ಣು ಅಬಲೆ ಅಲ್ಲ ಸಬಲೇ, ಶಿಕ್ಷಣದ ಕಲಿತು ಸಮಾಜಮುಖಿಯಾಗಿ ಬಾಳಬೇಕು. ಹಳ್ಳಿಯಲ್ಲಿ ಬಾಲ್ಯ ಮಗುವಿನ ಪೆÇೀಷಕರು ಹೆಣ್ಣಿನ ಮದುವೆ ಮಾಡಿಕೊಟ್ಟಿದರೆ ಸಾಕು ನಮ್ಮ ಜವಾಬ್ದಾರಿ ಮುಗೀತು ಎನ್ನುವಷ್ಟರ ಮಟ್ಟಿಗೆ ಬಂದಿದ್ದಾರೆ. ಆಕೆ ಜೀವನದ ಕನಸು ನುಚ್ಚುನೂರಾಗುತ್ತಿದೆ. ಹೆಣ್ಣಿಗೆ ಸ್ವತಂತ್ರವಾಗಿ ಬದುಕಲು ಸಹ ಆಗುತ್ತಿಲ್ಲ. ಬಾಲ್ಯ ವಿವಾಹದಿಂದ ಆರೋಗ್ಯವಂತರಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಯಾಕೆ ಯಾವ ರೀತಿ ಸಂಸಾರ ನಡೆಸಬೇಕು ಎನ್ನುವ ಅನುಭವ ಇಲ್ಲದೆ ಸಂಸಾರ ಜೀವನ ಹಾಳಾಗೋ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಬಾಲ್ಯ ವಿವಾಹ ಅದನ್ನು ತಡೆಗಟ್ಟಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಖನಗಾವ ಪಿ ಎಲ್ ಸಿ ಪ್ರದೀಪ್, ಗ್ರಾಮಸ್ಥರಾದ ಮಲ್ಲಿಕಾರ್ಜುನ ಬಿರಾದಾರ್, ಶಿವಣಿ ಗ್ರಾಮ ಪಂಚಾಯತ್ ಕರವಸಲಿಗಾರ ಲಿಂಗೇಶ್, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಶಿವಪುತ್ರ ಸ್ವಾಮಿ, ಶಿಕ್ಷಕರಾದ ಸುರೇಶ್ ತಿಮ್ಮನಟ್ಟಿ, ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಶ್ರೀದೇವಿ ಜಯರಾಜ್, ಬಾಲಿಕಾ ಬಿರಾದಾರ್, ಪೂಜಾ ಕಪಲಾಪುರ್, ಪಂಕಜಾ ಸ್ವಾಮಿ , ಶಾಂಭವಿ ಹೂಗಾರ್, ಭಾಗೀರಥಿ ಸ್ವಾಮಿ ಇದ್ದರು. ಶಿಕ್ಷಕರಾದ ಜೈರಾಜ್ ದುಮ್ಮನ್ಸೂರೆ ನಿರೂಪಿಸಿ ವಂದಿಸಿದರು.