ಬಾಲ್ಯ ವಿವಾಹ ಮುಕ್ತ ದೇಶ: ಕಿಶೋರಿಯರ ಜತೆ ಸಂವಾದ

ಕಲಬುರಗಿ,ಅ.17-ಮಾರ್ಗದರ್ಶಿ ಸಂಸ್ಥೆ, ಚೈಲ್ಡ್ ಮ್ಯಾರೇಜ್ ಫ್ರೀ ಇಂಡಿಯಾ ಸಂಸ್ಥೆ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ಮುಕ್ತ ದೇಶವನ್ನಾಗಿಸಲು ಕಿಶೋರಿಯರ ಜೊತೆ ಸಂವಾದ ಕಾರ್ಯಕ್ರಮವನ್ನು ಸೋಮವಾರ ಶ್ರೀ ಲಕ್ಷ್ಮಿ ತಾಯಿ ಮೆಮೊರಿಯಲ್ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸುರಾe ಮತ್ತಿಮೂಡ ಅವರು ಉದ್ಘಾಟಿಸಿ ಮಾತನಾಡಿದರು. ಬಾಲ್ಯ ವಿವಾಹದಂತ ಅನಿಷ್ಟ ಪದ್ದತಿಯನ್ನು ತೊಲಗಿಸಬೇಕು, ಬಾಲ್ಯ ವಿವಾಹದಿಂದ ತಾಯಿ ಮರಣ, ಶಿಶು ಮರಣ ಹೆಚ್ಚಾಗುತ್ತವೆ. ಇಂಥ ಪ್ರಕರಣಗಳು ಗಮನಕ್ಕೆ ಬಂದರೆ ಮೇಲಾಧಿಕಾರಿಗಳಿಗೆ ತಿಳಿಸಬೇಕು ಮತ್ತು ಚೈಲ್ಡ್ ಲೈನ್ 1098 ಕರೆ ಮಾಡಿ ಅಥವಾ 112 ಕರೆ ಮಾಡಿ ಎಂದು ತಿಳಿಸಿದರು.
ಶ್ರೀ ಲಕ್ಷ್ಮಿ ತಾಯಿ ಮೆಮೋರಿಯಲ್ ಆಸ್ಪತ್ರೆಯ ಸಂಸ್ಥಾಪಕರಾದ ಅಶೋಕ್ ಹಾಗೂ ರೋಟರಿ ಕ್ಲಬ್ಬಿನ ಸದಸ್ಯರಾದ ರವೀಂದ್ರ, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕರಾದ ಆನಂದರಾಜ ಹಾಗೂ ಸಂಸ್ಥೆಯ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಕಿಶೋರಿಯರು 250 ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಮಾರಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮಿ ವಂದಿಸಿದರು.