ಬಾಲ್ಯ ವಿವಾಹ ನಿರ್ಮೂಲನೆಗೆ ಪ್ರತಿಯೊಬ್ಬರು ಶ್ರಮಿಸಿ ; ನ್ಯಾಯಾಧೀಶ ಚನ್ನಬಸಪ್ಪ ಆರ್. ಕೂಡಿ

ಕಾಗವಾಡ : ನ.15:ಬಾಲ್ಯ ವಿವಾಹ ನಿರ್ಮೂಲನೆಗಾಗಿ ಶ್ರಮಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕಾಗವಾಡ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಚನ್ನಬಸಪ್ಪ ಆರ್. ಕೂಡಿ ಹೇಳಿದರು.
ಅವರು ರವಿವಾರ ದಿ. 14 ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಕಾಗವಾಡ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೆÇೀಲಿಸ್ ಇಲಾಖೆ, ಪಟ್ಟಣ ಪಂಚಾಯತ ಕಾಗವಾಡ ಇವುಗಳ ಸಂಯುಕ್ತಾಶ್ರಯದಲ್ಲಿ 75 ನೇ ಸ್ವಾತಂತ್ರೋತ್ಸವದ ನಿಮಿತ್ತವಾಗಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ಯಾನ ಇಂಡಿಯಾ ಅರಿವು ಮತ್ತು ಪ್ರಚಾರದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಸಮಾಜಕ್ಕೆ ಕಂಟಕ ಪ್ರಾಯವಾಗಿರುವ ಬಾಲ್ಯ ವಿವಾಹವನ್ನು ತಡೆಗಟ್ಟುವುದು ಸರ್ಕಾರ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ತಮ್ಮ ಸುತ್ತಮುತ್ತಲು ಜರುಗುವ ಬಾಲ್ಯ ವಿವಾಹ ತಡೆಯುವಗೋಸ್ಕರ ಪ್ರತಿಯೊಬ್ಬರು ಶ್ರಮಿಸುವಂತೆ ಹೇಳಿದರು. ಪುರೋಹಿತರಾಗಿರಲಿ, ಸಮಾಜದ ಮುಖಂಡರಾಗಿರಲಿ, ಜವಳಿ ಅಂಗಡಿಕಾರರಾಗಿರಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಇಂತಹ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸಹಕರಿಸುವಂತೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದ ಅಂಗವಾಗಿ ಸಿವಿಲ್ ನ್ಯಾಯಾಲಯದಿಂದ ಶಿವಾನಂದ ಮಹಾವಿದ್ಯಾಲಯದವರೆಗೆ ಕಾನೂನು ಸಾಕ್ಷರತಾ ಜಾಥಾವನ್ನು ಏರ್ಪಡಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡಲಾಯಿತು.
ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಕಿರು ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡಲಾಯಿತು.
ನ್ಯಾಯಾಧೀಶರಾದ ಚನ್ನಬಸಪ್ಪ ಆರ್.ಕೂಡಿ ಉದ್ಘಾಟಿಸಿದರು. ಕಾಗವಾಡ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಅರವಿಂದ ಭಂಡಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಾನಂದ ಮಹಾವಿದ್ಯಾಲಯ ಪ್ರಾ. ವ್ಹಿ.ಎಸ್.ತುಗಶೆಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್.ಎಂ. ಖೇಮಲಾಪೂರೆ, ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಂ.ಮುಂಜೆ, ಇಇಓ ಈರನಗೌಡ ಏಗನಗೌಡರ, ಸಿಡಿಪಿಓ ಸಂಜೀವಕುಮಾರ ಸದಲಗಿ, ಪೆÇೀಲಿಸ್ ಇಲಾಖೆಯ ಅಧಿಕಾರಿ ಎ.ಎಸ್. ಕುಂಬಾರ, ಆರ್.ಡಿ.ಸನಗೊಂಡ, ಕೆ.ಎಲ್ ಕುಂದರಗಿ(ವಕೀಲರು), ನ್ಯಾಯವಾದಿ ಸಂಘದ ಕಾರ್ಯದರ್ಶಿ ಎ.ಬಿ.ದಿಕ್ಷಾಂತ ವೇದಿಕೆ ಮೇಲಿದ್ದರು.
ಈ ಸಮಯದಲ್ಲಿ ಎಸ್.ಎಸ್.ದೊಂಡಾರೆ, ಬಿ.ಜೆ.ಮೋಳೆ, ಎಂ.ಕೆ.ಕುಂಬಾರ, ಪಿ.ಜೆ.ಕೆಂಪವಾಡೆ ಸೇರಿದಂತೆ ಅನೇಕ ನ್ಯಾಯವಾದಿಗಳು ಅಂಗನವಾಡಿ ಕಾರ್ಯಕರ್ತೆಯರು, ಉಪನ್ಯಾಸಕರು, ಶಾಲಾ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಅಪಾರ ಸಂಖ್ಯೆಯಲ್ಲಿ ಇದ್ದರು.