ಬಾಲ್ಯ ವಿವಾಹ ತಡೆಯುವುದು ಎಲ್ಲರ ಜವಾಬ್ದಾರಿ

ಮಾನ್ವಿ,ಅ.೧೬- ಸೂಕ್ತ ವಯಸ್ಸಿಗೆ ಬರುವವರೆಗೂ ಗಂಡು ಹೆಣ್ಣಿಗೆ ಮದುವೆ ಮಾಡಬಾರದು ಚಿಕ್ಕ ವಯಸ್ಸಿನಲ್ಲಿ ನಡೆಯುವ ಬಾಲ್ಯ ವಿವಾಹವನ್ನು ತಡೆಯುವುದು ಎಲ್ಲಾ ಸಾರ್ವಜನಿಕ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಮಾನ್ವಿಯ ಹಿರಿಯ ಸಿವಿಲ್ ನ್ಯಾಯಾಧೀಶ ವ್ಹಿ ಸಿದ್ದೇಶ್ವರ ಅವರು ಹೇಳಿದರು.
ಇಂದು ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಬಾಲ್ಯ ವಿವಾಹದಿಂದಾಗುವ ತೊಡಕುಗಳ ಹಾಗೂ ಕಾನೂನು ಅಡೆತಡೆಗಳನ್ನು ವಿವರಿಸಿದರು.
ನಂತರ ಸಿವಿಲ್ ನ್ಯಾಯದೀಶ ಆಶಪ್ಪ ಸಣ್ಣಮನಿ ಹಾಗೂ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಕಾರ್ಯಕ್ರಮದ ಕುರಿತು ಮಾತನಾಡಿ, ಮಕ್ಕಳಿಗೆ ಬಾಲ್ಯ ವಿವಾಹದ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ, ಕಾರ್ಯದರ್ಶಿ ಚನ್ನಬಸವ ಬಲ್ಲಟಿಗಿ ಸೇರಿದಂತೆ ಅನೇಕ ವಕೀಲರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.