ಬಾಲ್ಯ ವಿವಾಹ ತಡೆಯಲು ಸರ್ವರೂ ಶ್ರಮ ಪಡೋಣ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 4 ಬಾಲ್ಯ ವಿವಾಹ ತಡೆಯಲು ಸರ್ವರೂ ಶ್ರಮ ಪಡೋಣ ಎಂದು ಮುಖಂಡರಾದ ಬೋವಿ ಪೆದ್ದಣ್ಣ ಕರೆ ನೀಡಿದರು.
ತಾಲೂಕಿನ ನರಸಿಂಗಾಪುರ ಗ್ರಾಮದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯ ವಿವಾಹ ತಡೆಯುವುದು ಹೆಣ್ಣು ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲ ದೇಶದ ಅಭಿವೃದ್ಧಿಗೆ ಶ್ರೇಯಸ್ಕರವಾಗುವುದು, ಮಕ್ಕಳ ಹಕ್ಕುಗಳ ರಕ್ಷಣೆ ಮಾಡ ಬೇಕಾದದ್ದು ಎಲ್ಲರ ಕರ್ತವ್ಯ, ಹದಿನೆಂಟು ವರ್ಷದ ವರೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಆದ್ಯ ಕರ್ತವ್ಯ, ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸೋಣ, ಮದುವೆ ಮಾಡಿದರೆ ದಂಡ ಮತ್ತು ಶಿಕ್ಷೆ ಅನುಭವಿಸುವ ಕುರಿತು ಅರಿವು ಮೂಡಿಸೋಣ ಮಕ್ಕಳಿಗೆ ಸ್ವತಃ ರಕ್ಷಣೆ ಮಾಡಿಕೊಳ್ಳಲು ಸಹಾಯ ವಾಣಿ ಸಂಖ್ಯೆಗಳನ್ನು ಮನದಟ್ಟು ಮಾಡೋಣ, ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ಒಂದು ಪ್ರಕರಣ ತಡೆದು ಗ್ರಾಮಕ್ಕೆ ಎಚ್ಚರಿಕೆ ಕೊಡೋಣ ಸದಾ ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಅವರು ತಿಳಿಸಿದರು,
 ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಬಾಲ್ಯ ವಿವಾಹ ಕಾಯ್ದೆ, ಮಾನಸಿಕ ಅರೋಗ್ಯ, ಅಸಾಂಕ್ರಾಮಿಕ ರೋಗಗಳ ತಡೆ, ಕ್ಷಯ ಮುಕ್ತ ಭಾರತ ರೂಪಿಸುವ ಕುರಿತು ಮಾಹಿತಿ ನೀಡಿದರು, ಹಾಗೆ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಅವರು ಹದಿಹರೆಯದವರ ಆರೋಗ್ಯ, ಸ್ನೇಹಾ ಕ್ಲಿನಿಕ್, ಅನಿಮಿಯಾ, ಅಪೌಷ್ಟಿಕತೆ, ಮುಟ್ಟಿನ ನೈರ್ಮಲ್ಯತೆ ಕುರಿತು ಮಾಹಿತಿ ನೀಡಿದರು,
 ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎರ್ರಿಸ್ವಾಮಿ, ಕೆ.ಹೆಚ್.ಪಿ.ಟಿ ಸಂಯೋಜಕಿ ಮಂಜುಳಾ, ಅನುರಾಧ, ಸ್ವಸಹಾಯ ಸಂಘದ ಪ್ರತಿನಿಧಿ ಸರಸ್ವತಿ, ಗೌರಮ್ಮ, ಮಾರೆಕ್ಕ, ಅಂಗನವಾಡಿ ಕಾರ್ಯಕರ್ತೆ ಗಾಯತ್ರಿ, ರೇಣುಕಾ, ಲಲಿತಾ ಇತರರು ಉಪಸ್ಥಿತರಿದ್ದರು