
ಬೀದರ:ಫೆ.21:ಚೈಲ್ಡ್‍ಲೈನ್ 1098 ಬೀದರ ನಗರದ ಚಿಕ್ಕಪೇಟ್‍ನಲ್ಲಿರುವ ಡಾನ್ ಬೋಸ್ಕೊ ಸಂಸ್ಥೆಯ ವತಿಯಿಂದ ದಿನಾಂಕ: 20-2-23 ರಂದು ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಅರಿವಿನ ಕಾರ್ಯಕ್ರಮವನ್ನು ಯೇರನಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೋಳಾಯಿತು. ಶ್ರೀಮತಿ ಕವಿತಾ ಅಂಗನವಾಡಿ ಕಾರ್ಯಕರ್ತೆ ಸ್ವಾಗತ ಕೋರಿ, ( ಮಕ್ಕಳ ಪೋಷಣೆ ಮತ್ತು ಮಕ್ಕಳ ರಕ್ಷಣೆ) ಕಾಯಿದೆ 2006 ರಂತೆ 18 ವರ್ಷ ಪೂರೈಸುವುದರೊಳಗೆ ಮದುವೆಗೆ ಗುರಿಯಾಗುವ ಆತಂಕವಿದ್ದು, ಆ ಮಗುವಿನ ಪೋಷಕರು , ಕುಟುಂಬದ ಸದಸ್ಯರು ಪಾಲಕರು ಮತ್ತು ಯಾವೂದೇ ಇತರ ವ್ಯಕ್ತಿಗಳಿಂದ ಅಂತಹ ಮದುವೆ ಆಗಿ ಬಿಡುವ ಸಾಧ್ಯತೆಯಿದೇಯೋ ಅಂತಹ ಮಕ್ಕಳನ್ನು ಪೋಷಣೆ ಮತ್ತು ರಕ್ಷಣೆ ಅವಶ್ಯಕತೆ ಇರುವ ಮಕ್ಕಳು ಎಂದು ಪರಿಗಣಿಸಲಾಗಿದೆ. ಇಂದಹ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲು ನಾವು ಸದಾ ಸಿದ್ದರಿದ್ದೇವೆ ಎಂದು ಮಾತನಾಡಿದ್ದರು.
ಶ್ರೀ ಡ್ಯಾನಿಯಲ್ ಮೇತ್ರೆ ಮಕ್ಕಳ ಸಹಾಯವಾಣಿ ಸದಸ್ಯರು, ಬೀದರ ಅವರು ಬಾಲ್ಯ ವಿವಾಹದಿಂದ ರಕ್ಷಸಲ್ಪಟ್ಟ ಬಾಲಕಿ/ ಬಾಲಕರ ಪುನರ್ವಸತಿಗೆ ಕ್ರಮಗಳು, ಜೀವನ ಕೌಶಲ್ಯ ತರಬೇತಿ ವ್ಯಕ್ತಿತ್ವ ವಿಕಸನ ತರಬೇತಿ ವೃತ್ತಿ ತರಬೇತಿ ಮಾನಸಿಕ ಧೃಡತೆ, ಧೈರ್ಯ, ಗಟ್ಟಿತನ ಶಿಕ್ಷಣ ಮುಂದುವರಿಸಲು ಕ್ರಮ ವಿವಿಧ ಇಲಾಖೆಯಿಂದ ಉದ್ಯೋಗ ಆರ್ಥಿಕ ಸ್ವಾವಲಂಬನೆ ಬೆಳೆಸಲು ತರಬೇತಿ ಅಥವಾ ನೇರವಾಗಿ ಉದ್ಯೋಗ ಒದಗಿಸುವುದು. ವಯಸ್ಸು 18ರ ಆಸು-ಪಾಸು ಇದ್ದಲ್ಲಿ ಸೀಮಿತ ಅವಧಿಯಲ್ಲಿ ವೃತ್ತಿ ತರಬೇತಿ ನೀಡಿ 18 ಮುಗಿದ ತಕ್ಷಣ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ನೀಡುವುದು ತೀರಾ ಚಿಕ್ಕವರಿದ್ದರೆ, ಶಾಲಾ ಶಿಕ್ಷಣ, 7ನೇ ಅಥವಾ 10ನೇ ತರಗತಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುವುದು. ಮಕ್ಕಳೆಂದರೆ 0-18 ವರ್ಷದ ಒಳಗಿನ (ಗಂಡು ಮತ್ತು ಹೆಣ್ಣು) “ಸಂಕಷ್ಟದಲ್ಲಿರುವ ಮಕ್ಕಳು ಬಾಲ್ಯ ವಿವಾಹ ಮಾಡಿಸಿದವರಿಗೆ 1 ಲಕ್ಷ ರೂಪಾಯಿ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ಎಂಬ ಅರಿವನ್ನು ಮೂಡಿಸುವುದರ ಜೊತೆಗೆ ಬಂದಿರುವ ಅಂಗನವಾಡಿ ತಾಯಂದಿರಿಗೆ ಮಕ್ಕಳ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುವ ನಾವು ಮತ್ತು ನಿವೆಲ್ಲರು ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಹಾಗೂ ಪೋಷಣೆಯ ಅಗತ್ಯವಿರುವ ಮಕ್ಕಳ ರಕ್ಷಣೆ ಮಾಡಬೇಕು ಎಂದು ತಿಳಿಸಿ ಹೇಳಿದರು.
ಶ್ರೀ ಸಾಲೋಮನ್ ಖಾದಿ ಮಕ್ಕಳ ಸಹಾಯವಾಣಿ ಸದಸ್ಯರು, , ಡಾನ್ ಬೋಸ್ಕೊ, ಬೀದರ ರವರು ಅಂಗನವಾಡಿ ತಾಯಂದಿರ ಅರಿವಿನ ಕಾರ್ಯಕ್ರಮವು ಗ್ರಾಮ ಪಂಚಾಯತ್ ಮಟ್ಟದಲ್ಲಿನ ಎಲ್ಲಾ 5 ವರ್ಷದೋಳಗಿನ ಮಕ್ಕಳಿಗೆ 100 ಪ್ರತಿಶತ ಜನನ ಪ್ರಮಾಣ ಪತ್ರ ಲಭಿಸುವಂತೆ ಮಾಡುವುದು 6 ರಿಂದ 18 ವರ್ಷದೋಳಗಿನ 100 ಪ್ರತಿಶತ ಮಕ್ಕಳು ಶಾಲೆಗೆ ದಾಖಲಾತಿ ಮತ್ತು ಹಾಜರಾತಿ ಮಾಡಿಸುವುದು, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮತ್ತು ಮಕ್ಕಳು ಶಾಲೆಗೆ ಸೇರಿಸುವಂತೆ, ಬಾಲ್ಯವಿವಾಹ, ಮಕ್ಕಳ ಸಾಗಣಿಕೆ, ಮಕ್ಕಳ ಪೌಷ್ಠಕ ನಿವಾರಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ವಿಶೇಷ ಸಾಮತ್ರ್ಯಯುಳ ಮಕ್ಕಳ ರಕ್ಷಣೆ ಮಾಡುವುದು. ಭಿಕ್ಷಾಟನೆ ಬೀದಿಯಲ್ಲಿ ಚಿಂದಿ ಆಯುವ ಮಕ್ಕಳ ರಕ್ಷಣೆ ಮಾಡಿ ಶಿಕ್ಷಣ ಕೋಡಿಸುವುದು. ಪ್ರತಿಯೊಂದು ಅಂಗನಾವಾಡಿಯಲ್ಲಿ ಕ್ರಿಯಾತ್ಮಕ ಬಾಲಕಿ/ ಕಿಶೋರಿಯರ ಸಂಘ ರಚನೆ ಮಾಡುವುದು. ಎಲ್ಲ ಶಾಲೆಗಳಲ್ಲಿ ಮಕ್ಕಳ ಸುರಕ್ಷಿತ ನೀತಿ ಅನುಷ್ಟಾನ ಸುರಕ್ಷಿತ ಸಮಿತಿ ಹಾಗೂ ಮಕ್ಕಳ ಹಕ್ಕುಗಳ ಕ್ಲಬ್ ರಚನೆಗೆ ಸೂಕ್ತ ಕ್ರಮ ಮತ್ತು ಸಹಕಾರ ನೀಡಬೇಕೆಂದು ಮಾತನಾಡಿದ್ದರು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ತಾಯಂದಿರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು, ಶ್ರೀಮತಿ ಶೀಲ್ಪಾ ಜಗನಾಥ ನೀರೂಪಿಸಿ ವಂದಿಸಿದ್ದರು.