ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಲಿ: ರಾಮಚಂದ್ರನ್ ಆರ್

ಬೀದರ:ಜ.1: ಬಾಲ್ಯವಿವಾಹವೆಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಿ ಮಕ್ಕಳಿಗೆ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸಲು ಅವಕಾಶ ನೀಡಿ, ಬೀದರ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಬಾಲ್ಯ ವಿವಾಹಗಳನ್ನು ತಡೆಯಲು ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರೀಶೀಲನಾ ಸಮಿತಿಯ ಅಧ್ಯಕ್ಷರಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಬಾಲ್ಯ ವಿವಾಹವು ಒಂದು ಅಭಿವೃದ್ಧಿಗೆ ಮಾರಕವಾಗಿರುವ ಸಮಸ್ಯೆಯಾಗಿದೆ. ಬಾಲ್ಯ ವಿವಾಹವನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ಬಾಲ್ಯ ವಿವಾಹವು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹ ನಿಷೇಧ ಕಾಯ್ದೆ -2006ರ ಪ್ರಕಾರ 18 ವರ್ಷದೊಳಗಿನ ಯಾವುದೇ ಹೆಣ್ಣು ಮಗುವಿಗೆ ಹಾಗೂ 21 ವರ್ಷದೊಳಗಿನ ಯಾವುದೇ ಗಂಡು ಮಗುವಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗಿದೆ.
ಈ ಕಾಯ್ದೆಯ ಪ್ರಕಾರ ಬಾಲ್ಯ ವಿವಾಹ ನಡೆದಲ್ಲಿ ಕೇವಲ ಮದುವೆಯಾಗುವ ವಯಸ್ಕನಿಗೆ ಹಾಗೂ ಹುಡುಗಿಯ ತಂದೆ ತಾಯಿಗಳಿಗಲ್ಲದೇ, ಪೂಜಾರಿಗಳು, ಸಂಬಂಧಿಕರು, ಪ್ರೇರೇಪಿಸಿದವರು, ಉತ್ತೇಜನ ನೀಡಿದವರು, ಬಾಲ್ಯ ವಿವಾಹ ತಡೆಯಲು ವಿಫಲರಾದವರು ಮತ್ತು ಭಾಗವಹಿಸಿದವರು ಎಲ್ಲರೂ ಅಪರಾಧಿಗಳೇ ಆಗುತ್ತಾರೆ. ಅವರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ.
ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2016ರ ಪ್ರಕಾರ ತಪ್ಪಿತಸ್ಥರಿಗೆ ಕನಿಷ್ಠ 1 ವರ್ಷದಿಂದ ಗರಿಷ್ಠ 2 ವರ್ಷಗಳವರೆಗೆ ಕಾರಾಗೃಹವಾಸ ಮತ್ತು ರೂ. 1.00 ¯ಕ್ಷಗಳ ವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದಾಗಿದೆ.
ಆದ್ದರಿಂದ ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸುವವರು ಮತ್ತು ಪೂಜಾರಿಗಳು, ಪೌರೋಹಿತ್ಯ ನಡೆಸುವವರು, ಮದುವೆಗಳನ್ನು ನೆರೆವೇರಿಸುವ ಮಠ/ಚರ್ಚ್/ಮಸೀದಿಗಳ ಧಾರ್ಮಿಕ ಮುಖಂಡರು, ಸಾಮೂಹಿಕ ವಿವಾಹದ ಆಯೋಜಕರು ಹಾಗೂ ಕಲ್ಯಾಣ ಮಂಟಪ ಫಂಕ್ಷನ್‍ಹಾಲ್‍ಗಳ ವ್ಯವಸ್ಥಾಪಕರುಗಳು ಇನ್ನು ಮುಂದೆ ಕಡ್ಡಾಯವಾಗಿ ವಧು ಮತ್ತು ವರರ ವಯಸ್ಸಿನ ದೃಢೀಕರಣ ಪತ್ರವನ್ನು ಕುಟುಂಬದವರಿಂದ ಪಡೆದು ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ 18 ವರ್ಷ ಪೂರ್ಣವಾಗಿದೆ ಎಂದು ಖಾತ್ರಿ ಪಡಿಸಿಕೊಂಡ ನಂತರವಷ್ಟೇ ಮದುವೆ ಲಗ್ನ ಪತ್ರಿಕೆಯನ್ನು ಮುದ್ರಿಸಬೇಕು ಹಾಗೂ ಮದುವೆ ಕಾರ್ಯ ನಡೆಸಲು ಒಪ್ಪಿಕೊಳ್ಳಬೇಕು. ವಧು-ವರರ ವಯಸ್ಸಿನ ದೃಢೀಕರಣ ಪತ್ರಗಳಲ್ಲಿ ಜನನ ಪ್ರಮಾಣ ಪತ್ರ, ಶಾಲಾ ವಯಸ್ಸಿನ ದೃಢೀಕರಣ ಪತ್ರ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಅಥವಾ ಸರಕಾರಿ ವೈದ್ಯರು ರೇಡಿಯೋಲಜಿ ಪರೀಕ್ಷೆ ನಡೆಸಿ, ನೀಡಿ ದೃಢೀಕರಿಸಿದ ವಯಸ್ಸಿನ ಪ್ರಮಾಣ ಪತ್ರ ಹೊಂದಿದವರು ಮಾತ್ರ ಮದುವೆಗೆ ಅರ್ಹರಾಗಿರುತ್ತಾರೆ. ಬೇರೆ ಯಾವುದೇ ವಯಸ್ಸಿನ ದೃಢೀಕರಣ ಪತ್ರಗಳು ಮದುವೆಗೆ ಅರ್ಹವಲ್ಲ ಎಂಬುದನ್ನು ಅರಿತು ಕುಟುಂಬದವರಿಂದ ಮೇಲೆ ತಿಳಿಸಿದ ನಿಗದಿತ ವಯಸ್ಸಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು.
ಅದೇ ರೀತಿ ಬಾಲ್ಯ ವಿವಾಹ ಕಾಯ್ದೆಯ ಕುರಿತು ಜನರಲ್ಲಿ ಜಾಗೃತಿ ಇಲ್ಲದಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಬಾಲ್ಯ ವಿವಾಹಗಳು ಇಂದಿಗೂ ಜರುಗುತ್ತಿದೆ. ಈ ಬಾಲ್ಯವಿವಾಹ ಎಂಬ ಅನಿಷ್ಠ ಪದ್ಧತಿಯನ್ನು ತೊಲಗಿಸಲು ಅಭಿಯಾನ ಮಾಡಬೇಕಾಗಿರುತ್ತದೆ.
ಆದ್ದರಿಂದ ಎಲ್ಲಾ ಸರಕಾರಿ/ಸರಕಾರೇತರ ಶಾಲೆಗಳಲ್ಲಿ ರಾಷ್ಟ್ರಗೀತೆಯ ನಂತರ ಬಾಲ್ಯ ವಿವಾಹದ ದುಷ್ಟ್ಪರಿಣಾಮ ಮತ್ತು ಶಿಕ್ಷೆಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದಿಲ್ಲವೆಂದು ಪ್ರಮಾಣ ವಚನ ಬೋಧನೆಯನ್ನು ಕಡ್ಡಾಯವಾಗಿ ಮಾಡಿಸತಕ್ಕದ್ದು. ಅದೇ ರೀತಿ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಬಾಲ್ಯವಿವಾಹಗಳನ್ನು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಡೊಂಗುರುವನ್ನು ಸಾರಬೇಕು.
ಕೋವಿಡ್-19 ತುರ್ತು ಸಂದರ್ಭದಲ್ಲಿ ಮಾರ್ಚ್ 2020 ರಿಂದ ಡಿಸೆಂಬರ್ 2020ರವರೆಗೆ ಒಟ್ಟು 54 ಬಾಲ್ಯವಿವಾಹಗಳನ್ನು ತಡೆಹಿಡಿಯಲಾಗಿದ್ದು, 01 ಬಾಲ್ಯವಿವಾಹ ನಡೆದಿರುವುದರಿಂದ ಬಾಲ್ಯವಿವಾಹ ಮಾಡಿದವರ ವಿರುದ್ಧ ವiನ್ನಾ-ಏ-ಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿರುತ್ತದೆ.
ಸದರಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ, ಜಿಲ್ಲಾ, ತಾಲ್ಲೂಕಾ, ಗ್ರಾಮ ಪಂಚಾಯತಿ, ಗ್ರಾಮ, ನಗರಸಭೆ, ಪುರಸಭೆ ಮಟ್ಟದಲ್ಲಿ ಬಾಲ್ಯವಿವಾಹ ನಿಷೇದಾಧಿಕಾರಿಗಳನ್ನು ನೇಮಿಸಲಾಗಿರುತ್ತದೆ.
ಸದರಿ ಅಧಿಕಾರಿಗಳು ಬಾಲ್ಯ ವಿವಾಹ ತಡೆಗಟ್ಟಲು ಸಕ್ರಿಯವಾಗಿ ಕಾರ್ಯೋನ್ಮುಖರಾಗಬೇಕು. ಒಂದು ವೇಳೆ ಸದರಿ ಕಾರ್ಯದಲ್ಲಿ ಉದಾಸೀನತೆ ತೋರಿ ಬಾಲ್ಯವಿವಾಹ ತಡೆಯುವಲ್ಲಿ ವಿಫಲರಾದಲ್ಲಿ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ-1098, ಪೊಲೀಸ್ ಸಹಾಯವಾಣಿ 100, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂರವಾಣಿ ಸಂಖ್ಯೆ:08482-234003ಕÉ್ಕ ಕರೆ ಮಾಡಿ, ಅವರ ಗಮನಕ್ಕೆ ತರಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.