ಬಾಲ್ಯದಿಂದಲೂ ಸಂಗೀತದ ಒಲವು :ರೇಖಾ ಅಪ್ಪಾರಾವ ಸೌದಿ

ಬೀದರಃಎ.17: ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಸಾಹಿತಿಗಳ ಬದುಕು ಬರಹದೊಂದಿಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಸಾಧಕರ ಮನೆಗೂ ಬಂದು ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದ ಮೂಲಕ ಅವರ ಸಾಧನೆಯನ್ನು ನಾಡಿನಾದ್ಯಂತ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ. ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕೇವಲ ಸಮ್ಮೇಳನ ಮತ್ತು ಗೋಷ್ಠಿಗಳಿಗೆ ಸೀಮಿತವಾಗದೆ ಮನೆ ಮನೆಗೂ ಪರಿಷತ್ತಿನ ಚಟುವಟಿಕೆಗಳು ವಿಸ್ತಾರಗೊಂಡಿವೆ. ಇದು ರಾಜ್ಯದಲ್ಲಿಯೇ ಪ್ರಥಮ ಜಿಲ್ಲೆ ಎಂದರೆ ತಪ್ಪಾಗಲಾರದು ಎಂದು ಬೀದರ ಬಿವಿಬಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ಶಿವಲೀಲಾ ಮಠಪತಿ ಅವರು ನುಡಿದರು. ಅವರು ಮುಂದುವರೆದು ಮಾತನಾಡಿ ಶ್ರೀಮತಿ ರೇಖಾ ಅಪ್ಪಾರಾವ ಸೌದಿಯವರು ಸಂಗೀತಲೋಕದಲ್ಲಿ ತನ್ನ ಸಾಧನೆಯ ಮೂಲಕ ರಾಜ್ಯಮಟ್ಟದವರೆಗೂ ತಮ್ಮ ಛಾಪು ಮುಡಿಸುವ ಮೂಲಕ ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಂದರು.

ಅವರು ದಿನಾಂಕ 15-04-2023 ರಂದು ನಗರದ ರೇಖಾ ಅಪ್ಪಾರಾವ ಸೌದಿಯವರ ಮನೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕಸಾಪವು ಹಮ್ಮಿಕೊಂಡ 65ನೇಯ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದು ಶ್ರೀಮತಿ ರೇಖಾ ಅಪ್ಪಾರಾವ ಸೌದಿ ಅವರು ಮಾತನಾಡಿ ನನಗೆ ಬಾಲ್ಯದಲ್ಲಿಯೇ ಶಾಲಾ, ಕಾಲೇಜು ಕಾರ್ಯಕ್ರಮ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೂ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿರುವೆ.

ಮನೆಯಲ್ಲಿ ದೊಡ್ಡಮ್ಮ, ಚಿಕ್ಕಮ್ಮ, ಮಾಮಾ ಅವರೆಲ್ಲ ಸಂಗೀತ ಸಾಧಕರು, ಅವರೆಲ್ಲರ ಪ್ರೇರಣೆ. ಮದುವೆಯಾದ ಮೇಲೆ ಮಕ್ಕಳಿಗೆ ಸಂಗೀತ ಶಿಕ್ಷಣ ಕಳಿಸಲು ಬರುತ್ತಿದ್ದ ದಿ. ಈಶ್ವರಪ್ಪ ಪಾಂಚಾಳ ಸರ್ ಅವರಿಂದ ಮತ್ತೆ ಸಂಗೀತ ಕಲಿತಿದ್ದಲ್ಲದೆ ಹಿರಿಯ ಸಂಗೀತ ವಿದ್ವಾಂಸರಾದ ವೈಕುಂಠ ದತ್ತ ಮಹಾರಾಜ ಗುರುವಾಗಿ ನನಗೆ ಸಂಗೀತದ ಪಾಠ ಮಾಡಿದರು. ಅಲ್ಲದೆ ನನಗೆ ಸಂಗೀತ ಕಲಾ ರತ್ನ ಪ್ರಶಸ್ತಿ, ಸಂಗೀತ ಸಾಹಿತ್ಯ ಸಿರಿ ಪ್ರಶಸ್ತಿ, ಸಂಗೀತ ಸೇವಾ ರತ್ನ ಪ್ರಶಸ್ತಿ, ಪ್ರಭಾಂಜಲಿ ಪ್ರಶಸ್ತಿ, ಬಸವನೀಲಗಂಗಾ ಪ್ರಶಸ್ತಿ, ಗಾಯಕಿ ಗಂಗೋತ್ರಿ ಪ್ರಶಸ್ತಿ, ಜನಶ್ರೀ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಮುಡಿಗೇರಿವೆ ಎಂದು ವಿವರಿಸಿದರು.

ನಂತರ ಆತ್ಮೀಯ ವಲಯದಲ್ಲಿ ಮನೆಯಂಗಳದಲ್ಲಿ ಸಂಗೀತ, ಹೀಗೆ ಅದು ಬಿದರಿ ಸಾಂಸ್ಕøತಿಕ ವೇದಿಕೆ ಹುಟ್ಟು ಹಾಕುವವರಿಗೆ ಸಾಗಿ ಪತಿ ಅಪ್ಪಾರಾವ್ ಸೌದಿ ಅವರ ಸಹಕಾರದಿಂದ ಸಂಗೀತ ಸೇವೆ ನಿರಂತರವಾಗಿ ಸಾಗಿ ಮೈಸೂರು ಯುವ ದಸರಾ, ಹಂಪಿ ಉತ್ಸವ, ರಾಷ್ಟ್ರಕೂಟ ಉತ್ಸವ ಸೇರಿದಂತೆ ರಾಜ್ಯದ ಬಹುತೇಕ ಉತ್ಸವಗಳಲ್ಲಿ ಬೀದರ್ ನ ಯುವ ಗಾಯಕರಾದ ಅಮಿತ್ ಜನವಾಡಕರ್ ಹಾಗೂ ವಿಷ್ಣು ಜನವಾಡಕರ್ ಅವರ ಸಹ ಗಾಯಕತ್ವದಲ್ಲಿ ಸಂಗೀತ ಪ್ರಸ್ತುತಪಡಿಸಲು ಅವಕಾಶ ದೊರಕಿದೆ ಅಲ್ಲದೆ ಬೀದರ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನನಗೆ ಈ ಮಟ್ಟದಲ್ಲಿ ಬೆಳೆಯಲು ಸಹಕರಿಸಿದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷರಾದ ಎಂ. ಎಸ್. ಮನೋಹರ ಅವರು ವಹಿಸಿದರು. ಆಶಯ ನುಡಿ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿಯವರು ನುಡಿದರು. ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಸಾಹಿತಿಗಳಾದ ಡಾ. ಶ್ರೇಯಾ ಮಹೇಂದ್ರಕರ್ ಇವರು ಸಂವಾದ ನಡೆಸಿಕೊಟ್ಟರು. ಮತ್ತು ರೇಖಾ ಅಪ್ಪಾರಾವ ಸೌದಿಯವರು ಕನ್ನಡ ಗೀತ ಗಾಯನ ಮಾಡಿದರು.

ಇದೇ ಸಂದಭ್ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀಮತಿ ರೇಖಾ ಅಪ್ಪಾರಾವ ಸೌದಿ ಅವರಿಗೆ ಸನ್ಮಾನಿಸಲಾಯಿತು.

ಮೊದಲಿಗೆ ಬೀದರ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಶಿವಕುಮಾರ ಚನ್ನಶೆಟ್ಟಿ ಸ್ವಾಗತಿದರು. ತಾಲ್ಲೂಕು ಕಸಾಪ ಉಪಾಧ್ಯಕ್ಷರಾದ ರಾಘವೇಂದ್ರ ಮುತ್ತಂಗಿಕರ್ ನಿರೂಪಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದಶಿಗಳಾದ ಟಿ. ಎಂ. ಮಚ್ಛೆ ವಂದಿಸಿದರು.

ಸಾಹಿತಿಗಳಾದ ಡಾ. ಕಾಶಿನಾಥ ಚೆಲುವಾ, ಓಂಪ್ರಕಾಶ ಧಡ್ಡೆ, ಡಾ. ಬಸವರಾಜ ಬಲ್ಲೂರ, ಶ್ರೀಮತಿ ಪಾರ್ವತಿ ಸೋನಾರೆ, ಶ್ರೀಮತಿ ಸುನೀತಾ ದಾಡಗಿ, ಶ್ರೀಮತಿ ಕಸ್ತೂರಿ ಪಟಪಳ್ಳಿ, ಶ್ರೀಮತಿ ರೇಣುಕಾ ಧಡ್ಡೆ, ಜಿಲ್ಲಾ ಕಸಾಪ ಉಪಾಧ್ಯಕ್ಷರಾದ ದಾನಿ ಬಾಬುರಾವ, ಆನಂದ ಪಾಟೀಲ, ಶಿವರಾಜ ಪಾಟೀಲ, ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಜಗನ್ನಾಥ ಕಮಲಾಪೂರೆ, ಉಪಧ್ಯಕ್ಷರಾದ ಸಿದ್ಧಾರೂಢ ಭಾಲ್ಕೆ ಕೋಶಧ್ಯಕ್ಷರಾದ ಅಶೊಕ ದಿಡಗೆ, ಮತ್ತಿತರರು ಉಪಸ್ಥಿತರಿದ್ದರು.