ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

ವಿಜಯಪುರ,ಏ.5 :ತಂದೆ ತಾಯಿ ಮನೆಯಲ್ಲಿ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಆಚಾರ ವಿಚಾರ, ಸಂಸ್ಕಾರಗಳನ್ನು ನೀಡುವ ಗುಣಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ಸಿಂದಗಿ ತಾಲೂಕು ಜಂಗಮ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಹೇಳಿದರು.
ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಅಗರಖೇಡ ಗ್ರಾಮದಲ್ಲಿ ವಿರಕ್ತಮಠದ ಶ್ರೀ ಲಿಂ .ಪ್ರಭುಲಿಂಗೇಶ್ವರ ಪುಣ್ಯಸ್ಮರಣೋತ್ಸವದ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಶ್ರೀ ಮುಗಳಖೋಡ ಯಲ್ಲಾಲಿಂಗ ಮಹಾರಾಜ ಪುರಾಣ- ಪ್ರವಚನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ಸದ್ಗುಣ, ಸಂಸ್ಕಾರಗಳನ್ನು ಬಿತ್ತಲು ತಂದೆ ತಾಯಿ ಪಾತ್ರ ಮುಖ್ಯವಾಗಿದೆ ಎಂದರು.
ಮಾನವರಾಗಿ ನಾವು ಜೀವನದಲ್ಲಿ ವಿವಿಧ ಹಂತಗಳಿಗೆ ಒಳಗಾಗುತ್ತೇವೆ. ಮನೆಯಲ್ಲಿ ತಂದೆ ತಾಯಿ ಆದರ್ಶ ನಡೆ ನುಡಿ ಸಂಸ್ಕಾರಗಳನ್ನು ಮಕ್ಕಳು ಆಲಿಸುವರು. ಅವರಿಗೆ ಆದರ್ಶದ ಜೀವನದ ಮಾತುಗಳನ್ನು ಆಡಬೇಕು ಎಂದರು.
ಅಪ್ಪ ಮನೆಯ ಎಂಬ ಪಾಠ ಶಾಲೆಯ ಗುರು. ಅವರು ಮಕ್ಕಳಿಗೆ ಬಾಲ್ಯದಲ್ಲಿ ಶಿಸ್ತು ಸಂಸ್ಕಾರಗಳನ್ನು ಕಲಿಸುವ ಪ್ರಭಾವ ಶಾಲಿ ಶಕ್ತಿ ಅವರ ಹತ್ತಿರ ಅಡಗಿರುತ್ತದೆ ಎಂದರು..
ನಾವು ಗುರುವಿನ ಮುಖಾಂತರವೇ ಪರಮಾತ್ಮನ ಕಾಣಬೇಕು. ಗುರುವಿನ ಮಹಿಮೆ ಅಪಾರವಾಗಿದೆ. ಮುಗಳಕೋಡ ಯಲ್ಲಾಲಿಂಗ ಮಾಹಾರಾಜರು ಲೌಕಿಕ ಮೌಲ್ಯಗಳನ್ನು ತೋರಿಸಿದವರು. ಅವರು ಅಜ್ಞಾನದ ಅಂಧಕಾರ ಕಳೆದವರು. ಅÀಂತವರ ತತ್ವ ಸಿದ್ದಾಂತಗಳು ಜೀವನದಲ್ಲಿ ರೂಢಿಸಿಕೊಂಡು ಧರ್ಮದ ತಳಹದಿಯ ಮೇಲೆ ಸುಂದರ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಬಾಳಬೇಕು ಎಂದರು.
ವಂದಾಲ ಗ್ರಾಮದ ಪ್ರವಚನಕಾರ ಮಹಾಂತಯ್ಯ ಹಿರೇಮಠ ಮಾತನಾಡಿ, ಶ್ರೀ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಪುರಾಣ ಪ್ರವಚನದಲ್ಲಿ ಬರುವ ಉತ್ತಮ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಧರ್ಮ ಚಿಂತನೆಯಲ್ಲಿ ಭಾಗವಹಿಸಿ ಸಾತ್ವಿಕ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಪ್ರಭುಲಿಂಗೇಶ್ವರ ಸಂಸ್ಥಾನ ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿದರು.
ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಶರಣಯ್ಯ ಮಠ. ಶಿದ್ರಾಮಯ್ಯ ಹಿರೇಮಠ. ದೂಳಪ್ಪಗೌಡ ಬಿರಾದಾರ. ಮಲ್ಲಪ್ಪ ಮಾಗಣಗೇರಿ .ರೇವಣಸಿದ್ದ ಬಡಾನೂರ. ಶಂಕ್ರಪ್ಪ ಪೂಜಾರಿ, ವಿಠ್ಠಲ ಕುಮಸಗಿ, ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಸೇರಿದಂತೆ ಶ್ರೀ ಮಠದ ಪರವಾಗಿ ಸನ್ಮಾನಿಸಿ ಗೌರವಿಸಿದರು.
ಪರಶುರಾಮ ಗುಬ್ಬೇವಾಡ ಹಾಗೂ ಶಂಕರಲಿಂಗ ಕಲಬುರಗಿ ಸಂಗೀತ ಸೇವೆ ನೆರವೇರಿಸಿದರು.ಗುರುನಾಥ ಬಡಿಗೇರ. ದಯಾನಂದ ಐರೋಡಗಿ, ರೇವಪ್ಪ ಹಾವಳಗಿ, ನಾಗಪ್ಪ ಬಿರಾದಾರ.ಕೃಷ್ಣಾ ಮೋರೆ.ಪರಮಣ್ಣ ಬಿರಾದಾರ, ಅಂಬಣ್ಣ ಪಡನೂರ ಶಂಕರ ಸಿ ಮೈದರ್ಗಿ.ಸುರೇಶ ಹತ್ತರಕಿ .ಗುರುನಾಥ ಹಾವಳಗಿ.ಸುಭಾಷ ಸಿಂಧೆ.ನಶಿವಶರಣ ಹುನ್ನೂರ, ಸಂಗರಾಜ ಬಡಿಗೇರ. ಧರೆಪ್ಪ ಹಾವಳಗಿ.ಅಶೋಕ ಯಂಕಚಿ, ವಿಠ್ಠಲಗೌಡ ಪಾಟೀಲ ಇದ್ದರು. ಆದರ್ಶ ಶಿಕ್ಷಕ ಎಸ್.ಎಂ.ಬಿರಾದಾರ ಸ್ವಾಗತಿಸಿನಿರೂಪಿಸಿ, ವಂದಿಸಿದರು.