
ಲಕ್ಷ್ಮೇಶ್ವರ,ಆ1: ತಾಲೂಕಿನ ಬಾಲೆಹೊಸೂರು ಗ್ರಾಮ ಪಂಚಾಯಿತಿಯ ಎರಡನೆಯ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸೋಮವಾರ ಜರುಗಿತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಎರಡೆರಡು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಪರಿಶೀಲಿಸಿದ ಚುನಾವಣಾ ಅಧಿಕಾರಿ ಚಂದ್ರಶೇಖರ ಗೌಡ ನರಸಮ್ಮನವರ ಅವರು ಕ್ರಮಬದ್ಧವಾಗಿದ್ದು ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶ ನೀಡಿದರು.
ಆದರೆ ಯಾರೊಬ್ಬರೂ ನಾಮಪತ್ರ ಹಿಂಪಡೆಯದ್ದರಿಂದ ಚುನಾವಣೆ ಅನಿವಾರ್ಯವಾಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಚೆನ್ನವ್ವ ಕೆಂಚಪ್ಪ ಮೈಲಾರಿ ಮತ್ತು ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ರೇಖಾ ಕರಿಯಪ್ಪ ಸಾಂದಲಿ ಚುನಾವಣಾ ಕಣದಲ್ಲಿ ಉಳಿದರು.
ಒಟ್ಟು 15 ಜನ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚೆನ್ನವ್ವ ಕೆಂಚಪ್ಪ ಮೈಲಾರಿ 8 ಮತಗಳನ್ನು ರೇಖಾ ಕರಿಯಪ್ಪ ಸಾಂದಲಿ ಏಳು ಮತಗಳನ್ನು ಪಡೆದರು . ಎಂಟು ಮತಗಳನ್ನು ಪಡೆದ ಚೆನ್ನವ್ವ ಮೈಲಾರಿಯವರನ್ನು ಅಧ್ಯಕ್ಷರಿಗೆ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನಂತರ ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಸಿದ್ದಪ್ಪನೆನಗನಹಳ್ಳಿ ಮತ್ತು ಸೌಭಾಗ್ಯ ಜುಂಜಪ್ಪ ಮುದಿಯಮ್ಮನವರ ಸ್ಪರ್ಧಿಸಿದ್ದರು. ರೇಖಾ ಎಸ್ ನನಗನಹಳ್ಳಿ ಅವರಿಗೆ ಒಂಬತ್ತು ಮತಗಳು ಸೌಭಾಗ್ಯ ಮುದಿಯಮ್ಮನವರ ಅವರಿಗೆ ಆರು ಮತಗಳು ಚಲಾವಣೆಯಾದವು ಒಂಬತ್ತು ಮತಗಳನ್ನು ಪಡೆದ ಬಿಜೆಪಿಯ ರೇಖಾ ಎಸ್ ನನಗನಹಳ್ಳಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಬಾಲೆಹೊಸೂರು ಗ್ರಾಮ ಪಂಚಾಯಿತಿ ಗೆ ಸೋಮುವಾರದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಚೆನ್ನವ್ವ ಮೈಲಾರಿ ಅಧ್ಯಕ್ಷರಾಗಿಯೂ ರೇಖಾ ನೆನಗನಹಳ್ಳಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಪಿಡಿಒ ವಡಕಣಗೌಡರ, ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ವಿರೂಪಾಕ್ಷಪ್ಪ ಮರಳಿಹಳ್ಳಿ ನಾಗಯ್ಯ ಮಠಪತಿ, ಸಿದ್ದಪ್ಪ ನನಗನಹಳ್ಳಿ ರಮೇಶ ಜೋಗೇರ್ ಮಾರುತಿ ಸತ್ಯಮ್ಮನವರ ಮಲ್ಲಪ್ಪ ಸಾಲಿ ನಿಂಗಪ್ಪ ಪ್ಯಾಟಿ ಸುರೇಶ್ ಗಾಣಿಗೇರ್ ದೇವೇಂದ್ರಪ್ಪ ಮರಳಿಹಳ್ಳಿ ಮಹಾರುದ್ರಪ್ಪ ಬಡಿಗೇರ್ ಎಲ್ಲಪ್ಪ ಮಿಳ್ಳಿ ಮತ್ತು ಪಕೀರಪ್ಪ ಸೇರಿದಂತೆ ಅನೇಕರಿದ್ದರು ಕಾರ್ಯಕರ್ತರು ಬಿಜೆಪಿ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.
ಸಿ ಪಿ ಐ ವಿಕಾಸ ಲಮಾಣಿ ಅವರ ನೇತೃತ್ವದಲ್ಲಿ ಪೆÇಲೀಸ್ ಬಂದೋಬಸ್ ಏರ್ಪಡಿಸಲಾಗಿತ್ತು.