ಬಾಲಿವುಡ್ ನಲ್ಲಿ ಮತ್ತೆ ಕೊರೊನಾ ಇಫೆಕ್ಟ್: ನಟ-ನಟಿಯರ ಸೆಕ್ಯುರಿಟಿಯಲ್ಲಿ ೫೦ ಶೇಕಡಾ ಕಡಿತ, ಡಿಸೈನರ್ ಬಟ್ಟೆಗಳ ಬೇಡಿಕೆಯೂ ಕುಸಿತ

ಬಾಲಿವುಡ್ ನಲ್ಲಿ ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸುತ್ತಿದೆ .ದೊಡ್ಡ ದೊಡ್ಡ ಸ್ಟಾರ್ ಗಳ ಸ್ಥಿತಿ ಸ್ವಲ್ಪವಾದರೂ ಓಕೆ. ಆದರೂ ಅವರಲ್ಲಿ ಅನೇಕರು ಮಾನಸಿಕ ಅಶಾಂತಿಯಲ್ಲಿರುವುದು ಕಂಡುಬರುತ್ತಿದೆ. ಬಿ ಮತ್ತು ಸಿ ಗ್ರೇಡ್ ನ ಕಲಾವಿದರಂತೂ
ಕಳೆದ ಹನ್ನೆರಡು ತಿಂಗಳಿಂದ ಇನ್ನೂ ಶೋಚನೀಯ ಸ್ಥಿತಿಯಲ್ಲಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕುರೋಗ ಯಾವ ರೀತಿ ವೇಗವಾಗಿ ಪ್ರಸಾರವಾಗುತ್ತಿದೆಯೋ ಅದರಿಂದ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿ ತುಂಬಾ ಪ್ರಭಾವಕ್ಕೊಳಗಾಗಿದೆ. ಕಳೆದ ಒಂದು ವರ್ಷದಿಂದ ಅನೇಕ ಸಣ್ಣ ಕಲಾವಿದರು, ಟೆಕ್ನಿಶಿಯನ್ಸ್ ಮಾಯಾನಗರಿಗೆ ಒಂದು ರೀತಿಯಲ್ಲಿ ವಿದಾಯವನ್ನೇ ಹೇಳಿ ತಮ್ಮ ತಮ್ಮ ಊರಿಗೆ ತೆರಳಿದ್ದಾರೆ.ಅತ್ತ ಸ್ಟಾರ್ ಗಳು ತಮ್ಮ (ಮನೆಯ) ಸೆಕ್ಯೂರಿಟಿಗಳನ್ನೂ ಕಡಿಮೆಗೊಳಿಸಿದ್ದಾರೆ. ಮತ್ತೊಂದೆಡೆ ಡಿಸೈನರ್ ಬಟ್ಟೆಗಳ ಡಿಮಾಂಡು ಕೂಡ ಅರ್ಧದಷ್ಟು ಕುಸಿದಿದೆ. ಕೆಲವರು ತಮ್ಮ ಲೈಫ್ ಸ್ಟೈಲ್ ಬದಲಿಸಿದ್ದಾರೆ.ಮತ್ತು ತಮ್ಮ ಅನೇಕ ಪ್ರಾಪರ್ಟಿಗಳನ್ನು ಮಾರಿದ್ದಾರೆ.
ಕೆಲವರಂತೂ ಬಾಲಿವುಡ್ ಸೆಲೆಬ್ಸ್ ಗಳು ಶೇರ್ ಮಾರ್ಕೆಟ್ ಮತ್ತು ಮ್ಯೂಚುವಲ್ ಫಂಡ್ ನಲ್ಲಿ ತಮ್ಮ ಹಣವನ್ನು ತೊಡಗಿಸಿಕೊಂಡು ಅದೃಷ್ಟ ಪರೀಕ್ಷಿಸಿದ್ದಾರೆ. ಕೊರೊನಾ ಆಘಾತದಿಂದ ಸಂಪಾದನೆಯ ರಸ್ತೆ ಬಂದ್ ಆದನಂತರ ಬಾಲಿವುಡ್ ಸ್ಟಾರ್ ಗಳು ಹೂಡಿಕೆ ಮಾಡುವುದನ್ನು ನಿಲ್ಲಿಸಿದ್ದು ಆ ಮೂಲಕ ಬರುತ್ತಿದ್ದ ಸಂಪಾದನೆಯನ್ನೂ ಕಳೆದುಕೊಳ್ಳುತ್ತಿದ್ದಾರೆ.
೨೦೨೧ರ ಆರಂಭದಲ್ಲಿ ಇಂಡಸ್ಟ್ರಿಗೆ ಒಂದಿಷ್ಟು ಉಮೇದು ಕಂಡುಬಂದಿತ್ತು. ಸಿನಿಮಾ ಟಾಕೀಸ್ ಮತ್ತು ಮಲ್ಟಿಪ್ಲೆಕ್ಸುಗಳಲ್ಲಿ ಒಂದಷ್ಟು ಹೊಸ ಉತ್ಸಾಹವನ್ನೂ ನೋಡಲಾಗಿತ್ತು .ಬಾಲಿವುಡ್ ನ ಅನೇಕ ಪ್ರೊಡಕ್ಷನ್ ಹೌಸ್ ಗಳು ತಮ್ಮ ಫಿಲ್ಮ್ ಗಳನ್ನು ಟಾಕೀಸುಗಳಲ್ಲಿ ರಿಲೀಸ್ ಮಾಡಲು ತಾರೀಕುಗಳನ್ನು ಕೂಡ ನಿಶ್ಚಯಿಸಿದ್ದರು. ಆದರೆ ಕಳೆದ ಹದಿನೈದು-ಇಪ್ಪತ್ತು ದಿನಗಳಿಂದ ಕೊರೊನಾದ ಎರಡನೆಯ ಅಲೆಯ ಕಾರಣ ಪ್ರೊಡ್ಯೂಸರ್ ಗಳು ಮತ್ತೆ ತಮ್ಮ ಫಿಲ್ಮ್ ಗಳನ್ನು ರಿಲೀಸ್ ಮಾಡಲು ಭಯಪಟ್ಟು, ಫಿಲ್ಮ್ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತಿದ್ದಾರೆ.


ವರ್ಷ ೨೦೧೯ರಲ್ಲಿ ಬಾಲಿವುಡ್ ನಲ್ಲಿ ಒಟ್ಟು ೧,೮೩೩ ಫಿಲ್ಮ್ ಗಳು ರಿಲೀಸ್ ಆಗಿತ್ತು. ಆದರೆ ೨೦೨೦ರಲ್ಲಿ ಕೇವಲ ೪೪೧ ಫಿಲ್ಮ್ ಗಳು ಮಾತ್ರ ರಿಲೀಸ್ ಆಗಿವೆ.
ಫಿಲ್ಮ್ ಗಳ ಮೂಲಕ ಟಾಕೀಸುಗಳಿಂದ ಬರುವ ರೆವೆನ್ಯೂ ಕೂಡಾ ೮೦ ಶೇಕಡಾ ತನಕ ಇಳಿದಿದೆ. ಎಂಟರ್ಟೈನ್ಮೆಂಟ್ ಸೆಕ್ಟರ್ ನ ಒಟ್ಟು ಆದಾಯ ಹಿಂದಿಗಿಂತ ೨೪ ಶೇಕಡಾ ಕಡಿಮೆಯಾಗಿದೆ.
ಇಂದು ಸ್ಟಾರ್ ಡಿಸೈನರ್ ಡ್ರೆಸ್ ಗಳ ಆರ್ಡರ್ ಕಡಿಮೆಯಾಗುತ್ತಿದೆ. ಶೂಟಿಂಗ್ ನ ಹೊರತಾಗಿ ರೆಡ್ ಕಾರ್ಪೆಟ್ ಪಾರ್ಟಿ, ಖಾಸಗಿ ಮೀಟಿಂಗ್ ಗಳನ್ನು ಇವತ್ತು ಅನೇಕರು ನಿಲ್ಲಿಸಿದ್ದಾರೆ. ಇಂತಹ ಪಾರ್ಟಿಗಳಿಗಾಗಿ ಸ್ಟಾರ್ಸ್ ಡ್ರೆಸ್ ಆರ್ಡರ್ ಮಾಡುತ್ತಿದ್ದವರು ೫೦ ಶೇಕಡ ಕಡಿತ ಮಾಡಿದ್ದಾರೆ .ಇಲ್ಲಿ ಒಂದು ಡ್ರೆಸ್ಸ್ ನ ಬೆಲೆ ಕೆಲವೊಮ್ಮೆ ಹತ್ತು ಸಾವಿರದಿಂದ ಹಿಡಿದು ಹತ್ತು ಲಕ್ಷ ರೂಪಾಯಿ ತನಕವೂ ಇರುತ್ತದೆ.ಅದೆಲ್ಲದರ ಬೇಡಿಕೆ ಈವಾಗ ಇಳಿದಿದೆ.
ಸೆಲೆಬ್ರಿಟಿಗಳ ಫ್ಯಾಶನ್ ಡಿಸೈನರ್ ’ಬಾಜಿರಾವ್ ಮಸ್ತಾನಿ’ ಮತ್ತು ’ರಾಮಲೀಲಾ’ ಇದರ ಕಾಸ್ಟ್ಯೂಮ್ ಡಿಸೈನರ್ ಅಂಜು ಮೋದಿ ಹೇಳುತ್ತಾರೆ – ಮೊದಲು ಪ್ರತೀದಿನ ನನ್ನ ಬಳಿ ಪ್ರಮುಖ ಕಲಾವಿದರ ಡ್ರೆಸ್ಸುಗಳ ಆರ್ಡರ್ ಬರುತ್ತಿತ್ತು .ಆದರೆ ಕೊರೊನಾ ಕಾಲದ ನಂತರ ಅದೆಲ್ಲ ಅರ್ಧಕ್ಕರ್ಧ ಇಳಿದಿದೆ. ಹೀಗಾಗಿ ನನ್ನ ೫೦ ಶೇಕಡಾ ಕೆಲಸಗಾರರನ್ನು ಕಡಿಮೆ ಮಾಡಬೇಕಾಯಿತು(ಅರ್ಥಾತ್ ಕೆಲಸದಿಂದ ತೆಗೆದು ಹಾಕಿದ್ದಾರೆ) ಎಂದು.
ಅದೇರೀತಿ ಬಾಲಿವುಡ್ ನ ಸ್ಟಾರ್ ಗಳ ಸೆಕ್ಯೂರಿಟಿ ಕೂಡ ೫೦ ಶೇಕಡಾ ಇಳಿಕೆಯಾಗಿದೆ. ಬಹಳ ಹಳೆಯದಾದ ಸೆಕ್ಯೂರಿಟಿ ಅಸೋಸಿಯೇಶನ್ ಆಫ್ ಇಂಡಿಯಾದ ಪ್ರೆಸಿಡೆಂಟ್ ಗುರುಚರಣ್ ಸಿಂಗ್ ಚೌಹಾನ್ ಹೇಳುವಂತೆ ದೇಶಾದ್ಯಂತ ಗಣ್ಯರಿಗೆ ಇವರು ಸೆಕ್ಯೂರಿಟಿ ನೀಡುತ್ತಾರೆ.ಇದರಲ್ಲಿ ೫ ಶೇಕಡ ಸೆಕ್ಯುರಿಟಿ ಬಾಲಿವುಡ್ ಎಂಟರ್ಟೈನ್ ಮೆಂಟ್ ಗೆ ಇರುತ್ತದೆ. ಆದರೆ ಕೊರೊನಾ ಕಾಲದ ನಂತರ ಬಾಲಿವುಡ್ ಸ್ಟಾರ್ ಗಳು ಐವತ್ತು ಶೇಕಡಾ ಸೆಕ್ಯೂರಿಟಿಗಳನ್ನು ಕಡಿಮೆ ಮಾಡಿದ್ದಾರೆ ಎನ್ನುತ್ತಾರೆ.
ಇನ್ನೂ ಒಂದು ಕಾರಣ ಅಂದರೆ ಇವೆಂಟ್ ಪಾರ್ಟಿ ಸಮಾರಂಭಗಳು ನಿಂತುಹೋಗಿವೆ. ಸರಕಾರವು ಇವರಿಗೆ ಫ್ರೀ ವ್ಯಾಕ್ಸಿನ್ ನೀಡುವ ಸೂಚಿಯಲ್ಲಿಯೂ ಇವರನ್ನು ಸೇರಿಸಿಲ್ಲವಂತೆ.


ಮುಂಬೈಯ ಪ್ರಮುಖ ಕಂಪನಿಯೊಂದರ ಚೀಫ್ ಆಪರೇಟಿಂಗ್ ಆಫೀಸರ್ ಹೇಳುವಂತೆ ಮುಂಬೈಯ ಬಾಲಿವುಡ್ ಮತ್ತು ಎಂಟರ್ನ್ಮೆಂಟ್ ಸೆಕ್ಟರ್ ನ ಜನರು ಈವಾಗ ಶೇರು ಮಾರ್ಕೆಟ್ ನಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ .ಬೇರೆ ಬೇರೆ ಫಂಡ್ಸ್ ಗಳಲ್ಲಿ ಇನ್ವೆಸ್ಟ್ ಮಾಡುತ್ತಿದ್ದಾರೆ .ಅನೇಕರು ರಿಲಯನ್ಸ್ ಓಲಾ, ಜಮೆಟೋ ಮತ್ತು ಫಾರ್ಮ್…. ಇಂತಹ ಕಂಪನಿಗಳ ಷೇರಿನಲ್ಲಿ ತಮ್ಮ ಹಣವನ್ನು ತೊಡಗಿಸಿಕೊಂಡಿದ್ದಾರೆ .
ಇದೇ ಸಮಯ ದೊಡ್ಡ ಸ್ಟಾರ್ ಗಳು ಡಿಪ್ರೆಶನ್ ಗೆ ಒಳಗಾಗಿರುವ ಸುದ್ದಿಗಳೂ ಬರುತ್ತಿವೆ. ಹಲವರು ಕಷ್ಟಗಳನ್ನು ಅನುಭವಿಸುತ್ತಿದ್ದು ಆರ್ಥಿಕ ಸಂಕಟದಲ್ಲಿ ಕೂಡಾ ಮುಳುಗಿದ್ದಾರೆ.
’ಇಂಡಿಯನ್ ಫಿಲ್ಮ್ ಆಂಡ್ ಟೆಲಿವಿಷನ್ ಪ್ರೊಡ್ಯೂಸರ್ಸ್ ಕೌನ್ಸಿಲ್ ಟಿವಿ ಆಂಡ್ ವೆಬ್ ಸೀರೀಸ್’ ಇದರ ಚಯರ್ ಪರ್ಸನ್ ಜೆಡಿ ಮಜಿಟಿಯಾ ಹೇಳುವಂತೆ ಅನೇಕರು ತಮ್ಮ ದುಬಾರಿ ಡ್ರೆಸ್ ಗಳನ್ನು ಧರಿಸುತ್ತಿಲ್ಲ, ಪಾರ್ಲರ್ ಗಳಿಗೆ ಹೋಗುತ್ತಿಲ್ಲ, ದುಬಾರಿ ಹೋಟೆಲ್ ಗಳಲ್ಲಿ ಊಟ ತಿಂಡಿ ಮಾಡುತ್ತಿಲ್ಲ, ದುಬಾರಿ ಶೂಸ್ ಧರಿಸುವುದನ್ನೂ ನಿಲ್ಲಿಸಿದ್ದಾರೆ.
ವರ್ಷ ೨೦೨೦ ರಲ್ಲಿ ’ಫೋರ್ಬ್’ ಸೂಚಿಯ ಟಾಪ್ ಟೆನ್ ನಲ್ಲಿ ಹೆಚ್ಚು ಸಂಪಾದಿಸುವ ನಟರಲ್ಲಿ ಭಾರತದ ಕೇವಲ ಅಕ್ಷಯಕುಮಾರ್ ಮಾತ್ರ ಇದ್ದರು. ಅವರು ವಾರ್ಷಿಕ ೩೬೨ ಕೋಟಿ ರೂಪಾಯಿ ಸಂಪಾದನೆ ಮಾಡುವ ಸೂಚಿಯಲ್ಲಿದ್ದು, ೬ನೇ ಸ್ಥಾನದಲ್ಲಿದ್ದರು.


೨೦೨೦ ರಲ್ಲಿ ಫಿಲ್ಮ್ ನ ಅತಿಹೆಚ್ಚು ಫೀಸ್ ಪಡೆಯುವ ಪ್ರಕರಣದಲ್ಲಿ ಬಾಲಿವುಡ್ ಇಂಡಸ್ಟ್ರಿಯ ಐವರು ಪ್ರಮುಖ ಕಲಾವಿದರೆಂದರೆ ಅಕ್ಷಯಕುಮಾರ್, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಮತ್ತು ಅಜಯ್ ದೇವಗನ್.
ಅಮೀರ್ ಖಾನ್ ೨೦೨೦ರಲ್ಲಿ ಯಾವುದೇ ಫಿಲ್ಮ್ ನಲ್ಲಿ ಕಾಣಿಸದಿದ್ದರೂ ’ಲಾಲ್ ಸಿಂಗ್ ಛಡ್ಡಾ’ ಫಿಲ್ಮ್ ನ ಫೀಸ್ ಆಧಾರದಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದರು. ಏನೇ ಇರಲಿ,ಕೊರೊನಾ ಸೋಂಕು ಎರಡನೇ ಅಲೆ ಮುಂಬೈಯಲ್ಲಿ ಮತ್ತೆ ಹಾಹಾಕಾರ ಎಬ್ಬಿಸುತ್ತಿದೆ.

ಕಿರಣ ಖೇರ್ ಗೆ ಶುಭ ಹಾರೈಸಿದವರಿಗೆ ಅನುಪಮ್ ರಿಂದ ಧನ್ಯವಾದ

ಬ್ಲಡ್ ಕ್ಯಾನ್ಸರ್ ನಿಂದ ನರಳುತ್ತಿರುವ ಪತ್ನಿ ಮತ್ತು ಚಂಡೀಗಡ್ ನ ಭಾಜಪಾ ಸಂಸದೆ ಕಿರಣ ಖೇರ್ ಅವರು ಶೀಘ್ರವೇ ಗುಣಮುಖರಾಗಿ ಬರಲಿ ಎಂದು ಹಾರೈಸಿದ ಎಲ್ಲ ಅಭಿಮಾನಿಗಳಿಗೆ ಅನುಪಮ್ ಖೇರ್ ಕೃತಜ್ಞತೆ ಹೇಳಿದ್ದಾರೆ.


ನನ್ನ ಪ್ರೀತಿಯ ಸ್ನೇಹಿತರೇ, ನಿಮ್ಮೆಲ್ಲರ ಶುಭ ಹಾರೈಕೆಗಳಿಂದ ಅವರು ಬೇಗನೆ ಗುಣವಾಗುವರು ಎಂದು ನಾನೂ ಆಶಿಸಿದ್ದೇನೆ.ನಿಮಗೆಲ್ಲ ನನ್ನ ಪ್ರೀತಿಯ ಕೃತಜ್ಞತೆಗಳು ಎಂದಿದ್ದಾರೆ ಅನುಪಮ್.
೬೮ ವರ್ಷದ ಕಿರಣ ಖೇರ್ ಅವರಿಗೆ ಎಪ್ರಿಲ್ ಒಂದರಂದು ಬ್ಲಡ್ ಕ್ಯಾನ್ಸರ್ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಅದಕ್ಕಿಂತ ಮೊದಲು ಟ್ರೀಟ್ಮೆಂಟ್ ನಡೆಯುತ್ತಿದೆ ಎಂದಷ್ಟೇ ಹೇಳಿದ್ದರು.
೧೯೮೩ ರಲ್ಲಿ ಪಂಜಾಬಿ ಫಿಲ್ಮ್ ನಲ್ಲಿ ಅಭಿನಯಿಸುವ ಮೂಲಕ ಅವರು ಫಿಲ್ಮ್ ರಂಗಕ್ಕೆ ಇಳಿದಿದ್ದರು.