ಬಾಲಿವುಡ್ ನಲ್ಲಿ ಕ್ರೀಡಾಕ್ಷೇತ್ರದ ಬಯೋಪಿಕ್: ’ಸೈನಾ’ ಫಿಲ್ಮ್ ಗಿಂತ ಮೊದಲೂ ದೇಶದ ಉತ್ತಮ ಕ್ರೀಡಾಪಟುಗಳ ಕುರಿತು ಬಾಲಿವುಡ್ ನಲ್ಲಿ ಬಂದಿವೆ ಹತ್ತಾರು ಫಿಲ್ಮ್ ಗಳು

ಪರಿಣಿತಿ ಚೋಪ್ರಾ ಅಭಿನಯದ ಬಯೋಗ್ರಾಫಿಕಲ್ ಫಿಲ್ಮ್ ’ಸೈನಾ’ ಮಾರ್ಚ್ ೨೬ರಂದು ಸಿನಿಮಾ ಟಾಕೀಸುಗಳಲ್ಲಿ ಬಿಡುಗಡೆಯಾಗಿತ್ತು .ಅನೇಕ ತಿಂಗಳುಗಳಿಂದ ಬಿಡುಗಡೆಗೆ ಈ ಫಿಲ್ಮ್ ಕಾದುಕೊಂಡಿತ್ತು. ಅಂತೂ ಕೊನೆಗೆ ಮಾರ್ಚ್ ೨೬ರಂದು ರಿಲೀಸ್ ಆಗಿದೆ .ಫಿಲ್ಮ್ ನಲ್ಲಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್ ಅವರ ಪಾತ್ರದಲ್ಲಿ ಕಂಡು ಬಂದಿದ್ದಾರೆ .ಫಿಲ್ಮ್ ನಲ್ಲಿ ಸೈನಾ ಅವರ ಅತ್ಯುತ್ತಮ ಬ್ಯಾಡ್ಮಿಂಟನ್ ಪಯಣವನ್ನು ಕಾಣಿಸಲಾಗಿದೆ. ಇದಕ್ಕಿಂತ ಮೊದಲು ಕೂಡ ಭಾರತದ ಅನೇಕ ಉತ್ತಮ ಕ್ರೀಡಾಪಟುಗಳ ಕುರಿತಂತೆ ಸುಂದರ ಕಥೆಗಳು ಬಾಲಿವುಡ್ ನಲ್ಲಿ ಬಂದಿವೆ.
ಕ್ರೀಡಾಪಟುಗಳು ಸದಾಕಾಲ ಭಾರತದ ಜನತೆಯ ಮನದಲ್ಲಿ ಅಚ್ಚೊತ್ತಿದ್ದಾರೆ. ಅವರ ಕುರಿತಂತೆ ಫಿಲ್ಮ್ ನಿರ್ಮಿಸುವುದು ಮೇಕರ್ಸ್ ಗಳ ಫೇವರೆಟ್ ಟಾಪಿಕ್ ಆಗಿದೆ. ಭಾಗ್ ಮಿಲ್ಕಾ ಭಾಗ್, ಧೋನಿ : ದ ಅನ್ ಟೋಲ್ಡ್ ಸ್ಟೋರಿ,ದಂಗಲ್, ಮೇರಿಕಾಮ್… ಇಂತಹ ಫಿಲ್ಮ್ ಗಳನ್ನು ಪ್ರೇಕ್ಷಕರು ಮರೆಯುವಂತಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ನಡುವೆಯೂ ಧೈರ್ಯದಿಂದ ಮಾರ್ಚ್ ೨೬ರಂದು ’ಸೈನಾ’ ಫಿಲ್ಮ್ ಬಿಡುಗಡೆಯಾಗಿದೆ. ಇದರ ನಿರ್ದೇಶಕ ಅಮೋಲ್ ಗುಪ್ತೆ ಹೇಳುತ್ತಾರೆ- “ಫಿಲ್ಮ್ ರಿಲೀಸ್ ಮಾಡುವುದು ನನ್ನ ಕೈಯಲ್ಲಿಲ್ಲ. ಅದು ವಿತರಕರು ಮತ್ತು ನಿರ್ಮಾಪಕರ ಕೈಯಲ್ಲಿದೆ. ಯಾರಿಗೆ ಗೊತ್ತು ಮುಂದಿನ ಆರು ತಿಂಗಳಲ್ಲಿ ಏನಾಗಲಿದೆ ಎಂದು! ಆಲ್ರೆಡಿ ಫಿಲ್ಮ್ ಬಿಡುಗಡೆ ಲೇಟಾಗಿದೆ .ನಾಳೆಯ ದಿನ ಏನಾಗುವುದೋ ಯಾರಿಗೆ ಗೊತ್ತು. ನಾನು ಈ ಫಿಲ್ಮನ್ನು ಭಾರತದ ಮಗಳು ಸೈನಾ ನೆಹವಾಲ್ ಅವರನ್ನು ಮತ್ತು ಅಂಥವರನ್ನು ಮುಂದಿಟ್ಟು ಮಾಡಿದ್ದೇನೆ. ಒಂದು ಸಾಧಾರಣ ಹುಡುಗಿ ವಿಶ್ವ ನಂಬರ್ ವನ್ ಆಗಬಹುದು. ಇದು ಬಹಳ ಪ್ರಚೋದನಕಾರಿ ಫಿಲ್ಮ್ ಆಗಿದೆ” ಎನ್ನುತ್ತಾರೆ .
ಕ್ರೀಡಾಪಟುಗಳ ಕುರಿತು ಬಾಲಿವುಡ್ ನಲ್ಲಿ ಬಂದ ಕೆಲವು ಫಿಲ್ಮ್ ಗಳು ಹೀಗಿವೆ-
ಸಾಂಡ್ ಕೀ ಆಂಖ್:
ಇದು ೨೦೧೯ ರಲ್ಲಿ ಬಿಡುಗಡೆಗೊಂಡಿತ್ತು ಇದು ಶೂಟಿಂಗಿಗೆ ಸಂಬಂಧಿಸಿತ್ತು ಇದರಲ್ಲಿ ಭೂಮಿ ಪೆಡ್ನೇಕರ್ ಮತ್ತು ತಾಪಸಿ ಪನ್ನು ಅವರು ಶೂಟಿಂಗ್ ಪಟುಗಳಾದ ಪ್ರಕಾಶ ತೋಮರ್ ಮತ್ತು ಚಂದ್ರೊ ತೋಮರ್ ಅವರ ಪಾತ್ರವನ್ನು ನಿರ್ವಹಿಸಿದ್ದರು ಇಬ್ಬರು ಮಹಿಳೆಯರು ಶಾರ್ಪ್ ಶೂಟಿಂಗ್ನಲ್ಲಿ ಖ್ಯಾತಿ ಪಡೆದಿದ್ದರು.
ಸೂರ್ಮಾ:


೨೦೧೮ ರಲ್ಲಿ ಬಂದ ಫಿಲಂ ಸೂರ್ಮಾ ಹಾಕಿ ಪ್ಲೇಯರ್ಸ್ ಸಂದೀಪ್ ಸಿಂಗ್ ಅವರ ಕಥೆಯಾಗಿದೆ ಫಿಲಂನಲ್ಲಿ ದಿಲ್ಜೀತ್ ದೊಸಾಂಝ ತಾಪಸಿ ಪನ್ನೂ ಮತ್ತು ಅಂಗದ್ ಬೇಡಿ ಮುಖ್ಯ ಪಾತ್ರದಲ್ಲಿದ್ದರು ಈ ಫಿಲ್ಮ್ನಲ್ಲಿ ಯಾವ ರೀತಿಯ ಒಂದು ದುರ್ಘಟನೆಯ ನಂತರ ಸಂದೀಪ್ ಜಬರ್ದಸ್ತಿ ಕಮ್ ಬ್ಯಾಕ್ ಆಗಿದ್ದರು ಎನ್ನುವುದು ತೋರಿಸಿದ್ದರು.
ಎಂ ಎಸ್ ಧೋನೀ:ದ ಅನ್ಟೋಲ್ಡ್ ಸ್ಟೋರಿ:
೨೦೧೬ರಲ್ಲಿ ಬಂದ ಈ ಫಿಲ್ಮ್ ಭಾರತೀಯ ಕ್ರಿಕೆಟ್ ಟೀಮಿನ ಮಾಜಿ ಕಪ್ತಾನ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಬದುಕಿನ ಆಧಾರಿತವಾಗಿದ್ದು ಹಾಗೂ ಫಿಲ್ಮಿ ಹಿಟ್ಟು ಎನ್ನಿಸಿತು ಫಿಲಂನಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಾಜಪೂತ್ ಎಂಎಸ್ ಧೋನಿ ಅವರ ಪಾತ್ರದಲ್ಲಿ ಅಭಿನಯಿಸಿದ್ದರು ಯಾವ ರೀತಿ ರೈಲ್ವೆ ಟಿಕೆಟ್ ಕಲೆಕ್ಟರ್ ನೌಕರಿಯನ್ನು ತ್ಯಜಿಸಿ ಕ್ರಿಕೆಟ್ ಕೆರಿಯರ್ ನತ್ತ ಗಮನಹರಿಸಿ ಒಬ್ಬ ಯಶಸ್ವಿ ಕ್ರಿಕೆಟರ್ ಆಗಿರುವ ಕಥೆಯನ್ನು ಇಲ್ಲಿ ಕಾಣಬಹುದು ಈ ಫಿಲಂನಲ್ಲಿ ದಿಶಾ ಪಾಟ್ನಿ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
ಮೇರಿ ಕಾಮ್:


ವರ್ಷ ೨೦೧೪ ರಲ್ಲಿ ರಿಲೀಸ್ ಆಗಿರುವ ಎಂ ಸಿ.ಮೇರಿ ಕಾಮ್ ಫಿಲ್ಮ್ ನಟಿ ಪ್ರಿಯಾಂಕ ಚೋಪ್ರಾ ಅವರು ಬಾಕ್ಸರ್ ಮೇರಿ ಕಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೂರ್ವೋತ್ತರ ಭಾರತಕ್ಕೆ ಸಂಬಂಧಿಸಿರುವ ಮೇರಿ ಕಾಮ್ ರಂತೆ ಕಾಣಲು ಪ್ರಿಯಾಂಕಾ ಚೋಪ್ರಾ ಕೂಡ ಜಬರ್ದಸ್ತ್ ಶರೀರವನ್ನು ಅದಕ್ಕೆ ಒಗ್ಗಿಸಿಕೊಂಡಿದ್ದರು. ಅರ್ಥಾತ್ ಸಿಕ್ಸ್ ಪ್ಯಾಕ್ ಏಬ್ಸ್ ಕೂಡಾ ಕಾಣಿಸಿಕೊಂಡಿದ್ದರು ಯಾವ ರೀತಿ ಎಸ್ ಸಿ ಮೇರಿಕಾಮ್ ಸಂಘರ್ಷದಿಂದ ಯಶಸ್ವಿಯನ್ನು ಪಡೆದಿರುವರು ಮತ್ತು ತಾಯಿಯಾದ ನಂತರವೂ ಜಬರ್ದಸ್ತ್ ವಾಪಾಸ್ ಆಗಿರುವುದನ್ನು ಕಾಣಿಸಲಾಗಿದೆ.
ಬುಧಿಯಾ ಸಿಂಗ್- ಬಾರ್ನ್ ಟೂ ರನ್:


ವರ್ಷ ೨೦೧೬ರಲ್ಲಿ ರಿಲೀಸ್ ಆಗಿರುವ ಈ ಫಿಲ್ಮ್ ಬುಧಿಯಾ ಸಿಂಗ್ ಬಾರ್ನ್ ಟೂ ರನ್ ಐದು ವರ್ಷದ ಮಗು ಬುಧಿಯಾ ಆಧಾರಿತ ಫಿಲ್ಮ್ ಆಗಿತ್ತು ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದ ಫಿಲ್ಮ್ ನಲ್ಲಿ ಮನೋಜ್ ಬಾಜಪೇಯಿ ಬುಧಿ ಯಾನ ಕೋಚ್ ನ ಪಾತ್ರವನ್ನು ನಿರ್ವಹಿಸಿದ್ದರು ಯಾವ ರೀತಿ ಬುಧಿಯಾ ಬಾಲ್ಯದಿಂದಲೇ ದೊಡ್ಡ ಯಶಸ್ಸನ್ನು ಸಾಧಿಸಿದ್ದ ಎಂದು ತೋರಿಸಲಾಗಿದೆ ಐದು ವರ್ಷದ ಮಗುವಿಗೆ ಟ್ರೈನಿಂಗ್ ನೀಡುವ ಕೋಚ್ ಕೂಡ ಯಾವ ರೀತಿ ವಿವಾದ ಮತ್ತು ಆರೋಪಗಳಿಂದ ಸುತ್ತುವರಿದಿದ್ದರು ಎನ್ನುವುದನ್ನು ತೋರಿಸಲಾಗಿತ್ತು
ದಂಗಲ್;


೨೦೧೬ ರಲ್ಲಿ ಬಂದ ದಂಗಲ್ ಫಿಲ್ಮ್ ಅಮೀರ್ ಖಾನ್, ಜಾಯ್ರಾ ವಸೀಮ್, ಸಾನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್,ಮತ್ತು ಸಾಕ್ಷಿ ತಂವರ್ ಅಭಿನಯಿಸಿದ್ದರು. ಫಿಲ್ಮ್ ದಂಗಲ್ ಫೊಗಾಟ್ ಸಿಸ್ಟರ್ ಮತ್ತು ಅವರ ತಂದೆ ಮಹಾವೀರ್ ಫೊಗಾಟ್ ಕುರಿತಂತೆ ನಿರ್ಮಿಸಲಾಗಿತ್ತು .ಇಬ್ಬರು ಸಹೋದರಿಯರು ಕುಸ್ತಿಯಲ್ಲಿ ಅನೇಕ ಮೆಡಲ್ ಗಳನ್ನು ಪಡೆದಿದ್ದರು.
ಭಾಗ್ ಮಿಲ್ಖಾ ಭಾಗ್:


೨೦೧೩ ರಲ್ಲಿ ಬಿಡುಗಡೆಯಾದ ಭಾಗ್ ಮಿಲ್ಕಾ ಭಾಗ್ ಫ್ಲೈಯಿಂಗ್ ಸಿಖ್ ಎಂಬ ಹೆಸರಿನ ಪಾಪುಲರ್ ಆಟಗಾರ ಮಿಲ್ಖಾ ಸಿಂಗ್ ಅವರ ಬದುಕಿನ ಕತೆ ಆಧಾರಿತವಾಗಿದೆ .ಮಿಲ್ಖಾ ಸಿಂಗ್ ಕಾಮನ್ವೆಲ್ತ್ ಗೇಮ್ ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದ ಮೊದಲ ಭಾರತೀಯ ಓಟಗಾರ ಆಗಿದ್ದರು. ಈ ಫಿಲ್ಮ್ ಬಾಕ್ಸಾಫೀಸ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದೆ. ಫರಾನ ಅಖ್ತರ್ ಅವರ ಅಭಿನಯಕ್ಕೂ ಒಳ್ಳೆಯ ಪ್ರಶಂಸೆ ಸಿಕ್ಕಿತ್ತು.
ಪಾನ್ ಸಿಂಗ್ ತೋಮರ್:


೨೦೧೦ರಲ್ಲಿ ಬಿಡುಗಡೆಯಾದ ಫಿಲ್ಮ್ ಪಾನ್ ಸಿಂಗ್ ತೋಮರ್ ೭ ಬಾರಿ ಇಂಡಿಯನ್ ನ್ಯಾಷನಲ್ ಗೇಮ್ಸ್ ಗೋಲ್ಡ್ ಮೆಡಲ್ ಪಡೆದಿರುವ ಪಾನ್ ಸಿಂಗ್ ತೋಮರ್ ರ ಕಥೆಯಾಗಿದೆ. ಪಾನ್ ಸಿಂಗ್ ಆರ್ಮಿಯಲ್ಲಿ ಇದ್ದವರು.ಆದರೆ ತಾಯಿಯ ಹತ್ಯೆಯ ನಂತರ ಅಸಹಾಯಕರಾಗಿ ಒತ್ತಡಕ್ಕೆ ಸಿಲುಕಿ ಡಕಾಯಿತ ರಾಗಿದ್ದರು. ಫಿಲ್ಮ್ ನಲ್ಲಿ ದಿವಂಗತ ನಟ ಇರ್ಫಾನ್ ಖಾನ್ ಪಾನ್ ಸಿಂಗ್ ರ ಮುಖ್ಯಪಾತ್ರದಲ್ಲಿದ್ದರು.
ಅಜ್ಹರ್:


ಇದು ಭಾರತೀಯ ಮಾಜಿ ಕ್ರಿಕೆಟ್ ಕಪ್ತಾನ ಮೊಹಮ್ಮದ್ ಅಜರುದ್ದೀನ್ ಅವರ ಕಥೆ .ಇಮ್ರಾನ್ ಹಾಶ್ಮಿ, ಪ್ರಾಚೀ ದೇಸಾಯಿ ಮತ್ತು ನರ್ಗೀಸ್ ಫಾಕ್ರಿ ಅಭಿನಯದ ಫಿಲ್ಮ್ ಅಜ್ಹರ್. ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಆನಂತರ ಅನೇಕ ಕಾಲ ನ್ಯಾಯಾಲಯಕ್ಕೆ ಓಡಾಟ ನಡೆಸಬೇಕಾಯಿತು ಅಜರುದ್ದೀನ್. ಜೊತೆಗೆ ನಟಿ ಸಂಗೀತಾ ಬಿಜಲಾನಿ ಅವರ ಆಫೇರ್ ಮತ್ತು ವಿವಾಹ ಕೂಡ ಬಹಳಷ್ಟು ಚರ್ಚೆ ಹುಟ್ಟಿಸಿತ್ತು.

ಮುಂಬಯಿ ವಿಮಾನ ನಿಲ್ದಾಣದಲ್ಲಿ
ಉರ್ಮಿಳಾ ಮಾತೊಂಡ್ಕರ್ ರನ್ನು ಸಿಐಎಸ್‌ಎಫ್ ಪ್ರವೇಶ ದ್ವಾರದಲ್ಲೇ ತಡೆಯಿತು!

ನಟಿ ಮತ್ತು ರಾಜಕಾರಣಿ ಉರ್ಮಿಳಾ ಮಾತೊಂಡ್ಕರ್ ರನ್ನು ಮುಂಬಯಿ ವಿಮಾನ ನಿಲ್ದಾಣದ ಪ್ರವೇಶದ್ವಾರದಲ್ಲಿ ಸಿಐಎಸ್‌ಎಫ್ ತಡೆ ಹಿಡಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಕಾರಣ ಅವರು ತಮ್ಮ ಐಡಿ ಫ್ರೂಫ್ ತರಲು ಮರೆತಿದ್ದರು.
ಅನಂತರ ಯಾರಲ್ಲೋ ಅದನ್ನು ತರಿಸಿಕೊಂಡರು ಉರ್ಮಿಳಾ. ಪ್ರವೇಶ ದ್ವಾರದಲ್ಲಿ ನಿಂತಿದ್ದವರು ಅವರ ಮಾಸ್ಕ್ ಸರಿಸಿ ಐಡಿ ಮತ್ತು ಅವರ ಮುಖವನ್ನು ಪರಿಶೀಲಿಸಿದ ನಂತರವೇ ಒಳಗೆ ಬಿಟ್ಟರು.ಈ ಸಮಯ ಉರ್ಮಿಳಾ ಮೌನವೇ ಇದ್ದರು.
೨೦೧೯ ರ ಲೋಕಸಭಾ ಚುನಾವಣೆಯ ಮೊದಲು ೨೭ ಮಾರ್ಚ್ ೨೦೧೯ ರಲ್ಲಿ ಕಾಂಗ್ರೆಸ್ ಸೇರಿದ್ದ ಉರ್ಮಿಳಾ ಮಾತೊಂಡ್ಕರ್ ನಂತರ ಉತ್ತರ ಮುಂಬಯಿಯಿಂದ ಕಾಂಗ್ರೆಸ್ ನಲ್ಲಿ ಸ್ಪರ್ಧಿಸಿದ್ದರು.ಆದರೆ ಗೆಲ್ಲಲಿಲ್ಲ. ಇದೇ ಕ್ಷೇತ್ರದಲ್ಲಿ ಒಂದೊಮ್ಮೆ ನಟ ಗೋವಿಂದಾ ಗೆದ್ದಿದ್ದರು.
ಅನಂತರ ಉರ್ಮಿಳಾ ಶಿವಸೇನೆಗೆ ಸೇರಿದ್ದರು.