
ಮುಂಬೈ,ಏ.೨೬- ಮಾದಕ ವಸ್ತು ಪ್ರಕರಣದಲ್ಲಿ ಬಾಲಿವುಡ್ ನಟಿ ಕ್ರಿಸನ್ ಪಿರೇರಾ ಅವರನ್ನು ಯುಎಇನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ನಟಿಯ ಮೇಲೆ ಮಾದಕ ವಸ್ತು ನೀಡದ ಆರೋಪಕ್ಕಾಗಿ ಇತರ ಇಬ್ಬರನ್ನು ಬಂಧಿಸಲಾಗಿದೆ. ಸದ್ಯ ನಟಿ ಶಾರ್ಜಾ ಸೆಂಟ್ರಲ್ ಜೈಲಿನಲ್ಲಿದ್ದಾರೆ.
ಬಾಲಿವುಡ್‌ನಲ್ಲಿ ಸಡಕ್-೨ ಮತ್ತು ಬತ್ಲಾ ಹೌಸ್ ಚಿತ್ರಗಳಲ್ಲಿ ಕ್ರಿಸನ್ ಪಿರೇರಾ ನಟಿಸಿದ್ದಾರೆ. ನಾಯಿ ಗಲಾಟೆ ಟ್ರೋಫಿ ಮತ್ತು ಮಾದಕ ವಸ್ತು ಒಳಗೊಂಡ ಪಿತೂರಿ ಯುಎಇಯಲ್ಲಿ ಬಾಲಿವುಡ್ ನಟಿಯನ್ನು ಜೈಲಿಗೆ ಹಾಖಲಾಗಿದೆ.
ಪ್ರಸ್ತುತ ಶಾರ್ಜಾ ಸೆಂಟ್ರಲ್ ಜೈಲಿನಲ್ಲಿರುವ ಕ್ರಿಸನ್ ಪಿರೇರಾ ಅವರನ್ನು ಏಪ್ರಿಲ್ ೧ ರಂದು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಮಾದಕವಸ್ತುಗಳನ್ನು ಬಚ್ಚಿಟ್ಟಿದ್ದ ಸ್ಮರಣಿಕೆ ಹೊತ್ತೊಯ್ದಿದ್ದಕ್ಕಾಗಿ ಬಂಧಿಸಲಾಯಿತು. ಮುಂಬೈ ಅಪರಾಧ ವಿಭಾಗದ ಪೊಲೀಸರು ನಾಯಿಯೊಂದರ ಜಗಳಕ್ಕೆ ಪ್ರತೀಕಾರವಾಗಿ ನಟಿಯ ಮೇಲೆ ಮಾದಕ ವಸ್ತು ಸಂಚು ರೂಪಿಸಲಾಗಿದೆ ಎನ್ನುವ ಸಂಗತಿಯನ್ನು ವಿಚಾರಣೆ ವೇಳೆ ಆರೋಪಿಗಳಿಂದ ಬಾಯಿ ಬಿಡಿಸಿದ್ದಾರೆ.
ಪ್ರಕರಣದಲ್ಲಿ ಬೇಕರಿ ಮಾಲೀಕ ಅಂಥೋನಿ ಪಾಲ್ ಮತ್ತು ಬ್ಯಾಂಕ್‌ನ ಸಹಾಯಕ ಜನರಲ್ ಮ್ಯಾನೇಜರ್ ರಾಜೇಶ್ ಬೋಭಾಟೆ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಂಟನಿ ಬಂಧನವಾದ ಒಂದು ದಿನದ ನಂತರ ಇಂದು ರಾಜೇಶ್‌ನನ್ನು ಬಂಧಿಸಲಾಗಿದೆ.
ಮುಂಬೈನ ಉಪನಗರವಾದ ಮೀರಾ ರೋಡ್‌ನ ನಿವಾಸಿಗಳು, ಮಾದಕ ವಸ್ತುವಿನಒಂದಿ ಸಿಕ್ಕಿಬಿದ್ದ ನಂತರ ಎಂಎಸ್ ಪಿರೇರಾ ಅವರನ್ನು ಬಿಡುಗಡೆ ಮಾಡಲು ಹಣದ ಬೇಡಿಕೆಯ ಆರೋಪ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.
“ಆಂಟನಿ ನಟಿಗಾಗಿ ಶಾರ್ಜಾ ಗೆ ಟಿಕೆಟ್ ಕಾಯ್ದಿರಿಸಿದ್ದಾನೆ. ಆಕೆಗೆ ನಕಲಿ ರಿಟರ್ನ್ ಟಿಕೆಟ್ ಕೂಡ ನೀಡಿದ್ದಾನೆ” ಎಂದು ಅಪರಾಧ ವಿಭಾಗದ ಹಿರಿಯ ಇನ್ಸ್‌ಪೆಕ್ಟರ್ ದೀಪಕ್ ಸಾವಂತ್ ಹೇಳಿದ್ದಾರೆ.
ಅಪರಾಧ ವಿಭಾಗದ ಪ್ರಾಥಮಿಕ ತನಿಖೆಯಿಂದ ಆರೋಪಿ ಆಂಟನಿ ಸಹೋದರಿ ನಟನ ತಾಯಿಯೊಂದಿಗೆ ನಾಯಿಗಾಗಿ ಜಗಳವಾಡಿದ್ದರು ಎಂದು ತಿಳಿದುಬಂದಿದೆ. ಇಬ್ಬರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಆಕೆಯ ತಾಯಿಯೂ ಒಮ್ಮೆ ಆಂಟನಿಯೊಂದಿಗೆ ನಾಯಿಯ ವಿಷಯದಲ್ಲಿ ಜಗಳವಾಡಿದ್ದಳು ಎನ್ನುವ ವಿಷಯ ಬಹಿರಂಗಗೊಂಡಿದೆ.