ಬಾಲಿವುಡ್ ನಟಿ ಕತ್ರೀನಾಗೆ ಕೊರೊನಾ ದೃಢ

ಮುಂಬೈ: ಬಾಲಿವುಡ್ ನಟಿ ಕತ್ರೀನಾ ಕೈಫ್ ಗೆ ಕೊರೊನಾ‌ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಅವರು ಮನೆಯಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದೆ. ವೈದ್ಯರು ಸೂಚಿಸಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದೇನೆಂದು
ಸಾಮಾಜಿಕ ಜಾಲತಾಣಗಳಲ್ಲಿ ಕತ್ರಿನಾ ಬರೆದುಕೊಂಡಿದ್ದಾರೆ.
ತಮ್ಮ ಜತೆ ಸಂಪರ್ಕ ದಲ್ಕಿದ್ದವರು ಕೊರೊನಾ ಪರೀಕ್ಷೆಗೆ ಒಳಪಡುವಂತೆ ಅವರು ಮನವಿ ಮಾಡಿದ್ದಾರೆ.

ಕೆಲದಿನಗಳ ಹಿಂದೆ ಕತ್ರಿನಾ ಕೈಫ್ ಅವರ ಗೆಳೆಯ ವಿಕ್ಕಿ ಕೌಷಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಇದೀಗ ಕತ್ರಿನಾ ಅವರಿಗೆ ಕೊರೊನಾ ದೃಢಪಟ್ಟಿದೆ. ದೇಶದಲ್ಲಿ ಪ್ರಾರಂಭವಾಗಿರುವ 2ನೇ ಹಂತದ ಕೊರೊನಾ ಅಟ್ಟಹಾಸ, ಬಾಲಿವುಡ್‍ಗೆ ಭಾರೀ ಹೊಡೆತ ನೀಡಿದೆ.
ಕೆಲದಿನಗಳ ಹಿಂದೆ, ಬಾಲಿವುಡ್‍ನಟ ಅಕ್ಷಯ್ ಕುಮಾರ್, ಅಮೀರ್ ಖಾನ್ ಹಾಗೂ ಇತರರಿಗೆ ಕೊರೊನಾ ದೃಢಪಟ್ಟಿತ್ತು. ಇದರಿಂದಾಗಿ ಬಾಲಿವುಡ್‌ನಲ್ಲಿ ಆತಂಕ ಮನೆಮಾಡಿದೆ.