ಬಾಲಿವುಡ್ ನಟಿಯರ ಜೊತೆ ನಟಿ ಪ್ರಶಸ್ತಿಗೆ ಅಕ್ಷತಾ ಸ್ಪರ್ಧೆ

ಆಷ್ಟ್ರೇಲಿಯಾದ  “ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವ”ಕ್ಕೆ   “ಏಪ್ರಾನ್ ಪ್ರೊಡಕ್ಷನ್ಸ್” ಸಂಸ್ಥೆ ನಿರ್ಮಿಸಿರುವ,  ಕತೆಗಾರ “ಕಾ.ತಾ ಚಿಕ್ಕಣ್ಣ” ಅವರ  ಕತೆಯಾಧಾರಿತ  “ಚಂಪಾ ಪಿ  ಶೆಟ್ಟಿ” ನಿರ್ದೇಶನದ  “ಕೋಳಿ ಎಸ್ರು”  ಚಿತ್ರ ಆಯ್ಕೆಯಾಗಿದೆ.

 ನಟಿ “ಅಕ್ಷತಾ ಪಾಂಡವಪುರ” ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದಾರೆ. ಐಶ್ವರ್ಯ ರೈ, ಆಲಿಯಾ ಭಟ್, ಕಾಜೊಲ್, ಸಾಯಿಪಲ್ಲವಿ, ನೀನಾಗುಪ್ತ, ರಾಣಿಮುಖರ್ಜಿ  ಮುಂತಾದ ಬಾಲಿವುಡ್ ನ ಖ್ಯಾತ ನಟಿಯರ ಜೊತೆ ಅಕ್ಷತಾ ನಾಮಿನೇಟ್ ಆಗಿರುವುದು ಕನ್ನಡದ ಹೆಮ್ಮೆ.

ಜೊತೆಗೆ ಇತ್ತೀಚೆಗೆ ನಡೆದ ಕೆನಡಾದ “ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್” ನಲ್ಲಿ ಕೂಡ ” ಕೋಳಿ ಎಸ್ರು” ಸಿನೆಮಾ ಪ್ರದರ್ಶನಗೊಂಡು, ಚಿತ್ರದ ನಿರ್ದೇಶಕಿ ಚಂಪಾಶೆಟ್ಟಿ ಅವರಿಗೆ  “ಅತ್ಯುತ್ತಮ  ನಿರ್ದೇಶಕಿ” ಪ್ರಶಸ್ತಿ ಮತ್ತು “ಅಕ್ಷತಾ ಪಾಂಡವಪುರ” ಅವರಿಗೆ ಅತ್ಯುತ್ತಮ ನಟಿ  ಪ್ರಶಸ್ತಿ ದೊರಕಿದ್ದೂ ಕೂಡಾ ಭಾರತೀಯ ಚಿತ್ರರಂಗ “ಕೋಳಿ ಎಸ್ರು”  ಚಿತ್ರವನ್ನು ಗಮನಿಸುವಂತಾಗಿದೆ.

 ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯ ವಿಷಯ. ಈಗಾಗಲೇ ಹಲವಾರು ಹೊರದೇಶಗಳ ಹಾಗೂ ಭಾರತೀಯ  ಚಿತ್ರೋತ್ಸವ ಗಳಲ್ಲಿ  ಆಯ್ಕೆಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದಿದೆ.

  ಇದುವರಗೂ “ಕೋಳಿ ಎಸ್ರು” ‌ಚಿತ್ರ  ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್,  ಇಂಡೋ ಜರ್ಮನ್ ಫಿಲ್ಮ್ ವೀಕ್  -ಜರ್ಮನಿ, ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ – ಕೆನಡಾ, ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್  -ಆಷ್ಟ್ರೇಲಿಯಾ , ಅಜಂತಾ ಎಲ್ಲೋರ ಅಂತರರಾಷ್ಟ್ರೀಯ ಚಿತ್ರೋತ್ಸವ -ಔರಂಗಾಬಾದ್

ಅಂತರಾಷ್ಟ್ರೀಯ ಚಿತ್ರೋತ್ಸವ ತ್ರಿಶೂರ್ , ಅಂತರಾಷ್ಟ್ರೀಯ  ಚಿತ್ರೋತ್ಸವ ಇರಿಂಜ್ಯಾಲಗುಡ, .ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವ  ಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಗಮನ ಸೆಳೆದಿದೆ.