ಬಾಲಿವುಡ್ ಕಿರುತರೆ ನಟಿ ಲೀನಾ ನಿಧನ

ಮುಂಬೈ, ನ ೨೨- ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಿವುಡ್ ಕಿರುತರೆ ನಟಿ ಲೀನಾ ಆಚಾರ್ಯ ಚಿಕಿತ್ಸೆ ಫಲಕಾರಿಯಾಗಿದೇ ನಿಧನರಾಗಿದ್ದಾರೆ.
ಶೇಠ್ ಜೀ, ಆಪ್ ಕೇ ಆ ಜಾನೇ ಸೇ, ಮೇರಿ ಹಾನಿಕಾಕರ್ ಬೀವೀ ಹಾಗೂ ಕ್ಲಾಸ್ ಆಫ್ ೨೦೨೦ ಮುಂತಾದ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ಲೀನಾ ಆಚಾರ್ಯ ತಮ್ಮ ಅಬೀನಯದ ಮೂಲಕ ಬಾಲಿವುಡ್ ಬಾರಿ ಹೆಸರು ಮಾಡಿದ್ದರು.
ಲೀನಾ ಕಳೆದ ಒಂದೂವರೆ ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ತಾಯಿ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದರು. ಆದರೂ ಆಕೆ ಬದುಕಲಿಲ್ಲ’ ಎಂದು ಸಹನಟ ವರ್ಷಿಪ್ ಖನ್ನಾ ಸ್ಪಷ್ಟಪಡಿಸಿದ್ದಾರೆ.
ಕ್ಲಾಸ್ ಆಫ್ ೨೦೨೦ ನಟ ರೋಹನ್ ಮೆಹ್ರಾ ಲೀನಾ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಲ್ಲದೇ ಟ್ವಿಟ್ಟರ್ ಖಾತೆಯಲ್ಲಿ ‘ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಲೀನಾ ಮ್ಯಾಮ್, ಕಳೆದ ವರ್ಷ ಈ ಸಮಯದಲ್ಲಿ ನಾವು ಕ್ಲಾಸ್ ಆಫ್ ೨೦೨೦ ಶೂಟಿಂನ್‌ನಲ್ಲಿದ್ದೆವು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ನಟ ಅಭಿಷೇಕ್ ಭಾಲೇರಾವ್ ಕೂಡ ಲೀನಾ ಹಾಗೂ ತಮ್ಮ ನಡುವೆ ನಡೆದ ವಾಟ್ಸ್‌ಆ?ಯಪ್ ಸಂದೇಶದ ಸ್ಕ್ರೀನ್ ಶಾಟ್ ಹಂಚಿಕೊಂಡು ದುಃಖ ತೋಡಿಕೊಂಡಿದ್ದಾರೆ. ಇಡೀ ಬಾಲಿವುಡ್ ಕಿರುತರೆ ಲಿನಾ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.