ಬಾಲಿವುಡ್‌ಗೆ ರಶ್ಮಿಕಾ ಎಂಟ್ರಿ


ಮುಂಬೈ/ಬೆಂಗಳೂರು. ಡಿ.೨೮- ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಪ್ರವೇಶ ಪಡೆದಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ರಶ್ಮಿಕಾ ನಟಿಸುತ್ತಿದ್ದಾರೆ. ಅಮಿತಾಬ್ ಅವರೊಂದಿಗೆ ರಶ್ಮಿಕಾ ಅಪ್ಪ-ಮಗಳಾಗಿ ಅಭಿನಯಿಸುತ್ತಿದ್ದು, ನೀನಾ ಗುಪ್ತಾ ಸೇರಿದಂತೆ ಹಲವು ಕಲಾವಿದರ ದಂಡೇ ಚಿತ್ರದಲ್ಲಿದೆ.’ಮಿಷನ್ ಮಜ್ನು’ ಚಿತ್ರ ಇನ್ನೂ ಪ್ರಾರಂಭವೇ ಆಗಿಲ್ಲ, ಆಗಲೇ ’ಡೆಡ್ಲಿ ಎಂಬ ಇನ್ನೊಂದು ಬಾಲಿವುಡ್ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿರುವುದು ವಿಶೇಷವೆಂದರೆ, ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರೊಟ್ಟಿಗೆ ರಶ್ಮಿಕಾ ಸಹ ನಟಿಸುತ್ತಿದ್ದಾರೆ. ೨೦೨೧ರ ಮಾರ್ಚ್‌ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ..
’ಮಿಷನ್ ಮಜ್ನು’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಅಮಿತಾಬಚ್ಚನ್ ಅವರೊಂದಿಗೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಮೂರು ಭಾಷೆಗಳಲ್ಲಿ ನಟಿಸಿರುವ ರಶ್ಮಿಕಾ ಅತೀ ಶೀಘ್ರದಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ.
’ಚಿಲ್ಲರ್ ಪಾರ್ಟಿ,’ಕ್ವೀನ್, ’ಶಾಂದಾರ್ ಮತ್ತು ಹೃತಿಕ್ ರೋಷನ್ ಅಭಿನಯದ ’ಸೂಪರ್ ೩೦’ ಚಿತ್ರಗಳನ್ನು ನಿರ್ದೇಶಿಸಿದ್ದ ವಿಕಾಸ್ ಬಹ್ಲ್ ಚಿತ್ರವನ್ನು ಡೆಡ್ಲಿ ಚಿತ್ರ ನಿರ್ದೇಶಿಸುತ್ತಿದ್ದಾರೆ. ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸುತ್ತಿದೆ.