
ಧಾರವಾಡ, ಆ2: ಧಾರವಾಡದ ಕೇಂದ್ರೀಯ ವಿದ್ಯಾಲಯದಲ್ಲಿ ಬಾಲವಾಟಿಕಾ- 3 ರ ಉದ್ಘಾಟನೆಗೊಂಡಿತು. ರಾಷ್ಟ್ರೀಯ ಶಿಕ್ಷಣ ನೀತಿ 2020 ( ಓಇP 2020) ಯ ಪ್ರಕಾರ ಮಕ್ಕಳಿಗಾಗಿ ದೇಶದಾದ್ಯಂತ ಅನೇಕ ಕೇಂದ್ರೀಯ ವಿದ್ಯಾಲಯಗಳಲ್ಲಿ ಬಾಲವಾಟಿಕಾ ಅಥವಾ ಪೂರ್ವಸಿದ್ಧತಾ ತರಗತಿಗಳನ್ನು ತೆರೆಯಲಾಗುತ್ತಿದೆ. ಬಾಲವಾಟಿಕಾದ ಉದ್ದೇಶವು ಜ್ಞಾನಾತ್ಮಕ, ಪರಿಣಾಮಕಾರಿ ಮನೋಶಕ್ತಿ ಸಾಮರ್ಥ್ಯಗಳನ್ನು, ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು (ಈಐಓ) ಅಭಿವೃದ್ಧಿಪಡಿಸುವುದಾಗಿದೆ..
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಮಾರುತಿ ಕದಂ ಮತ್ತು ಸಿವಿಲ್ ಆಸ್ಪತ್ರೆ ಧಾರವಾಡದ ಹಿರಿಯ ಸಿವಿಲ್ ಸರ್ಜನ್ ಡಾ.ಮಯೂರ್ ಕದಂ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸುವದರ ಮೂಲಕ ಬಾಲವಾಟಿಕ ತರಗತಿಯನ್ನು ಉದ್ಘಾಟಿಸಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಅಂಶಗಳ ಕುರಿತು ಮಾತನಾಡಿದರು.
ಕೆ.ವಿ.ಧಾರವಾಡದ ಪ್ರಭಾರಿ ಪ್ರಾಂಶುಪಾಲರಾದ ಜೆ.ರಾಮ್ ಅವರು ಪೆÇೀಷಕರನ್ನು ಉದ್ದೇಶಿಸಿ ಬಾಲವಾಟಿಕಾ 3 ರ ಮಹತ್ವ ಮತ್ತು ಮಗುವಿನ ಶಿಕ್ಷಣದಲ್ಲಿ ಶಿಕ್ಷಕರೊಂದಿಗೆ ಪೆÇೀಷಕರ ಕೊಡುಗೆಯನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಕೆ.ವಿ.ಧಾರವಾಡದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಹಾಲಕ್ಷ್ಮಿ ಮುರಗೋಡ ಹಾಗೂ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು.