ಬಾಲರಾಮ ಪ್ರತಿಷ್ಠೆ ಯೋಗ ನಮಸ್ಕಾರ

ಕೋಲಾರ,ಜ,೨೫- ಅಯೋಧ್ಯೆಯ ಶ್ರೀ ಬಾಲರಾಮ ಪ್ರಾಣ ಪ್ರತಿಷ್ಟಾಪನಾ ಅಂಗವಾಗಿ ಶ್ರೀ ಪಂತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಶ್ರೀಕ್ಷೇತ್ರ ಆವನಿ ಶ್ರೀ ರಾಮಲಿಂಗೇಶ್ವರ ದೇವಾಲಯ ಆವರಣವನ್ನು ಸ್ವಚ್ಛಗೊಳಿಸಿದ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಗಣಪತಿ ನಮಸ್ಕಾರ, ಹನುಮ ನಮಸ್ಕಾರ, ಶಿವ ನಮಸ್ಕಾರ, ವಿಷ್ಣು ನಮಸ್ಕಾರವನ್ನು ಯೋಗ ಬಂಧುಗಳು ಮಾಡಿದರು.
ಇದೇ ಸಂದರ್ಭದಲ್ಲಿ ೨೫೦ಕ್ಕೂ ಹೆಚ್ಚು ಯೋಗ ಬಂಧುಗಳು ಶ್ರೀ ಕ್ಷೇತ್ರ ಆವನಿ ಬೆಟ್ಟ ಚಾರಣ ನಡೆಸಿ, ಆವನಿ ಬೆಟ್ಟದ ಮೇಲೆ ರಾಮಧ್ಯಾನ ಹಾಗೂ ಭಜನೆ ಮಾಡಿದರು.
ಯೋಗ ನಮಸ್ಕಾರ ನೇತೃತ್ವವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಶಿಕ್ಷಕರಾದ ಮಾಕೊಂಡಣ್ಣ ,ಶ್ರೀನಿವಾಸ್, ರವಿಕುಮಾರ್, ವೆಂಕಟೇಶ್, ನಾರಾಯಣಪ್ಪ, ರಮೇಶ್, ಸುಂದರಾಚಾರಿ, ಸುಬ್ಬರಾಯಪ್ಪ, ದೀಪಕ್ಕ ಮತ್ತಿತರರು ವಹಿಸಿದರು.