ಬಾಲರಾಜ್ ಗುತ್ತೇದಾರರನ್ನು ಸೇಡಂನಿಂದ ಗೆಲ್ಲಿಸಿ ಕಳಿಸಿದರೆ ಸಚಿವನ್ನಾಗಿಸಿ ಸೇಡಂ ಗೆ ಕಳಿಸುತ್ತೇನೆ : ಎಚ್ ಡಿ ಕುಮಾರಸ್ವಾಮಿ

ಸೇಡಂ, ಎ,14: ಸೇಡಂನ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲೇ ವಾಸ್ತವ್ಯ ಹೂಡಿ ಮನೆ ಮನೆಗೆ ತೆರಳಿ ಕಡುಬಡವರ ಸಮಸ್ಯೆಗಳನ್ನು ನೇರವಾಗಿ ಆಲಿಸಿರುವುದರಿಂದ ಜೊತೆಗೆ ಮಹಿಳೆಯರ ಸಾರ್ವಜನಿಕ ಶೌಚಾಲಯ ನೀರಿನ ಸಮಸ್ಯೆ ವಸತಿ ನಿಲಯ ಹಾಗೂ ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆಯ ಕುರಿತು ಸವಿಸ್ತಾರವಾಗಿ ಅರಿತುಕೊಂಡಿದ್ದಾರೆ ಯುವ ನಾಯಕ ಬಾಲರಾಜ್ ಗುತ್ತೇದಾರ್ ಅವರು ಆದ್ದರಿಂದ ಸೇಡಂ ಮತಕ್ಷೇತ್ರದ ಜನರು ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಾಲರಾಜ್ ಗುತ್ತೇದಾರರನ್ನು ಸೇಡಂನಿಂದ ಗೆಲ್ಲಿಸಿ ಕಳಿಸಿದರೆ ಸೇಡಂಗೆ ಸಚಿವನ್ನಾಗಿಸಿ ಕಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಕೆ.ಎನ್.ಝಡ್‍ಫಂಕ್ಷನ್ ಹಾಲ್ ಅವಣದಲ್ಲಿ ನಾಮಪತ್ರ ಸಲ್ಲಿಕೆಯ ಬಹಿರಂಗ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜ್ಯೋತಿ ಬೆಳಗಿ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಸರಿಯಾದ ಮನೆಗಳಿಲ್ಲ ಸಿಸಿ ರಸ್ತೆಗಳಿಲ್ಲ, ಶೌಚಾಲಯ ಇಲ್ಲ, ನದಿ ಇದ್ದರೂ ಸರಿಯಾಗಿ ಉಪಯೋಗಿಸಿಕೊಳ್ಳದೆ ಇರುವಂತಹ ಪರಿಸ್ಥಿತಿ ಕಾಂಗ್ರೆಸ್ ಬಿಜೆಪಿ ಪಕ್ಷದ ನಾಯಕರುಗಳು ಮಾಡಿದ್ದಾರೆ. ಜಿಲ್ಲೆಯಲ್ಲಿ ಆರು ಸ್ಥಾನಗಳನ್ನು ಜೆಡಿಎಸ್ ಗೆಲ್ಲಿಸಿಕೊಟ್ಟರೆ ಉತ್ತರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಯೋಜನೆ ಸಂಪೂರ್ಣ ಜಾರಿಗೊಳಿಸಿ ಇಲ್ಲಿನ ಜನರ ಕಷ್ಟಕಾರ್ಪಣ್ಯಗಳು ನಿವಾರಿಸುವಂತಹ ಕೆಲಸ ನಾನು ಮಾಡುತ್ತೇನೆ, ಬಹುಮತ ನೀಡಿದ ನಂತರ ತಕ್ಷಣ ಕೋಲಿ ಸಮಾಜ ಎಸ್ಟಿಗೆ ಸೇರಿಸುವುದರ ಜೊತೆಗೆ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಪುನಃ ಜಾರಿಗೊಳಿಸುತ್ತೇನೆ ಎಂದರು.
ಈ ವೇಳೆಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಮಹಾಗಾಂವಕರ್, ಗುತ್ತೇದಾರ್ ಅವರ ತಂದೆ ಅಶೋಕ್ ಗುತ್ತೇದಾರ್, ಜೆಡಿಎಸ್ ಅಧ್ಯಕ್ಷ ಎಕ್ಬಾಲ್ ಖಾನ್, ಜೆಡಿಎಸ್ ಕಾರ್ಯದಕ್ಷ ಶಿವಕುಮಾರ್ ನಿಡುಗುಂದಾ, ರಾಜಶೇಖರ್ ನೀಲಂಗಿ, ಮುಕ್ರಂಖಾನ್, ಪಲ್ಲವಿ ಗುತ್ತೇದಾರ್, ಪುಷ್ಪಾ ವತಿ ಗೊಬ್ಬುರ್, ಸುನಿತಾ ತಳವಾರ್, ಶಂಭುಲಿಂಗ ನಾಟಿಕರ್, ಜಗನ್ನಾಥ್ ರೆಡ್ಡಿ ಗೋಟುರ, ಶಿವಪುತ್ರ ಮೊಘಾ, ದೇವಿಂದ್ರಪ್ಪ ಸುಣಗಾರ, ಆರ್ ಆರ್ ಪಾಟೀಲ್, ಹೇಮಂತ್ ಶಹಾ, ಶಂಕರ್ ಕಟ್ಟಿಸಂಗಾವಿ, ಗೋಪಾಲ್ ಜಾದವ್, ಚಂದ್ರಶೇಖರ್ ಕುಲಕರ್ಣಿ ಮಳಖೇಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷ ತೊರೆದು ಅನೇಕ ಬೆಂಬಲಗಳೊಂದಿಗೆ ಮುಕ್ರಂ ಖಾನ್ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಹಿರಂಗ ಸಭೆಗಿಂತ ಮುಂಚಿತವಾಗಿ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಚುನಾವಣೆ ಕಾರ್ಯಾಲಯದವರೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಾಲರಾಜ್ ಅಶೋಕ್ ಗುತ್ತೇದಾರ್ ಅವರು ಅಪಾರ ಬೆಂಬಲಗಳೊಂದಿಗೆ ವಾದ್ಯ ಮೇಳ ಜೊತೆಗೆ ಮೆರವಣಿಗೆ ಮುಖಾಂತರ ಬಂದು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ ಬಹಿರಂಗ ಸಭೆಯ ಕಾರ್ಯಕ್ರಮದ ವೇದಿಕೆವರೆಗೆ ಕಾರ್ಯಕರ್ತರ ಜೊತೆಗೆ ತೆರಳಿದರು. ನಾಮಪತ್ರ ಸಲ್ಲಿಕೆಗೆ ಜೆಡಿಎಸ್ ಪಕ್ಷದಿಂದ ಹಿರಿಯರು ಮಹಿಳೆಯರು ಯುವಕರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಪಕ್ಷಗಳು ಜನರ ಬೆಂಬಲ ಪಡೆದು ಸರ್ಕಾರಿ ಯೋಜನೆಗಳು ಸರಿಯಾಗಿ ತಲುಪಿಸದೆ ಜನರ ರಕ್ತ ಹೀರುತ್ತವೆ ಆದರಿಂದ ಈ ಬಾರಿ ಸೇಡಂ ಕ್ಷೇತ್ರದಲ್ಲಿ ಬದಲಾವಣೆ ಬೀಸಿದೆ ನನ್ನನ್ನು ಗೆಲ್ಲಿಸಿ ತಂದರೆ ಸೇಡಂನ ಚಿತ್ರಣ ಬದಲಾಯಿಸಿ ತೋರಿಸುವದ ಜೊತೆಗೆ ಇಲ್ಲಿರುವಂತಹ ಕಂಪನಿಗಳಲ್ಲಿ ಪ್ರತಿಯೊಬ್ಬ ಯುವಕರಿಗೂ ಉದ್ಯೋಗ ಕಲ್ಪಿಸಿ ಕೊಡುವುದರ ಜೊತೆಗೆ ಶೌಚಾಲಯ ಮುಕ್ತ ತಾಲೂಕನ್ನಾಗಿ, ಕಾಗಿನ ನದಿಯ ನೀರು ಸದ್ಬಳಕೆ ಮಾಡಿ ಪ್ರತಿಯೊಬ್ಬ ರೈತನ ಜಮೀನಿಗೂ ನೀರು ಕೊಡುವಂತ ವ್ಯವಸ್ಥೆ ಮಾಡುತ್ತೇನೆ ಬಿಜೆಪಿ ಕಾಂಗ್ರೆಸ್ ಪಕ್ಷದವರ ನಾಯಕರನ್ನು ಅವರವರ ಮನೆಗೆ ಕಳಿಸಿ ನನ್ನನ್ನು ಈ ಬಾರಿ ಆಶೀರ್ವಾದ ನೀಡುವರೆಂದು ಭರವಸೆ ಹೊತ್ತಿದ್ದೇನೆ.

ಬಾಲರಾಜ್ ಅಶೋಕ್ ಗುತ್ತೇದಾರ್
ಜೆಡಿಎಸ್ ಅಭ್ಯರ್ಥಿ ಸೇಡಂ

ಒಬ್ಬ ಸಮಾಜ ಸೇವಕನ ಕೆಲಸ ಟೀಕಿಸುವಂತಹ ಇಲ್ಲಿನ ನಾಯಕರಗಳ ಮನಸ್ಸು ಎಂತದು ಎಂಬುದು ಸೇಡಂನ ಜನರು ಅರಿತುಕೊಳ್ಳಬೇಕಿದೆ ಕರೋನ ಸಂದರ್ಭದಲ್ಲಿ ಬಿಜೆಪಿ ಕಾಂಗ್ರೆಸ್ ನಾಯಕರುಗಳು ಮಾಡದಂತ ಕೆಲಸ ಬಾಲರಾಜ್ ಗುತ್ತೇದಾರ್ ಅವರು ಆಂಬುಲೆನ್ಸ್ ವ್ಯವಸ್ಥೆ, ಮನೆ ಮನೆಗೆ ಕಿಟ್ ಕಲ್ಪಿಸಿ ಅವರ ಸಂಕಷ್ಟಕ್ಕೆ ಮುಂದಾದ ಸೇಡಂನ ಏಕೈಕ ನಾಯಕ ಗುತ್ತೇದಾರ್ ಅವರಿಗೆ ಸಲ್ಲುತ್ತದೆ.

ರಾಜು ನೀಲಂಗಿ
ಜೆಡಿಎಸ್ ಮುಖಂಡರು ಸೇಡಂ
ಸಮಾಜ ಸೇವೆ ಜೊತೆಗೆ ಜನರ ಕಷ್ಟವನ್ನು ನೇರವಾಗಿ ಅವರ ಮನೆ ಬಾಗಿಲಿಗೆ ತೆರಳಿ ಆಲಿಸಿದಂತ ಸೇಡಂ ತಾಲೂಕಿನ ಮೊಟ್ಟಮೊದಲ ನಾಯಕ ಬಾಲರಾಜ್ ಗುತ್ತೇದಾರ್ ಅವರು ಬರುವ 10ನೇ ತಾರೀಕು ಜೆಡಿಎಸ್ ಪಕ್ಷದ ಗುರುತಿನ ಚಿಹ್ನೆಯಾದ ತೆನೆ ಹೊತ್ತ ಮಹಿಳೆಗೆ ಮತದಾನ ನೀಡಿ ಬಾಲರಾಜ್ ಗುತ್ತೇದಾರ್ ಅವರಿಗೆ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸು ತರುತ್ತಾರೆ ಎಂಬ ಭರವಸೆ ಇಂದಿನ ಬಹಿರಂಗ ಸಭೆಯ ಕಾರ್ಯಕ್ರಮ ಸಾಕ್ಷಿ ಆಗಲಿದೆ.

ಶಿವಕುಮಾರ್ ನಿಡುಗುಂದಾ (ಅಪ್ಪಾಜಿ)
ಜೆಡಿಎಸ್ ಕಾರ್ಯಧ್ಯಕ್ಷರು ಸೇಡಂ

ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ನಾಯಕರನ್ನು ಬಳಸಿಕೊಂಡರು, ಬೆಳೆಸದೆ ಇರುವುದರಿಂದ ತಾಲೂಕಾ ಜಿಲ್ಲಾಮಟ್ಟದಲ್ಲಿ ಪ್ರಭಾವಿ ನಾಯಕರಗಳನ್ನಾಗಿ ಮಾಡುವುದಿಲ್ಲ.

ಮುಕ್ರಂ ಖಾನ್ ಜೆಡಿಎಸ್ ಹಿರಿಯ ಮುಖಂಡರು ಸೇಡಂ