ಬಾಲಯ್ಯನ ೯ ಕೋಟಿ ಸಾಲ ೮೧ ಕೋಟಿ ಆಸ್ತಿ

ಹಿಂದೂಪುರ,ಏ.೨೦-ಹಿಂದೂಪುರದ ಶಾಸಕ ,ನಟ ನಂದಮೂರಿ ಬಾಲಕೃಷ್ಣ ಆ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕೆ ಇಳಿಯುತ್ತಿದ್ದಾರೆ.ಈ ಕ್ಷೇತ್ರದಿಂದ ಸತತ ಎರಡು ಬಾರಿ ಗೆದ್ದಿದ್ದಾರೆ. ಈ ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ಹಂಬಲದಲ್ಲಿದ್ದಾರೆ.
ನಂದಮೂರಿ ಬಾಲಕೃಷ್ಣ ಪತ್ನಿ ವಸುಂಧರಾ ಅವರೊಂದಿಗೆ ಹಿಂದೂಪುರಂ ಆರ್‌ಒ ಕಚೇರಿಯಲ್ಲಿ ನಿನ್ನೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ನಾಮಪತ್ರದಲ್ಲಿ ನಂದಮೂರಿ ಬಾಲಕೃಷ್ಣ ಹೇಳಿರುವಂತೆ ೯ ಕೋಟಿಗೂ ಹೆಚ್ಚು ಸಾಲವಿದೆ. ಚುನಾವಣಾ ಅಫಿಡವಿಟ್ ನಲ್ಲಿ ತೋರಿಸಿರುವ ಬಾಲಯ್ಯ ಆಸ್ತಿ ವಿವರಕ್ಕೆ ಬಂದರೆ ಬಾಲಕೃಷ್ಣ ಅವರ ಆಸ್ತಿ ೮೧ ಕೋಟಿ ೬೩ ರೂ ಲಕ್ಷ, ಅವರ ಪತ್ನಿ ವಸುಂಧರಾ ಅವರ ಆಸ್ತಿ ಮೌಲ್ಯ ೧೪೦ ಕೋಟಿ ೩೮ ಲಕ್ಷ ೮೩ ಸಾವಿರ ತಮಗಿಂತಲೂ ಪತ್ನಿಯ ಆಸ್ತಿಯೇ ಹೆಚ್ಚಾಗಿರುವುದು ಕಂಡು ಬಂದಿದೆ. ಮತ್ತು, ಅವರ ಮಗ ಮೋಕ್ಷಜ್ಞನ ಆಸ್ತಿ ಮೌಲ್ಯ ೫೮ ಕೋಟಿ ೬೩ ಲಕ್ಷ ೬೬ ಸಾವಿರ ,ಬಾಲಯ್ಯ ಅವರ ಸಾಲ ೯ ಕೋಟಿ ೯ ಲಕ್ಷ ೨೨ ಸಾವಿರ,ಅವರ ಪತ್ನಿ ವಸುಂಧರಾ ಅವರ ಸಾಲ ೩ ಕೋಟಿ ೮೩ ಲಕ್ಷ ೯೮ ಸಾವಿರ ಇದೆ ಎಂದು ಚುನಾವಣಾ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.
ಈ ನಾಮಪತ್ರ ಸಲ್ಲಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಡಿಪಿ, ಬಿಜೆಪಿ, ಜನಸೇನೆ ಕಾರ್ಯಕರ್ತರು ಆಗಮಿಸಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಕೃಷ್ಣ ಅವರು ಹಿಂದೂಪುರಂ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಜತೆಗೆ ಗ್ರಾಮಗಳಲ್ಲಿ ಸಿಸಿ ರಸ್ತೆ, ಮೋರಿಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಬಾಲಕೃಷ್ಣ ಅವರು ಈ ಬಾರಿಯೂ ಭಾರಿ ಬಹುಮತದಿಂದ ಗೆಲ್ಲಿಸುವಂತೆ ಹಿಂದೂಪುರದ ಮತದಾರರಲ್ಲಿ ವಿನಂತಿಸಿದ್ದಾರೆ.