
ಹುವiನಾಬಾದ:ಅ.3: ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದಲ್ಲಿರುವ ಬಸವತೀರ್ಥ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರು ಮತ್ತು ಬಾಲಕಿಯರ ತಂಡ 2023-24ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ ತಾಲೂಕಾ ಮಟ್ಟದಿಂದ ಜಿಲ್ಲಾ ಹಾಗೂ ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅದರಂತೆ ಪ್ರೌಢಶಾಲೆಯ ಬಾಲಕರ ಹಾಗೂ ಬಾಲಕಿಯರ ತಂಡ 2023-24ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ ತಾಲೂಕಾ ಮಟ್ಟದಿಂದ ಜಿಲ್ಲಾ ಹಾಗೂ ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಅಲ್ಲದೇ 2023-24ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಾಲಕಿಯರ ತಂಡ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಮತ್ತು ಬಸವತೀರ್ಥ ವಿದ್ಯಾಪೀಠ ಪದವಿಪೂರ್ವ ಕಾಲೇಜಿನ ತಂಡ 2023-24ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾಕೂಟದ ಬಾಲ್‍ಬ್ಯಾಡ್ಮಿಂಟನ್‍ನಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಮೇಲಿನ ಎಲ್ಲಾ ವಿಜೇತ ತಂಡಗಳಿಗೆ ನಮ್ಮ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಕೇಶವರಾವ ತಳಘಟಕರ್ ಹಾಗೂ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಗುಂಡಯ್ಯ ತೀರ್ಥಾ ಹಾಗೂ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ವಿದ್ಯಾವತಿ ತೀರ್ಥಾ, ಶ್ರೀ ಚಂದ್ರಕಾಂತ ಬಿರಾದಾರ, ಪ್ರಾಚಾರ್ಯರಾದ ಶ್ರೀ ಮಸ್ತಾನ ಪಟೇಲ್ ಹಾಗೂ ದೈಹಿಕ ಶಿಕ್ಷಕರಾದ ಶ್ರೀ ಬಸವರಾಜ ದುಬಲಗುಂಡಿಕರ್, ಶ್ರೀ ಈರಣ್ಣಾ ಜೋತಗೊಂಡ, ಶ್ರೀ ರೇವಪ್ಪಯ್ಯಾಸ್ವಾಮಿ, ಶ್ರೀ ವಿರೇಶ ತೀರ್ಥಾ ಹಾಜರಿದ್ದರು ಮತ್ತು ವಿಜೇತ ತಂಡಗಳಿಗೆ ಸನ್ಮಾನಿಸಿ ಕ್ರೀಡಾಕೂಟದಲ್ಲಿ ನೀಡಿದ ಪ್ರಶಸ್ತಿ ಪತ್ರ ಮತ್ತು ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು.