ಬಾಲಕ ಕಾಣೆ

ಬಳ್ಳಾರಿ,ಮಾ.30: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲ್ ತಾಂಡದ 15ವರ್ಷದ ರಾಜೇಶ್‍ನಾಯ್ಕ ಎಂಬ ಹುಡುಗ ಮಾ.22 ರಿಂದ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲೆಯಾಗಿದೆ 5ಅಡಿ ಎತ್ತರ, ತೆಳುವಾದ ಮೈಕಟ್ಟು, ದುಂಡು ಮುಖ, ಕಪ್ಪು ಮೈ ಬಣ್ಣ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ಶರ್ಟ್ ಧರಿಸುತ್ತಾನೆ.ಈ ಹುಡುಗ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಗ್ರಾಮೀಣ ಪೊಲೀಸ್ ಠಾಣೆ ದೂ.ಸಂ: 08392-276461 ಮೊ.ಸಂ: 9480803049, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 08392-258100 ಗೆ ಸಂಪರ್ಕಿಸಲು ಕೋರಲಾಗಿದೆ.