ಆತ್ಯಾಚಾರಿ ಆರೋಪಿಗಳಿಗೆ ಶಿಕ್ಷೆ

ಮೈಸೂರು,ಏ.6:- ಎನ್ ಆರ್.ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗಳಿಬ್ಬರಿಗೆ ಜಿಲ್ಲಾ ಒಂದನೇ ತ್ವರಿತ ನ್ಯಾಯಾಲಯ 20ವರ್ಷ ಜೈಲು ಶಿಕ್ಷೆ ವಿಧಿಸಿ, 25ಸಾವಿರರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಎನ್.ಆರ್.ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯರಿಬ್ಬರ ಮೇಲೆ ಸ್ಥಳೀಯ ನಿವಾಸಿಗಳಾದ ಜೈಶಿವ ಮಹಾದೇವ(55), ಕೈಸರ್ ಪಾಷಾ(30) ಎಂಬವರು ಅತ್ಯಾಚಾರ ನಡೆಸಿದ್ದರು. ಪ್ರಕರಣ ಕುರಿತಂತೆ ಅಂದಿನ ಪೆÇಲೀಸ್ ಇನ್ಸಪೆಕ್ಟರ್ ಆಗಿದ್ದ ಬಸವರಾಜು, ಎಎಸ್‍ಐ ಗಂಗಾಧರ್ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ವ್ಯಕ್ತಿಗಳಿಬ್ಬರಿಗೆ 20ವರ್ಷ ಜೈಲು ಶಿಕ್ಷೆ 25ಸಾವಿರ ರೂ.ದಂಡ ವಿಧಿಸಿ, ನೊಂದ ಬಾಲಕಿಯರಿಗೆ ತಲಾ ನಾಲ್ಕು ಲಕ್ಷರೂ. ಪರಿಹಾರ ನೀಡಲು ಆದೇಶಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರಿ ಅಭಿಯೋಜಕರಾಗಿ ಮಂಜುಳಾ ವಾದ ಮಂಡಿಸಿದ್ದರು.