ಬಾಲಕಿ ಸಾವು :  ಕುಟುಂಬಕ್ಕೆ ಕೂಡ್ಲಿಗಿ ಶಾಸಕರಿಂದ  25ಸಾವಿರ ವೈಯಕ್ತಿಕ ನೆರವು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 4 :- ಇಂದು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಆಟೋ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಮ್ಮ ವೈಯಕ್ತಿಕ 25ಸಾವಿರ ರೂ ಪರಿಹಾರ ಧನ ನೆರವು ನೀಡಿ  ಸಾಂತ್ವನ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಮೊದಲ ಅಧಿವೇಶನದಲ್ಲಿ ಭಾಗಿಯಾಗಿರುವ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ರವರು ಕ್ಷೇತ್ರದ ಕೂಡ್ಲಿಗಿ ಪಟ್ಟಣಪಂಚಾಯತಿ ವ್ಯಾಪ್ತಿಯ ಅಮರದೇವರಗುಡ್ಡದ ಗೊಲ್ಲರಹಟ್ಟಿ ಗ್ರಾಮದಲ್ಲಿ ಶಾಲೆಗೆ ಹೊರಟಿದ್ದ ಸೃಷ್ಠಿ ಎಂಬುವ 4ನೇ ತರಗತಿ ವಿದ್ಯಾರ್ಥಿಗೆ ನಾಗರಹುಣಿಸೆ ಗ್ರಾಮದ ಕಡೆಯಿಂದ ಕೂಡ್ಲಿಗಿ ಕಡೆ ಹೊರಟಿದ್ದ ಆಟೋ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೇ ತೀವ್ರಗಾಯವಾಗಿ ಸಾವನ್ನಪ್ಪಿರುವ ಸುದ್ದಿ ತಿಳಿದು ಕಂಬನಿ ಮಿಡಿಯುವ ಮೂಲಕ ಸಾಂತ್ವನದ ಸಂದೇಶವನ್ನು ಮೃತ ಬಾಲಕಿ ಕುಟುಂಬಕ್ಕೆ ತಿಳಿಸಿದ ಶಾಸಕರು ಅಧಿವೇಶನ ಮುಗಿದ ನಂತರ ಮೃತ ಬಾಲಕಿ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅವರ ಆಪ್ತರಾದ ನಿವೃತ್ತ ಇಓ ಬಸಣ್ಣ, ನಿವೃತ್ತ ಶಿಕ್ಷಕ ಓಬಣ್ಣ,ಆಪ್ತ  ಸಹಾಯಕ ಮರಳುಸಿದ್ದಪ್ಪ,  ಹಾಗೂ ಇತರರು ಗೊಲ್ಲರಹಟ್ಟಿ ಮೃತ ಬಾಲಕಿ ಮನೆಗೆ ಭೇಟಿ ನೀಡಿ ಶಾಸಕರ ವೈಯಕ್ತಿಕ 25ಸಾವಿರ ರೂ ಪರಿಹಾರ ಧನವನ್ನು ವಿತರಿಸಿ ಶಾಸಕರ ಪರವಾಗಿ ಸಾಂತ್ವನ ತಿಳಿಸಿದರು ಈ ಸಂದರ್ಭದಲ್ಲಿ ಯರ್ರಿಸ್ವಾಮಿ,ಯಜಮಾನ ಚಿತ್ತಪ್ಪ,ಮಾರವಾಡಿ ಚಿತ್ತಪ್ಪ,ಸಣ್ಣಯ್ಯ, ದಳವಾಯಿ ನಾಗರಾಜ,ಬಸಣ್ಣ,ಕಡ್ಡಿ ಮಂಜುನಾಥ,ಗ್ಯಾಸ್ ವೆಂಕಟೇಶ್, ಮಲ್ಲಿಕಾರ್ಜುನ ಮತ್ತು ಇತರರು ಇದ್ದರು.
.