ಬಾಲಕಿ ಮೇಲೆ ವಾiಚಾರ: ಆರೋಪಿಗೆ 4 ವರ್ಷ ಸಜೆ

ಕೋಲಾರ,ಜು,೭- ಅಪ್ರಾಪ್ತ ಬಾಲಕಿಯ ಮೇಲೆ ವಾಮಚಾರ ಪ್ರಯೋಗಿಸಿ ಅಕೆಯನ್ನು ತನ್ನ ಮನೆಗೆ ಕರೆದು ಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿರುವ ಅರೋಪವು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಕ್ಷಾಧಾರಗಳನ್ನು ಅಧಾರಿಸಿ ಪೋಕ್ಸೊ ಕಾಯ್ದೆಯಡಿ ಅರೋಪಿಗೆ ೪ ವರ್ಷಗಳ ಸಜೆ, ಹಾಗೂ ೨೦ ಸಾವಿರ ರೂ ದಂಡ ವಿಧಿಸಿದೆ. ದಂಡವನ್ನು ಕಟ್ಟುವುದು ತಪ್ಪಿದಲ್ಲಿ ೬ ತಿಂಗಳ ಸಜೆಯ ತೀರ್ಪು ನೀಡಲಾಗಿದೆ.
ಕಳೆದ ವರ್ಷ ಏಪ್ರಿಲ್ ೬ ರಂದು ಮಾಲೂರು ತಾಲ್ಲೂಕಿನ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿರ್‍ಯಾದಿ ನೀಡಿದ ಪೋಕ್ಸೋ ಅರೋಪವನ್ನು ದಾಖಲಿಸಿ ಕೊಂಡು ಕಾಂಚಳಗ್ರಾಮದ ಅರೋಪಿ ಕುಮಾರ್ ಅಲಿಯಾಸ್ ಶಶಿಕುಮಾರ್ ಬಿನ್ ರಾಮಕೃಷ್ಣ ಎಂಬಾತನನ್ನು ವಶಕ್ಕೆ ಪಡೆಯಲಾಯಿತು. ನ್ಯಾಯಾಲಯದ ವಿಚಾರಣೆಯಲ್ಲಿ ಪಿರ್‍ಯಾದಿ ನೀಡಿರುವ ದೂರಿನಂತೆ ಅರೋಪಿಯು ಅಪ್ರಾಪ್ತ ಬಾಲಕಿ ಮೇಲೆ ವಾಮಚಾರ ಪ್ರಯೋಗಿಸಿ ತನ್ನ ಮನೆಗೆ ಕರೆದು ಕೊಂಡು ಹೋಗಿ ಅಕೆಗೆ ಪ್ರಾಣ ಬೆದರಿಕೆ ಹಾಕಿ ಅಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆಂಬ ಅರೋಪವು ಸಾಭೀತಾಗಿದೆ.
ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ದೇವಮಾನೆಯವರು ಜು ೫ ರಂದು ವಿಚಾರಣೆಯಲ್ಲಿ ಅರೋಪಿ ಕುಮಾರ್‌ಗೆ ೪ ವರ್ಷ ಸಜೆ, ೨೦ ಸಾವಿರ ರೂ ದಂಡ ತಪ್ಪಿದಲ್ಲಿ ೬ ತಿಂಗಳ ಸಜೆಯ ತೀರ್ಪನ್ನು ನೀಡಿದರು, ಪಿರ್‍ಯಾದಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಡಿ.ಲಲಿತಕುಮಾರಿ ವಾದ ಮಂಡಿಸಿದರು,