ಬಾಲಕಿ ಕಾಣೆ

ಧಾರವಾಡ,ಸೆ15- ಧಾರವಾಡ ಮಹಿಷಿ ರಸ್ತೆಯ ನಿವಾಸಿಯಾದ ಬಾಲಕಿ ಸವಿತಾ ಸುಣದೊಳಿ, (17 ವರ್ಷ) ಎಂಬುವವರು ಪಾತ್ರೆ ತೊಳೆಯುವ ಕೆಲಸಕ್ಕೆ ಹೋಗುತ್ತಿದ್ದು, ಕೆಲಸಕ್ಕೆ ಹೋಗಿ ಇಲ್ಲಿಯವರೆಗೂ ಮನೆಗೆ ಮರಳಿ ಬಂದಿರುವದಿಲ್ಲಾ ಎಂದು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅವರ ತಂದೆ ಈರಪ್ಪ ಸುಣದೋಳಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಎತ್ತರ 5 ಫೂಟ, 4 ಇಂಚು, ಮೈಯಿಂದ ಸಾದಾರಣ, ಅಗಲಮುಖ, ಗೋಧಿಗೆಂಪು ಮೈಬಣ್ಣ, ಏರು ಹಣೆ, ನೀಟಾದ ಮೂಗು, ಮನೆಯಿಂದ ಹೋಗುವಾಗ ಬಿಳಿ ಚಕ್ಸ್ ಟಾಪ್, ಕಪ್ಪು ಪ್ಯಾಂಟ್, ಕಪ್ಪು ಬಣ್ಣದ ಓಡನಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ವ್ಯಕ್ತಿ ಪತ್ತೆಯಾದಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ಅಥವಾ ಶಹರ ನಿಯಂತ್ರಣ ಕೊಠಡಿ ಹುಬ್ಬಳ್ಳಿ-ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗೆ ಅಥವಾ ಶಹರ ನಿಯಂತ್ರಣ ಕೊಠಡಿ ಹುಬ್ಬಳ್ಳಿ-ಧಾರವಾಡ ರವರಿಗೆ ತಿಳಿಸಲು ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆ ದೂರವಾಣಿ: 0836-2233513, ನಿಯಂತ್ರಣ ಕೊಠಡಿ, ಹುಬ್ಬಳ್ಳಿ-ಧಾರವಾಡ 0836-2233555/100. ಸಂಪರ್ಕಿಸುವಂತೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಬಸಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.