ಬಾಲಕಿ ಕಾಣೆ : ಪ್ರಕರಣ ದಾಖಲು

ಹೊಸಪೇಟೆ(ವಿಜಯನಗರ),ಜು.24 :  ಹೊಸಪೇಟೆ ನಗರದ ಛಲುವಾದಿ ಕೇರಿ ನಿವಾಸಿಯಾದ ಸುಮಾರು 15 ವರ್ಷ 6 ತಿಂಗಳ ಟಿ.ರೋಹಿಣಿ ಎಂಬ ಬಾಲಕಿ ಜು.05 ರಂದು ಕಾಣೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಬಾಲಕಿ ಚಹರೆ ಗುರುತು: 5ಅಡಿ ಎತ್ತರ, ಸಾದಾರಣ ಮೈಕಟ್ಟು,  ದುಂಡು ಮುಖ, ಕೆಂಪು ಮೈಬಣ್ಣ, ಕಪ್ಪು ಕೂದಲು, ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ, ನೀಲಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ.
ಕಾಣೆಯಾದ ಬಾಲಕಿ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 100ಕ್ಕೆ ಅಥವಾ ಪಿ.ಐ.ಪಟ್ಟಣ ಪೊಲೀಸ್ ಠಾಣೆ, ಹೊಸಪೇಟೆ :08394-224033/ 9480803070, ಡಿ.ಎಸ್.ಪಿ. ಹೊಸಪೇಟೆ :08394-224204, ಎಸ್.ಪಿ.ಬಳ್ಳಾರಿ :08392-258100 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.