ಬಾಲಕಿ ಆತ್ಮಹತ್ಯೆ ಪ್ರಕರಣ : ಆರೋಪಿ ಬಂಧನ

ಹುಮನಾಬಾದ್ :ಸೆ.24:ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡ ಗ್ರಾಮದಲ್ಲಿ ಕಳೆದ ಆಗಸ್ಟ್ 17 ರಂದು ಮನೆಯಲ್ಲಿ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು , ಬಾಲಕಿ ಆತ್ಮಹತ್ಯೆ ಗ್ರಾಮದ ಓರ್ವ ಯುವಕನ ನಿರಂತರ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿದೆ ಬಾಲಕಿಗೆ ಅದೇ ಗ್ರಾಮದ ಯುವಕನೋರ್ವ ಪರಿಚಯವಾಗಿ ಸಲುಗೆ ಬೆಳೆದಿದೆ .

ಬೀದರ್‍ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿ ಯುವಕನ ಜೊತೆಗೆ ಸಲಿಗೆಯಿಂದ ಅನೇಕ ಬಾರಿ ಮೊಬೈಲ್‍ನಲ್ಲಿ ಮಾತನಾಡಿದ್ದಾಳೆ .

ಬಾಲಕಿಯ ಭಾವಚಿತ್ರ ಕೂಡ ಯುವಕನ ಮೊಬೈಲ್‍ನಲ್ಲಿ ಸೆರೆಯಾಗಿದ್ದು , ಇದನ್ನೇ ಬಂಡವಾಳ ಮಾಡಿಕೊಂಡ ಅಂಬರೀಶ ಶಿರಸಿ ಎಂಬ ಯುವಕ ಬಾಲಕಿಗೆ ಹೆದರಿಸಿ ಹಣಕ್ಕಾಗಿ ಪೀಡಿಸಲು ಪ್ರಾರಂಭಿಸಿದ್ದ ಎನ್ನಲಾಗಿದೆ . ಬಡ ಬಾಲಕಿ ಒಂದೆರಡು ಬಾರಿ ಹಣವನ್ನೂ ಯುವಕನಿಗೆ ಫೆÇೀನ್‍ಪೇ ಮೂಲಕ ತಲುಪಿಸಿದ್ದಾಳೆ ಎನ್ನಲಾಗಿದೆ .

ಇದಕ್ಕೆ ಸುಮ್ಮನಾಗದ ಯುವಕ ಅಂಬರೀಶ್ , ಆಗಸ್ಟ್ 17 ರಂದು ಬಾಲಕಿಯ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ ಮತ್ತೆ ಹಣಕ್ಕಾಗಿ ಪೀಡಿಸಿದ್ದಾನೆ .

ಅಲ್ಲದೇ ಪೆÇೀನ್ ಮಾಡಿ ಎಲ್ಲ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿ ನಿನ್ನ ಹಾಗೂ ನಿನ್ನ ಮನೆಯವರ ಮಾನ ಕಳೆಯುವುದಾಗಿ ಹೆದರಿಸಿದ್ದಾನೆ ಎನ್ನಲಾಗಿದೆ . ಅದೇ ದಿನ ಮಧ್ಯಾಹ್ನ ಮನೆಯಲ್ಲಿ ನೇಣುಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .

ಅಂಬರೀಶ್ ಕಿರುಕುಳದಿಂದ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಮೃತ ಬಾಲಕಿಯ ತಾಯಿ ಆರೋಪಿಸಿದ್ದಾರೆ . ಕಳೆದೊಂದು ವರ್ಷದಿಂದ ಇವರಿಬ್ಬರು ಪ್ರೀತಿಸುತ್ತಿದ್ದರು , ಅದೇ ಪ್ರೀತಿಯ ಸಲುಗೆಯಿಂದ ಇಬ್ಬರು ಫೆÇೀಟೋ ತೆಗೆಸಿಕೊಂಡಿದ್ದಾರೆ .

ಕೆಲವು ವಿಡಿಯೋಗಳನ್ನು ಅಂಬರೀಶ್ ಶಿರಸಿ ಮಾಡಿಕೊಂಡು ತನ್ನ ಮೊಬೈಲ್‍ನಲ್ಲಿ ಇಟ್ಟುಕೊಂಡಿದ್ದ .

ನಂತರ ಬಾಲಕಿಗೆ ಹಣ ನೀಡುವಂತೆ ಪೀಡಿಸಿದ್ದಾನೆ . ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅಪೆÇ್ಲೀಡ್ ಮಾಡುವುದಾಗಿ ಹೆದರಿಸಿದಾನೆ ಎಂದು ಪೆÇೀಷಕರು ತಿಳಿಸಿದ್ದಾರೆ

ಬೇಮಳಖೇಡಾ ಪೆÇೀಲಿಸ್ ಠಾಣೆಯಲ್ಲಿ ಬಾಲಕಿಯ ತಾಯಿ ನೀಡಿದ ದೂರಿನಂತೆ ಅಂಬರೀಶ ನ ವಿರುದ್ಧ ಪೆÇಸೊ ಕಾಯ್ದೆ ನೇದರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ