ಬಾಲಕಿ ಅತ್ಯಾಚಾರ ಎಸಗಿದವನಿಗೆ 20 ವರ್ಷ ಜೈಲು

ಕಲಬುರಗಿ,ಮೇ 5: ಇಲ್ಲಿನ ಶಿವಾಜಿನಗರದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದವನಿಗೆ 20 ವರ್ಷ ಜೈಲು ಹಾಗೂ 20 ಸಾವಿರ ರೂ ದಂಡ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ 1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ತೀರ್ಪು ನೀಡಿ ಆದೇಶ ನೀಡಿದ್ದಾರೆ.
ನಗರದ ಸೋನಿಯಾ ಗಾಂಧಿ ನಗರದ ನಿವಾಸಿ ಎಸ್ ಕೆ ಸಲೀಂ ಅಲಿಯಾಸ್ ಶೇಖ್ ಸಲೀಂ ಅಹ್ಮದ್ ಶಿಕ್ಷೆಗೆ ಒಳಪಟ್ಟ ಅಪರಾಧಿ. ಅಪ್ರಾಪ್ತ ಬಾಲಕಿಗೆ 2021 ರಲ್ಲಿ ಮದುವೆ ಆಗುವದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದನು.ನಂತರ ಬಾಲಕಿಯನ್ನು ಹೈದರಾಬಾದಿಗೆ ಕರೆದುಕೊಂಡು ಹೋಗಿ ನಿರಂತರ ಅತ್ಯಾಚಾರ ಮಾಡಿದ್ದ ಎಂದು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ್ಪ ತುಪ್ಪದ ಅವರು ಸರಕಾರದ ಪರ ವಾದ ಮಂಡಿಸಿದ್ದರು.