ಬಾಲಕಿಯ ಕುಟುಂಬಕ್ಕೆ ನೆರವಾದ ಎಂಪಿಆರ್

ಹೊನ್ನಳ್ಳಿ.ನ.೯;ಆಕೆಯದ್ದು ಕಡು ಬಡ ಕುಟುಂಬ. ಮನೆಯಲ್ಲಿ ಕಿತ್ತುತಿನ್ನುವ ಬಡತನವಿದ್ದರೂ ಓದಿ ಉನ್ನತ ಮಟ್ಟಕ್ಕೆ ಏರ ಬೇಕೆಂಬ ಹಂಬಲ ಆಕೆಯದ್ದು. ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಸ್ವಗೃಹಕ್ಕೆ ಆಗಮಿಸಿದ್ದ ಆ ಬಾಲಕಿ ಕುಟುಂಬದಲ್ಲಿನ ಕಷ್ಟದ ಬಗ್ಗೆ ಶಾಸಕರ ಬಳಿ ವಿವರಿಸಿದ್ದಳಲ್ಲದೇ ತನಗೊಂದು ಮಿಕ್ಸಿ ನೀಡುವಂತೆ ಮನವಿ ಮಾಡಿದ್ದಳು..‌

ಮನೆಯಲ್ಲಿ ಸಾಂಬಾರ್ ಮಾಡಲು ರುಬ್ಬುವ ಯಂತ್ರ ವಿಲ್ಲದೇ ಅನಿವಾರ್ಯವಾಗಿ ನಾನು ಹಾಗೂ ನನ್ನ ಕುಟುಂಬಸ್ಥರು ಅನ್ನಕ್ಕೆ ಕಾರದ ಪುಡಿ ಉಪ್ಪು ಕಲಸಿಕೊಂಡು ಊಟ ಮಾಡುವುದಾಗಿ ಹೇಳಿದ್ದಳು.ಆ ಬಾಲಕಿ ಮಾತನ್ನು ಕೇಳಿ  ಮರುಗಿದ ಶಾಸಕ ಎಂ.ಪಿ.ರೇಣುಕಾಚಾರ್ಯ  ಆ ಬಾಲಕಿಯನ್ನು ಮನೆಗೆ ಕರೆಯಿಸಿ ಆಕೆಗೆ ಮಿಕ್ಸಿಯನ್ನು ಉಡುಗೊರೆಯಾಗಿ ನೀಡಿ, ಪುಡ್ ಕಿಟ್ ನೀಡಿ ಬಾಲಕಿಯ ಕಷ್ಟಕ್ಕೆ ಸ್ಪಂಧಿಸಿದ್ದಾರೆ.ಹೊನ್ನಾಳಿ ಪಟ್ಟಣದ ದೊಡ್ಕೇರಿ ನಿವಾಸಿಯಾಗಿರು ವಿದ್ಯಾ ಮೂರನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿದ್ದಾಳೆ. ಹುಟ್ಟಿದಾಗಿನಿಂದ ಬಡತನದ ಬೇಗೆಯನ್ನು ಅನುಭವಿಸಿರು ವಿದ್ಯಾ, ತನ್ನ ಕುಟುಂಬದ ನೋವನ್ನು ಶಾಸಕರ ಬಳಿ ಕುಟುಂಬದ ಸಂಕಷ್ಟವನ್ನು ವಿವರಿಸಿದ್ದಳು.ಬಾಲಕಿಯ ಕಷ್ಟವನ್ನು ಕಣ್ಣಾರೆ ಕಾಣದಿದ್ದರೂ ಆಕೆಯ ಮಾತುಗಳನ್ನು ಕೇಳಿ ಮರುಗಿದ ರೇಣುಕಾಚಾರ್ಯ ಆಕೆಯ ಕುಟುಂಬಕ್ಕೆ ಮಿಕ್ಸಿಯನ್ನು ಉಡುಗೊರೆಯಾಗಿ ನೀಡಿ ಫುಡ್ ಕಿಟ್ ನೀಡ ಬಾಲಕಿಗೆ ಕುಟುಂಬಕ್ಕೆ ಆಸರೆಯಾಗುವ ಮೂಲಕ ಮಾನವೀಯತೆ ಮರೆದಿದ್ದಾರೆ.