ಬಾಲಕಿಯ ಕತ್ತು ಸೀಳಿದ ಬಾಲಕ ಪೊಲೀಸ್ ವಶಕ್ಕೆ

ಕಲಬುರಗಿ,ಫೆ.23-ಶಾಲಾ ಬಾಲಕನೊಬ್ಬ ತನ್ನನ್ನು ಪ್ರೀತಿಸಲು ನೀರಾಕರಿಸಿದ ಬಾಲಕೀಯ ಕತ್ತು ಸೀಳಿದ ಘಟನೆ ತಾಲ್ಲೂಕಿನ ಬೆಳಮಗಿ ಗ್ರಾಮದಲ್ಲಿ ಗುರುವಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪ್ರಾಪ್ತ ಬಾಲಕನೊಬ್ಬನನ್ನು ನರೋಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಪ್ರಾಪ್ತರಾದ ಬಾಲಕ ಮತ್ತು ಬಾಲಕಿ ಕಮಲಾಪುರ ತಾಲ್ಲೂಕಿನ ವಿಕೆ ಸಲಗರ ಗ್ರಾಮದ ಖಾಸಗಿ ಪ್ರೌಢಶಾಲೆಯಲ್ಲಿ ಓದುತ್ತಿದ್ದರು. ಬೆಳಮಗಿ ಗ್ರಾಮದ ಇಬ್ಬರು ಪ್ರತಿದಿನ ಶಾಲೆಗೆ ಬಸ್‍ನಲ್ಲಿ ಸಂಚರಿಸುತ್ತಿದ್ದರು. ಗುರುವಾರ ಶಾಲಾ ಬಸ್ ಬಾರದೇ ಇರುವ ಹಿನ್ನೆಲೆಯಲ್ಲಿ ಬಾಲಕಿ ವಿಕೆ ಸಲಗರ ಆಳಂದ ಬಸ್‍ನಲ್ಲಿ ಸಂಚರಿಸುತ್ತಿದ್ದಳು. ಮಾರ್ಗ ಮಧ್ಯೆದಲ್ಲಿ ಬಸ್ ಅಡ್ಡಗಟ್ಟಿದ ಬಾಲಕ, ಬಸ್‍ನಿಂದ ಕೆಳಗಿಳಿಯುವಂತೆ ಬಾಲಕಿಯನ್ನು ಬೆದರಿಸಿದ್ದು,
ಪ್ರಯಾಣಿಕರು, ಬಸ್ ಚಾಲಕ, ನಿರ್ವಾಹಕರು ಕಾರಣ ಏನು ಎಂದು ಕೇಳುವಷ್ಟರಲ್ಲಿ ಚಾಕುವಿನಿಂದ ಆಕೆಯ ಕತ್ತು ಸೀಳಿ ಅಲ್ಲಿಂದ ಪರಾರಿಯಾಗಿದ್ದ. ಪ್ರಯಾಣಿಕರು, ಬಸ್ ಚಾಲಕರು ತಕ್ಷಣ ಬಾಲಕಿಯನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಆಸ್ಪತ್ರೆಯಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.