ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಖಂಡನೆ

ಕಲಬುರಗಿ ನ 4: ಜಿಲ್ಲೆಯ ಅಳಂದ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಚಿಂಚೋಳಿ ತಾಲೂಕ ಶಾಖೆ ವತಿಯಿಂದ ಪ್ರತಿಭಟನೆ ಮಾಡಿ ತಾಲೂಕ ಅಧ್ಯಕ್ಷ ಹಣಮಂತ ಪೂಜಾರಿ, ಅವರು ತಹಸೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಮಲ್ಲಪ್ಪ ಕರಕಟ್ಟಿ, ಭೀಮಷಾ ಮಾಳಪ್ಪನೋರ್, ಗೋಪಾಲ ಗಾರಂಪಳ್ಳಿ, ಗಂಗಾಧರ ಗಡ್ಡಿಮನಿ, ರಂಗಣ್ಣ ಚಂದ್ರಪಳ್ಳಿ, ನಾಗಪ್ಪ ಗಡಿಲಿಂಗದಲ್ಲಿ,ಸೂರ್ಯಕಾAತ್ ಪೂಜಾರಿ, ಅಂಜಪ್ಪ ಕಲ್ಲೂರ್, ಶರಣಪ್ಪ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಅಣವಾರ, ಉಲ್ಲಾಸ್ ಕೆರೊಳ್ಳಿ, ರಮೇಶ್ ವಾರ್ಕರ್,ರಾಜೇಂದ್ರ ಕನಕಪುರ, ತುಳಜಪ್ಪ, ತಿಪ್ಪಗೊಂಡ್,ಅಭಿಷೇಕ್ ಮಲಕನೂರ್,ಸುಧೀರ್ ಗೊಂಡ,ಕಾಶೀನಾಥ್ ಚಂದನಕೆರಾ, ರವಿ ಧನಗರ, ಅಭಿಷೇಕ್ ತಿಪಗೊಂಡ್ ಮುಂತಾದವರು ಉಪಸ್ಥಿತರಿದ್ದರು.