ಬಾಲಕಿಯರ ಸುರಕ್ಷಿತ ಕುರಿತು ಜಾಗೃತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.20: ನಗರದ ಸುಪ್ರಜಾ ಶಾಲೆಯಲ್ಲಿ ಲಿಯಾ ಸಂಸ್ಥೆಯಿಂದ ಬಾಲಕಿಯರ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ವೈದ್ಯಾಧಿಕಾರಿ ಡಾ.ಜ್ಯೋತಿ ಅವರು ಬಾಲಕಿಯರ ಸುರಕ್ಷಿತತೆ ಬಗ್ಗೆ ಉಪನ್ಯಾಸ ನೀಡಿ ತಿಳಿಸಿಕೊಟ್ಟರು.
ಲಿಯಾ ಸಂಸ್ಥೆಯ ಆರ್.ಕೆ‌.ಅಬ್ರಾಹಂ ಅವರು ಸ್ವಚ್ಚ ಬಳ್ಳಾರಿ ಸ್ವಸ್ಥ ಬಳ್ಳಾರಿ ಯೋಜನೆ  ಮತ್ತು ಅದರಲ್ಲಿ ಪಾಲ್ಗೊಳ್ಳುವಿಕೆ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ರೋಸೆಮೇರಿ, ಭಾಷಾ, ಸಂಜು, ಶಾಲೆಯ ಸಿಬ್ಬಂದಿ ಇದ್ದರು.

Attachments area