ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೌಚಾಲಯದ ಕೊರತೆ

 ಚಿತ್ರದುರ್ಗ. ಜು.೧೫; 500 ವಿಜ್ಞಾನ ವಿದ್ಯಾರ್ಥಿನಿಯರುಗಳು ಓದುತ್ತಿರುವ ಹೊಸ ಕಟ್ಟಡದಲ್ಲಿ ಕೇವಲ 3 ರೂಂ ಇರುವ ಹೊಸ ಶೌಚಾಲಯ ಕಟ್ಟಿರುವುದು, ವಿದ್ಯಾರ್ಥಿನಿಯರುಗಳಿಗೆ ಸಾಲದಾಗಿದೆ. ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳು ನಿರ್ಮಾಣವಾಗಬೇಕಾಗಿತ್ತು. 500 ಜನ ವಿಜ್ಞಾನ ವಿದ್ಯಾರ್ಥಿನಿಯರಿಗೆ 3 ರೂಂಗಳಿರುವ ಒಂದು ಶೌಚಾಲಯ ಕಟ್ಟಿರುವುದು ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ದೂರಿದ್ದಾರೆ.ವಿದ್ಯಾರ್ಥಿನಿಯರು ಶೌಚಾಲಯದ ಮುಂದೆ ಸರದಿಯಲ್ಲಿ ನಿಂತು, ಹತ್ತು ಹದಿನೈದು ನಿಮಿಷ ಸಮಯ ತೆಗೆದುಕೊಂಡು, ಮತ್ತೆ ತಮ್ಮ ಕ್ಲಾಸ್‌ಗೆ ಹೋಗುವುದರೊಳಗೆ, ಪಾಠದ ಸಮಯ ಮೀರಿರುತ್ತದೆ, ಅಷ್ಟರಲ್ಲಿ ಉಪನ್ಯಾಸಕರುಗಳು ಒಂದಿಷ್ಟು ಪಾಠವನ್ನ ಮುಗಿಸಿರುತ್ತಾರೆ. ಇದರಿಂದ ಮಕ್ಕಳಿಗೆ ಓದಿನಲ್ಲಿ ತೊಂದರೆಯಾಗುತ್ತದೆ. ಇದು ಒಂದು ದಿವಸದ ತೊಂದರೆ ಅಲ್ಲ, ದಿನ ನಿತ್ಯದ ತೊಂದರೆ. ಅದರಲ್ಲೂ ಮಳೆಗಾಲದಲ್ಲಿ ಮಕ್ಕಳು ಹೆಚ್ಚು ಶೌಚಾಲಯಗಳನ್ನ ಬಳಕೆಮಾಡುತ್ತಿರುತ್ತಾರೆ ಎಂದಿದ್ದಾರೆ.ವಿದ್ಯಾರ್ಥಿನಿಯರು ತರಗತಿ ಆದ ನಂತರ ಶೌಚಾಲಯದ ಮುಂದೆ ಸರದಿ ನಿಲ್ಲುವುದು ಸಾಮಾನ್ಯ ದೃಶ್ಯವಾಗಿದೆ. ಉಪನ್ಯಾಸಕರಿಗೂ ಸಹ ಕಿರಿಕಿರಿ ಉಂಟು ಮಾಡಿದೆ, ಕೆಲವೊಮ್ಮೆ ಶೌಚಾಲಯದಲ್ಲಿ ಸಮರ್ಪಕ ನೀರಿಲ್ಲದೆ, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಹೊಸ ಕಟ್ಟಡ ಕಟ್ಟುವಾಗಲೇ ಅದಕ್ಕೆ ವಿಸ್ತಾರವಾದ ಒಂದು ಶೌಚಾಲಯದ ಅಗತ್ಯತೆಯನ್ನು ಅರಿವಿಟ್ಟುಕೊಂಡು, ಕಟ್ಟಡವನ್ನು ಕಟ್ಟಬೇಕಾಗಿತ್ತು. ಹೆಚ್ಚು ಮಕ್ಕಳು ಹೊರಬಂದಾಗ. ಶೌಚಾಲಯದಲ್ಲಿ ರಶ್ ಅದಾಗ, ಕೆಲವು ವಿದ್ಯಾರ್ಥಿಗಳು ಹಳೆಯ ಕಟ್ಟಡದ ಹಿಂದೆ ಇರುವ ಶೌಚಾಲಯಕ್ಕೆ ಹೋಗಿ ಬರುತ್ತಾರೆ. ಮಳೆಗಾಲದಲ್ಲಿ ಕೆಸರು ಇರುವುದರಿಂದ, ಅಲ್ಲಿಯ ತನಕ ಹೋಗಿ ಬರಲು ಸಹ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಅಲ್ಲಿಗೆ ಹೋಗಿ ಬರಲು 15 ರಿಂದ 20 ನಿಮಿಷ ಸಮಯ ಬೇಕಾಗುತ್ತದೆ. ಕೆಲವೋಮ್ಮೆ ವಿದ್ಯಾರ್ಥಿನಿಯರುಗಳು, ಪೂರ್ತಿ ತರಗತಿಯ ಪಾಠವನ್ನೆ ಕಳೆದುಕೊಳ್ಳುತ್ತಾರೆ. ಇನ್ನೂ ಅವರು ಪರೀಕ್ಷೆ ಬರೆಯುದಾದರು ಹೇಗೆ ಎಂದು ಪ್ರಶ್ನಿಸಿ, ಜಿಲ್ಲೆಯ ಪಿಯುಸಿ ಪಲಿತಾಂಶ ಉತ್ತಮವಾಗುವುದು ಹೇಗೆ ಎಂದಿದ್ದಾರೆ.ಹೊಸ ಕಟ್ಟಡದ ಶೌಚಾಲಯದಲ್ಲಿ ಎಲ್ಲಾ ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳನ್ನ ನಿರ್ಮಿಸಿದ್ದಾರೆ, ಇವು ಸ್ವಚ್ಚವಾಗಿ ಇಟ್ಟುಕೊಂಡರೆ ಮಾತ್ರ ಚಂದ, ಇಲ್ಲದಿದ್ದರೆ ರೋಗಗ್ರಸ್ಥ. ಚರ್ಮದ ಖಾಯಿಲೆ ಬರುತ್ತದೆ. ಕೆಲವು ವಿದ್ಯಾರ್ಥಿನಿಯರುಗಳು ಸರಿಯಾಗಿ ನೀರು ಹಾಕುವುದಿಲ್ಲ, ಅದರ ಮೇಲೆ ಇನ್ನೋಬ್ಬ ವಿದ್ಯಾರ್ಥಿನಿ ಕುಳಿತುಕೊಳ್ಳಲು ಅಸಹ್ಯವಾಗುತ್ತದೆ. ಅದರೊಳಗೆ ಸ್ಯಾನಿಟರಿ ಪ್ಯಾಡ್ ಎಸೆಯುವ ತಿಳುವಳಿಕೆ ಇಲ್ಲದ ವಿದ್ಯಾರ್ಥಿನಿಯರುಗಳು ಉಂಟು. ಮೇಲಿನಿಂದ ನೀರು ಹಾಕಲು ಅಲ್ಲಿ ಬಕೆಟ್ ಮತ್ತು ತಂಬಿಗೆ ವ್ಯವಸ್ಥೆ ಬೇರೆ ಇಲ್ಲ ಎಂದು ಮಕ್ಕಳು ದೂರಿದ್ದಾರೆ.ಕಾಲೇಜಿನಲ್ಲಿ ನಿರ್ಮಿಸುವ ಶೌಚಾಲಯಕ್ಕೆ ಭಾರತೀಯ ಶೈಲಿಯ ಶೌಚಾಲಯವನ್ನ ನಿರ್ಮಿಸಬೇಕಾಗಿತ್ತು ಎಂದು ಬಳಕೆ ಮಾಡುವ ವಿದ್ಯಾರ್ಥಿಗಳ ದೂರು. ಸ್ವಚ್ಚತೆಯಿಲ್ಲದ ಕಮೋಡ್‌ಗ ಅಸಹ್ಯಕರವಾಗಿ ಹಾಗೂ ರೋಗ ಹರಡುವ ಸಾಧನವಾಗುತ್ತದೆ. ಕಟ್ಟಡದ ಒಳಗೂ ಸಹ ಒಂದೆರಡು ಶೌಚಾಲಯಗಳನ್ನು ನಿರ್ಮಿಸಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. ವಿದ್ಯಾರ್ಥಿಗಳು ಹೊರಗಡೆ ಬಂದು, ಶೌಚಾಲಯಕ್ಕೆ ಹೋಗಿ ಮತ್ತು ಕೊಠಡಿಗಳಿಗೆ ಬಂದು ಕೂರುವಂಥ ವ್ಯವಸ್ಥೆಯಿಂದ, ಮಣ್ಣು ಮತ್ತು ಕೆಸರಿನ ಕಾಲಿನಲ್ಲಿ ಕಟ್ಟಡದ ತುಂಬ ಓಡಾಡುತ್ತಿರುವುದರಿಂದ ಕಟ್ಟಡವು ಸಹ ಗಲೀಜಾಗುತ್ತಿದೆ. ಕಸ ಹೊಡೆಯರಿಗೂ ಸಹ ಸಾಕುಸಾಕಾಗಿ ಹೋಗಿದೆ. ನೂರಾರು ವಿದ್ಯಾರ್ಥಿನಿಯರು ಪ್ರÀತಿ ಸಾರಿ ಕೆಸರಿನಲ್ಲಿ ಓಡಾಡಿಕೊಂಡು, ಮತ್ತೆ ಕಟ್ಟಡದೊಳಗೆ ಬರುತ್ತಿರುವುದು ಅಷ್ಟು ಸಮಂಜಸವಲ್ಲ, ಇಲ್ಲವಾದರೆ ಶಾಲಾ ಕಟ್ಟಡದಿಂದ ಶೌಚಾಲಯಕ್ಕೆ ಹೋಗುವ ದಾರಿಗಾದರೂ ಒಂದಿಷ್ಟು ಕಲ್ಲಿನ ಹಾಸುಗಳನ್ನು ಹಾಕಿ, ಕೆಸರು ಕಟ್ಟಡದೊಳಗೆ ಬರದಂತೆ ಮಾಡಬೇಕಿತ್ತು. ಮಣ್ಣು ಕ್ಲಾಸ್ ರೂಮಿಗೆ ಬರದಂತೆ ತಡೆಯಬಹುದಾಗಿತ್ತು ಎಂದಿದ್ದಾರೆ. ಶೌಚಾಲಯದ ಸಮಸ್ಯೆ ಜೊತೆಗೆ ಕಟ್ಟಡದ ಪಕ್ಕದಲ್ಲಿರುವ ರಸ್ತೆಯಲ್ಲಾ ಮಳೆಗಾಲದಲ್ಲಿ ಕೆಸರಿನಿಂದ ಆವೃತ್ತವಾಗಿದ್ದು, ಮಳೆಯ ನೀರು ರಸ್ತೆಯಿಂದ ಬಂದರೆ ಸೀದಾ ಕಾಲೇಜಿನ ಆವರಣದೊಳಗೆ ನುಗ್ಗುತ್ತದೆ. ಕಾಲೇಜಿನ ಪಕ್ಕದಲ್ಲಿರುವ ಗಲೀಜು ರಸ್ತೆಗೆ ಒಂದಿಷ್ಟು ಜಲ್ಲಿಗಲ್ಲಿಗಳನ್ನ ಹಾಕಿ, ಮಳೆ ನೀರು ಹೊರ ಹೋಗುವಂತೆ ಚರಂಡಿ ನಿರ್ಮಿಸುವವರೆಗೂ ನೆಮ್ಮದಿ ಇಲ್ಲ. ರಸ್ತೆಯಲ್ಲಿ ಕಸ ಎಸೆಯುವರು ಮತ್ತು ಮೂತ್ರವಿಸರ್ಜನೆ ಮಾಡುವರ ಸಂಖ್ಯೆ ಇನ್ನೂ ನಿಂತಿಲ್ಲ ಎಂದಿದ್ದಾರೆ.ಸದ್ಯ ಕಾಲೇಜಿನ ಒಳಾಂಗಿಣ, ಮಳೆಗಾಲದಲ್ಲಿ ಕೆರೆಯ ಹೊಂಡದAತೆ ನಿರ್ಮಾಣವಾಗುತ್ತಿದೆ. ಮಳೆಗಾಲದಲ್ಲಿ ವಿದ್ಯಾರ್ಥಿನಿಯರು ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತಾ, ಎಚ್ಚರಿಕೆಯಿಂದ ಕೆಸರಲ್ಲಿ ಓಡಾಡಿಕೊಂಡು ಇರುವ ದೃಶ್ಯ ಶೋಚನೀಯವಾಗಿದೆ, ಇದರ ಬಗ್ಗೆ ಕ್ರಮ ತೆಗೆದುಕೊಂಡು, ಕಾಲೇಜಿನ ಹೊಸ ಕಟ್ಟಡಕ್ಕೆ ಇನ್ನೋಂದಿಷ್ಟು ಶೌಚಾಲಯದ ರೂಂಗಳನ್ನ ಕಟ್ಟಲಿ ಎಂದು ಪತ್ರಿಕೆ ಪ್ರಕಟಣೆ ಮುಖಾಂತರ ವಿನಂತಿಸಿಕೊAಡಿದ್ದಾರೆ.