ಸಂಜೆವಾಣಿ ವಾರ್ತೆ
ಹುಣಸೂರು,ಜು.18:- ಕೇವಲ ಡಾಕ್ಟರ್, ಇಂಜಿನಿಯರ್ ಆಗುವ ಕನಸು ಕಾಣುವ ಬದಲು ಇನ್ನೂ ಅನೇಕ ಕ್ಷೇತ್ರಗಳ ಅವಕಾಶಗಳು ಇದ್ದು ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಯೋಚಿಸುವ ಮೂಲಕ ದೇಶಕ್ಕೆ ಕಿರ್ತಿ ತರುವ ಕೆಲಸ ಮಾಡಿ ಎಂದು ಶಾಸಕ ಜಿ.ಡಿ.ಹರೀಶ್‍ಗೌಡ ಕರೆ ನೀಡಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನೀವುಗಳು ಈಗ ಪ್ರೌಡ ಶಿಕ್ಷಣವನ್ನು ಮುಗಿಸಿ ಕಾಲೇಜು ಶಿಕ್ಷಣಕ್ಕೆ ಬಂದಿದ್ದಿರಿ ಇಲ್ಲಿಂದ ನೀವುಗಳು ನಿಮ್ಮ ಭವಿಷ್ಯತ್ತಿನ ಮೌಲ್ಯಯುತ ಬದುಕಿಗೆ ಭದ್ರವಾದ ತಳಹದಿಯನ್ನು ಹಾಕಿಕೊಂಡು ಸಾಧನೆಗಳನ್ನು ಮಾಡಬೇಕಾಗುತ್ತದೆ ಇದಕ್ಕಾಗಿ ಶಿಕ್ಷಣದ ಜೋತೆಗೆ ಕೌಶಲ್ಯ ತರಬೆತಿಗಳು ಸಹ ಅನಿವಾರ್ಯ ಇದ್ದು ನೀಟ್ ಮತ್ತು ಸಿ.ಇ.ಟಿ ಪರೀಕ್ಷೇಗಳನ್ನು ಎದುರಿಸಲು ಸಹಕಾರಿಯಾಗಲಿದೆ ಎಂದ ಅವರು ಮುಂದಿನ ದಿನಗಳಲ್ಲಿ ಸುಸ್ಸಜ್ಜಿತವಿರುವ ನಿಮ್ಮ ಕಾಲೇಜಿನಲ್ಲಿ ತಾಲ್ಲೂಕು ಮಟ್ಟದ ನೀಟ್ ಮತ್ತು ಸಿ.ಇ.ಟಿ ಪರೀಕ್ಷೆಗಳ ತರಬೇತಿಯನ್ನು ಕಲ್ಪಿಸುವ ವ್ಯೆವಸ್ಥೆಯನ್ನು ಸ್ವಂತ ಖರ್ಚಿನಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯಿಂದ ಮಹಿಳೆಯರ ಉಚಿತ ಪ್ರಯಣದಿಂದಾಗಿ ಸಾರಿಗೆ ಬಸ್‍ಗಳಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಓಡಾಡಲು ತುಂಬಾ ಕಷ್ಟವಾಗಿದೆ ಅಲ್ಲದೆ ಕೆಲವು ಕಡೆ ಬಸ್ ವ್ಯವಸ್ಥೆಗಳಿಲ್ಲದೆ ಶಾಲಾ ಕಾಲೇಜುಗಳಿಗೆ ಹೋಗಲು ಸಾದ್ಯವಾಗದೆ ಏಷ್ಟೊ ದಿನ ಮನೆಯಲ್ಲೆ ಉಳಿಯುವ ಸಂದರ್ಭ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಶಾಸಕರನ್ನು ಕೇಳಿಕೊಂಡಾಗ ಶೀಘ್ರದಲ್ಲಿ ಸಾರಿಗೆ ವ್ಯೆವಸ್ಥೆಯನ್ನು ಸರಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಎ.ರಾಮೆಗೌಡ ಪ್ರಸ್ತಾವಿಕವಾಗಿ ಮಾತನಾಡುತ್ತ ಕಾಲೇಜು ಅಭಿವೃದ್ದಿ ಸಮಿತಿ ಸಿದ್ದ ಪಡಿಸಿದ ಬಿನ್ನವತ್ತಳಿಕೆ ಓದಿ ಹೆಣ್ಣು ಮಕ್ಕಳ ಕಾಲೇಜು ಅವರಣದಲ್ಲಿ ಕಂದಾಯ ಇಲಾಖೆಯ ಅರ್.ಐ ಮತ್ತು ವಿ.ಎ ಕಛೇರಿಗಳಿದ್ದು ಸಾರ್ವಜನಿಕರು ಒಳ ಬಂದು ವಿವಿಧ ಚಟುವಟಿಕೆಗಳಲ್ಲಿ ತೋಡಗುವುದರಿಂದ ಹೆಣ್ಣು ಮಕ್ಕಳಿಗೆ ಮುಜುಗರವಾಗುತ್ತಿದ್ದು ಈ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು, ಕಾಲೇಜಿನ ಸಾವಿರಾರು ವಿದ್ಯಾರ್ಥಿನಿಯರಿಗೆ ಬಿಸಿಲು ಮಳೆಯ ರಕ್ಷಣೆಗಾಗಿ ತೆರದ ಮೇಲ್ಚಾವಣಿ ಆಗಬೇಕು, ಕಾಲೇಜಿನ ಒಳ ಅವರಣದಲ್ಲಿ ಮಳೆ ನೀರಿನಿಂದ ಮಣ್ಣು ಕೊಚ್ಚಿ ಹೋಗುವುದನ್ನು ತಡೆಯಲು ಇಂಟರ್‍ಲಾಕ್ ವ್ಯೆವಸ್ಥೆಯಾಗಬೇಕು, ಸಾವಿರಾರು ಹೆಣ್ಣು ಮಕ್ಕಳಿರುವ ಈ ಕಾಲೆಜಿಗೆ ಮತ್ತೇರಡು ಶೌಚಾಲಯ ಬೇಕು, ವಿದ್ಯಾರ್ಥಿನಿಯರ ಉನ್ನತ್ರ ಶಿಕ್ಷಣಕ್ಕಾಗಿ ಪೂರಕ ಪರೀಕ್ಷೆಗಳಾದ ನೀಟ್ ಮತ್ತು ಸಿ.ಇ.ಟಿ ತರಬೇತಿಗಳ ತರಗತಿಗಳು ಪ್ರಾರಂಭವಾಗಬೇಕು, ಸಾವಿರಾರು ವಿದ್ಯಾರ್ಥಿನಿಯರು ಇರುವ ಈ ದೊಡ್ಡ ಕಾಲೆಜಿಗೆ ಮತ್ತೇರಡು ತರಗತಿಗಳ ಕೊಠಡಿಗಳ ಅವಶ್ಯಕತೆ ಇದ್ದು ಇದನ್ನು ವ್ಯವಸ್ಥೆ ಮಾಡಿಕೋಡಬೇಕು, ತರಗತಿಗಳಿಗೆ ಆರು ಪೆÇ್ರೀಜೇಕ್ಟರ್‍ಗಳ ಅವಶ್ಯಕತೆ ಇದ್ದು ಇದನ್ನು ವ್ಯವಸ್ಥೆ ಮಾಡಿಕೋಡಬೇಕು ಹಾಗು ಕಾಲೇಜಿನ ಪ್ರವೇಶ ದ್ವಾರಕ್ಕೆ ಕಾಮಾನು ಮತ್ತು ಅಕರ್ಷಕ ನಾಮಪಲಕವನ್ನು ಅಳವಡಿಸಿ ಕೋಡಬೇಕೆಂದು ಕಾಲೇಜು ಅಭಿವೃದ್ದಿ ಸಮಿತಿ ಮೂಲಕ ಶಾಸಕರಿಗೆ ನೀಡಿ ಆದಷ್ಟು ಬೇಗ ನಮ್ಮ ಕಾಲೆಜಿನ ಬೇಡಿಕೆಗಳನ್ನು ಪೂರೈಸಿಕೋಡಬೆಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಿಡಿಸಿ ಸಮಿತಿ ಸದಸ್ಯ ವಿರಭದ್ರಪ್ಪ ಮಾತನಾಡಿದರು ಹಾಗೂ ಕಾಲೇಜಿನ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ಎಲ್ಲ ವಿಬಾಗಗಳಲ್ಲಿ ಹೆಚ್ಚು ಅಂಕ ಪಡೆದು ತೆರ್ಗಡೆಯಾದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಕಾಲೇಜು ಅಭಿವೃದ್ದಿ ಸಮಿತಿಯ ಉಪಾದ್ಯಕ್ಷರು ಮತ್ತು ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ದ್ವೀತಿಯ ಪಿ.ಯು ವಿದ್ಯಾರ್ಥಿನಿಯರಿಂದ ಪ್ರಥಮ ವರ್ಷದ ಪಿ.ಯು ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರಲಾಯಿತ್ತು ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿಯಾದ ಶ್ರೀಮತಿ ನಾಗಮ್ಮರವರು ಶುಭ ಹಾರೈಸಿ ಪಠ್ಯೇತರ ಚಟುವಟಿಕೆಗಳ ಜೋತೆಗೆ ಶೈಕ್ಷಣಿಕವಾಗಿ ಹೆಚ್ಚು ಆಸಕ್ತಿ ತೋರಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಉನತ್ತ ಶ್ರೇಣಿಯಲ್ಲಿ ತೆರ್ಗಡೆಯಾಗಿ ಸಾಧನೆ ಮಾಡಿ ಎಂದು ಹಾರೈಸಿದರು. ವೇದಿಕೆಯಲ್ಲಿ ವಿದ್ಯಾರ್ಥಿನಿಯರಿಂದ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ಉಪಾದ್ಯಕ್ಷ ತಟ್ಟೆಕೆರೆ ಶ್ರೀನಿವಾಸ್, ನಗರಸಭಾ ಸದಸ್ಯ ಹರೀಶ್‍ಕುಮಾರ್, ಸಮಿತಿ ಸದಸ್ಯರುಗಳಾದ ಅಸ್ವಾಳು ಕೆಂಪೆಗೌಡ, ಕೆ.ಹೆಚ್.ವೀರಭದ್ರಪ್ಪ, ಮೈಸೂರುಮಿತ್ರ ಪತ್ರಿಕೆ ವರದಿಗಾರ ಕೆ.ಕೃಷ್ಣ ಸಂಜೆವಾಣಿ ಪತ್ರಿಕೆ ವರದಿಗಾರ ಕೆ.ಪ್ರತಾಪ್, ಶಿವಕುಮಾರ್, ಮಮತಾ ಗಜೇಂದ್ರ, ಅಶೋಕ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾದ್ಯಕ್ಷ ಧರ್ಮಾಪುರ ನಾರಾಯಣ್, ಮುಖಂಡರಾದ ಸತೀಶ್ ಪಾಪಣ್ಣ, ಹರವೆ ಶ್ರೀಧರ್, ಹರ್ಷವರ್ಧನ್, ಉಪನ್ಯಾಸಕರುಗಾಳಾದ ಚನ್ನ ಬಸವಣ್ಣ, ದೇವರ ಬೈಯಣ್ಣ, ರಾಜೇಶ್, ವಾಸು, ಚಿದಂಬರಂ, ಶಾಂತಕುಮಾರಿ, ಸದಾನಂದ ಸೇರಿದಂತೆ ಆನೇಕರು ಉಪಸ್ಥಿತರಿದ್ದರು.