ಬಾಲಕಿಯರ ಕಬ್ಬಡಿ ಸ್ಪರ್ಧೆಯಲ್ಲಿ ಅರಕೇರಾ ವಿದ್ಯಾರ್ಥಿನಿಯರು ಪ್ರಥಮ

ಅರಕೇರಾ.ಸೆ.೧೩- ದೇವದುರ್ಗ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ೨೦೨೨-೨೦೨೩ ನೇ ಸಾಲಿನ ತಾಲೂಕು ಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಪಟ್ಟಣದ ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿಗಳು ಬಾಲಕಿಯರ ಕಬ್ಬಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.
ತಾ.ದೈ.ಶಿ ಅಧಿಕಾರಿ ಎಂ.ವಿ ಕವಡಿಮಠ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ, ದೈ.ಶಿ ಸಂಘದ ಅಧ್ಯಕ್ಷ ಬಾಲಪ್ಪ ಭಾವಿಮನಿ, ನಿವೃತ್ತ ಶಿಕ್ಷಕ ಮಲ್ಲಯ್ಯ, ದೈಹಿಕ ಶಿಕ್ಷಕರಾದ ರಂಗನಾಥ, ಸೂರ್ಯಬಾಬು, ವಿದ್ಯಾರ್ಥಿಗಳಾದ ಶಿವಲೀಲಾ, ಭಾಗ್ಯಶ್ರೀ, ರಾಧಿಕಾ, ಪಲ್ಲವಿ, ರೇಣುಕಾ, ವಿಜಯಲಕ್ಷ್ಮೀ, ಜಾನಕಿ, ಭಾಗ್ಯಶ್ರೀ, ಕಮಲಾ ಇತರರಿದ್ದರು.