ಬಾಲಕಿಯರ ಕಬಡ್ಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.12 ತಾಲೂಕಿನ ಚಿಲಗೋಡು ಗ್ರಾಮದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ
ಬಾಲಕಿಯರ ಫೈನಲ್ ಕಬ್ಬಡ್ಡಿ ಪಂದ್ಯದಲ್ಲಿ ಸ ಹಿ ಪ್ರಾ ಶಾಲೆ ಏಣಿಗಿ ಬಾಲಕಿಯರು ಸ ಹಿ ಪ್ರಾ ಶಾಲೆ ಹಾಗೂ  ರಾಮನಗರ  ಹಗರಿಬೊಮ್ಮನಳ್ಳಿ ಬಾಲಕಿಯರನ್ನು ಪರಾಭವಗೊಳಿಸಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
 ಈ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಪರೀವಿಕ್ಷಕರು ಹಂಪಸಾಗರ ಗ್ರಾಂ ಪಂಚಾಯಿತಿ ಅಧ್ಯಕ್ಷರು ಎಸ್ಡಿಎಂಸಿ ಅಧ್ಯಕ್ಷರು ಸರ್ವಸದಸ್ಯರು ತಾಲ್ಲೂಕು ಪಂಚಾಯಿತಿ ಸದಸ್ಯರು ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರು  ಮತ್ತು ಊರಿನ ಮುಖಂಡರು, ಕ್ರೀಡಾ ಅಭಿಮಾನಿಗಳು  ಉಪಸ್ಥಿತರಿದ್ದರು.