ಬಾಲಕಿಯರಿಗೆ ಸಬಲೀಕರಣ ಅಭಿಯಾನ ಕಾರ್ಯಾಗಾರ ಮುಕ್ತಾಯ

ಕೊಲ್ಹಾರ: ಜೂ.7:ಬಾಲಕಿಯರಿಗೆ ಮೂಲಭೂತ ಶಿಕ್ಷಣ, ಆರೋಗ್ಯ, ಮತ್ತು ಆತ್ಮ ರಕ್ಷಣೆಯ ಬಗ್ಗೆ ಅರೀವು ಮೂಡಿಸಿ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ದೆಸೆಯಿಂದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಹಮ್ಮಿಕೊಂಡಿದ್ದ ಬಾಲಕಿಯರಿಗೆ ಸಬಲೀರಕರಣ ಅಭಿಯಾನ ಕಾರ್ಯಾಗಾರ ಮುಕ್ತಾಯಗೊಂಡಿತು.

ನಾಲ್ಕು ವಾರಗಳಕಾಲ ನಡೆದ ಕಾರ್ಯಾಗಾರದಲ್ಲಿ ಉಷ್ಣ ವಿದ್ಯುತ್ ಸ್ಥಾವರದ ಬಾಧಿತ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ ಸರಕಾರಿ ಹಾಗೂ ಸರಕಾರಿ ಅನುಧಾನಿತ ಪ್ರಾಥಮಿಕ ಶಾಲೆಗಳ 5ನೇ ತರಗತಿ ತೇರ್ಗಡೆಗೊಂಡಿದ್ಡ 40 ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ನಾಲ್ಕು ವಾರಗಳ ಕಾಲ ವಿದ್ಯಾರ್ಥಿನಿಯರಿಗೆ ಮೂಲಭೂತ ಶಿಕ್ಷಣ, ಆರೋಗ್ಯ, ಮತ್ತು ಆತ್ಮ ರಕ್ಷಣೆಯ ಬಗ್ಗೆ ಅರೀವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಎನ್‍ಟಿಪಿಸಿ ಚೀಪ್ ಜನರಲ್ ಮ್ಯಾನೇಜರ್ ಬಿದ್ಯಾ ನಂದ ಝಾ ಅದ್ಯಕ್ಷತೆ ವಹಿಸಿದ್ದರು, ಮಿತಾಲಿ ಮಹಿಳಾ ಸಮಿತಿಯ ಅದ್ಯಕ್ಷರಾದ ಶ್ರೀಮತಿ ಅಂಜು ಝಾ, ಕೆ.ಕೆ ಹೊತಾ ಜಿ, ಅಲೊಕೇಶ್ ಬೆನರ್ಜಿ, ಶ್ರೀನಿವಾಶ ಜಿ.ಎಮ್ ಕಲಾಯಾ ಎಸ್ ಮೂರ್ತಿ, ಎನ್‍ಟಿಪಿಸಿ ಕೂಡಗಿಯ ಸೂತ್ತಮುತ್ತಲಿನ ಗ್ರಾಮದ ಹಿರಿಯರಾದ ಎಚ್.ಜಿ ಕಮತಗಿ, ಆಶೊಕ ಗುಡದಿನ್ನಿ, ಸಿ.ಎಮ್ ಹಂಡಗಿ, ಎಸ್.ಜಿ ವಸ್ತ್ರದ, ರಾಘವೇಂದ್ರ ಕುಲಕರ್ಣಿ, ಎಸ್.ಜಿ ಗುಡದಿನ್ನಿ, ಲಾಲಸಾಬ ಚುಡಿಪರೊಶ್ ಹಾಗೂ ವಿದ್ಯಾರ್ಥಿನಿಯರ ಪಾಲಕರು ಮತ್ತು ಎನ್ ಟಿಪಿಸಿ ಕೂಡಗಿಯ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲಗೊಂಡಿದ್ದರು.