ಬಾಲಕಿಗೆ ನೆರವು ನೀಡಲು ಮನವಿ

ರಿಪ್ಪನ್‌ಪೇಟೆ. ಡಿ.೮- ಜಿ.ಬಿ.ಸೇಡ್ರೋಮೋ ರೋಗದಿಂದ ಬಳಲುತ್ತಿರುವ ಪುಟಾಣಿ ಸುಪ್ರಿತ ಜೀವನ್ಮರಣದ ಮಧ್ಯೆ ಬದುಕುವಂತಾಗಿರುವ ದುರಾವಸ್ಥೆಯಲ್ಲಿರುವ ಮಗುವಿನ ಸ್ಥಿತಿ ಎಂತಹವರನ್ನು ಹೃದಯ ಹಿಂಡುವಂತಾಗಿದೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನೇರಲಮನೆ ವಾಸಿ ಚಂದ್ರಮೂರ್ತಿ ಮತ್ತು ಶೃತಿ ಎಂಬುವವರಿಗೆ ಒಂದು ಹೆಣ್ಣು ಒಂದು ಗಂಡು ಮಗುವಾಗಿದ್ದು ಅದರಲ್ಲಿ ಹೆಣ್ಣು ಮಗಳಾದ ೩ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸುಪ್ರಿತ ಆಟವಾಡಿಕೊಂಡು ವ್ಯಾಸಂಗ ಮಾಡಬೇಕಾದ ಮಗಳು ಆಸ್ಪತ್ರೆಯ ಹಾಸಿಗೆಯಲ್ಲಿ ಕಾಲ ಕಳೆಯುವಂತಾಗಿದೆ ಈಗಾಗಲೇ ಈಕೆಗೆ ೩ ಆಪರೇಶನ್‌ಗಳಾಗಿದ್ದು ಸುಮಾರು ೭-೮ ಲಕ್ಷ ರೂ ಖರ್ಚು ಮಾಡಲಾದರು ಕೂಡ ಮಗಳು ಹಾಸಿಗೆಯಿಂದ ಮೇಲೆ ಏಳದ ಸ್ಥಿತಿಯಲ್ಲಿ ಇದ್ದಾಳೆಂದು ತಾಯಿ ಶೃತಿ ಮತ್ತು ತಂದೆ ಚಂದ್ರಮೂರ್ತಿ ತಮ್ಮ ಒಡಲಾದ ನೋವನ್ನು ಮಾದ್ಯಮದವರ ಮುಂದೆ ಹಂಚಿಕೊಂಡರು. ಈಗಾಗಲೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ನಿತ್ಯ ಸುಮಾರು ೨೦-೨೫ ಸಾವಿರ ರೂ ಖರ್ಚು ಬರುತ್ತಿದ್ದು ಮಗಳಿಗಾಗಿ ಅವರರಿವರ ಕೈ ಕಾಲು ಹಿಡಿದು ಸಾಲಸೂಲ ಮಾಡಿ ಮಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಈ ವರೆಗೂ ಸರ್ಕಾರ ನಮ್ಮ ಮಗಳ ಕಡೆ ಗಮನ ಹರಿಸದೆ ಇರುವುದು ಮತ್ತು ಸರ್ಕಾರದ ಸುವರ್ಣ ಆರೋಗ್ಯ ಮತ್ತು ರಾಷ್ಟ್ರೀಯ ಮಕ್ಕಳ ಅರೋಗ್ಯ ತಪಾಸಣೆ ಯೋಜನೆಯಡಿ ನನ್ನ ಮಗಳ ಚಿಕಿತ್ಸಾ ವೆಚ್ಚಕ್ಕಾಗಿ ಮನವಿಯನ್ನು ಮಾಡಲಾಗಿದ್ದರು ಕೂಡ ಈವರೆಗೂ ನಯಪೈಸೆ ಹಣ ಸಂದಾಯವಾಗಿರುವುದಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು. ಈ ಮಗುವಿಗೆ ಆರ್ಥಿಕ ನೆರವು ನೀಡುವವರು ಈ ಕೆಳಕಂಡ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್ ಅಕೌಂಟ್ ನಂಬರ್:-೦೫೩೪೧೦೧೦೨೨೨೬೫, ಪೋನ್ ಫೆ ನಂಬರ್: ೯೫೯೧೫೩೦೮೩೦ ಮೋಬೈಲ್ ನಂಬರ್:೯೫೯೧೫೩೮೯೮೦/೯೫೯೧೫೩೦೮೩೦ ನಂಬರಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದೆಂದು ಮನವಿ ಮಾಡಿದ್ದಾರೆ. ಇನ್ನಾದರು ಸಂಬಂಧಪಟ್ಟ ಶಿಕ್ಷಣ ಇಲಾಖೆ ಸರ್ಕಾರ ಗಮನ ಹರಿಸಿ ನ್ಯಾಯ ಕಲ್ಪಿಸಲು ಮುಂದಾಗುವರೆ ಕಾದುನೋಡಬೇಕಾಗಿದೆ.
ಸಮೀಪದ ನೇರಲಮನೆ ಗ್ರಾಮದ ಬಡ ಕುಟುಂಬದ ಪುಟಾಣಿ ಸುಪ್ರಿತ ನ್ಯುಮೋನಿಯಾ ಜಿ.ಬಿ. ಸೇಡ್ರೋಮೋ ರೋಗಕ್ಕೆ ತ್ತುತ್ತಾಗಿ ಹಾಸಿಗೆ ಹಿಡಿದಿರುವುದು.