ಐದು ಜನ ಬಾಲಕಾರ್ಮಿಕರ ರಕ್ಷಣೆ

ಬಳ್ಳಾರಿ, ನ.06: ನಗರದ ಡಾ.ರಾಜ್‌ಕುಮಾರ್ ರಸ್ತೆ, ವಡ್ಡರ ಬಂಡೆ ಹತ್ತಿರ ಪಂಚರ್ ಶಾಪ್, ಟಿಂಕರಿಂಗ್ ಶಾಪ್, ಗ್ಯಾರೇಜ್, ವುಡ್ ವರ್ಕ್ಸ್ ಶಾಪ್, ಮೆಕ್ಯಾನಿಕ್ ಶಾಪ್ ಗಳ ಮೇಲೆ ಇಂದು ಅಧಿಕಾರಿಗಳು ದಾಳಿನಡೆಸಿ 5 ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ

ಆ ಮಕ್ಕಳಲ್ಲಿ ಬಾಲಕನನ್ನು ಪೋಷಕರೊಂದಿಗೆ ಕಳುಹಿಸಿ, ಉಳಿದ 4 ಮಕ್ಕಳನ್ನು ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ.
ದಾಳಿ ನಡೆಸಿದ ನಂತರ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.